Mangalore: ರಸ್ತೆಯಲ್ಲೇ ವಾಹನ ಪಾರ್ಕಿಂಗ್; ಪಾದಚಾರಿಗಳಿಗೆ ಸಂಕಷ್ಟ
ಮಲ್ಲಿಕಟ್ಟೆ - ಆ್ಯಗ್ನೆಸ್ ರಸ್ತೆ ಬದಿಯಲ್ಲಿ ಫುಟ್‌ಪಾತ್ ಇಲ್ಲ !
Team Udayavani, Jan 6, 2025, 3:32 PM IST
ಮಲ್ಲಿಕಟ್ಟೆ: ಮಲ್ಲಿಕಟ್ಟೆ ವೃತ್ತದಿಂದ ಸಂತ ಆ್ಯಗ್ನೆಸ್ ಕಾಲೇಜು ಕಡೆಗೆ ಸಾಗುವ ರಸ್ತೆಯ ಬದಿಯಲ್ಲೇ ವಾಹನಗಳನ್ನು ಪಾರ್ಕ್ ಮಾಡುವುದು ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದಾಗಿ ಪಾದಚಾರಿಗಳು ರಸ್ತೆಯಲ್ಲಿಯೇ ನಡೆದುಕೊಂಡು ಹೋಗ ಬೇಕಾದ ಪರಿಸ್ಥಿತಿಯಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ.
ಮಲ್ಲಿಕಟ್ಟೆ ಪಾರ್ಕ್ ಬಳಿ ರಸ್ತೆ ಬಹಳಷ್ಟು ಕಿರಿದಾಗಿದ್ದು, ವಾಹನಗಳನ್ನು ಪಾರ್ಕ್ ಮಾಡುವುದರಿಂದ ಅರ್ಧದಷ್ಟು ರಸ್ತೆ ಪಾರ್ಕಿಂಗ್‌ಗೇ ಮಿಸಲು ಎನ್ನುವಂತಾಗಿದೆ. ಇದರಿಂದ ರಸ್ತೆಯಲ್ಲಿ ಸಾಗುವ ಇತರ ವಾಹನಗಳಿಗೆ ಅಡ್ಡಿಯಾಗಿದೆ. ರಸ್ತೆಯಲ್ಲಿ ಬಸ್, ಲಾರಿಗಳು ಸಾಗುವುದರಿಂದ ಕೆಲವೊಮ್ಮೆ ಇಕ್ಕಟ್ಟಿನ ಪರಿಸ್ಥಿತಿಯೂ ಉಂಟಾಗುತ್ತದೆ.
ಈ ಎಲ್ಲ ಕಾರಣದಿಂದಾಗಿ ರಸ್ತೆಯಲ್ಲಿ ವಾಹನ, ಪಾದಚಾರಿಗಳಿಗೆ ಸಾಗಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಸಂಬಂಧ ಪಟ್ಟವರು ಈ ಬಗ್ಗೆ ಗಮನ ಹರಿಸಿ ರಸ್ತೆ, ಫುಟ್‌ಪಾತ್ ನಿರ್ಮಾಣ ಸಹಿತ ಸಂಪೂರ್ಣ ರಸ್ತೆಯ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು, ಪಾದಚಾರಿಗಳು, ವಾಹನ ಸವಾರರು ಆಗ್ರಹಿಸಿದ್ದಾರೆ.
ರಸ್ತೆಯಲ್ಲಿ ನಡೆದಾಡಬೇಕಿದೆ
ಈ ರಸ್ತೆಯಲ್ಲಿ ಬಹುತೇಕ ಫುಟ್ ಪಾತ್ ಇಲ್ಲ. ಇದರಿಂದಾಗಿಯೂ ಪಾದಚಾರಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಾಕಷ್ಟು ಮಂದಿ ಇದೇ ರಸ್ತೆಯಲ್ಲಿ ನಿತ್ಯ ನಡೆದುಕೊಂಡು ಹೋಗುತ್ತಾರೆ. ಆದ್ದರಿಂದ ಅಪಾಯ ಸಾಧ್ಯತೆ ಹೆಚ್ಚಿದೆ. ಆ್ಯಗ್ನೆಸ್ ಕಡೆಯಿಂದ ಬರುವಾಗ ಮಲ್ಲಿಕಟ್ಟೆ ಜಂಕ್ಷನ್‌ಗಿಂತ ಮೊದಲು ಸಿಗುವ ತಿರುವಿನಲ್ಲಿ ರಸ್ತೆಯ ಅಗಲ ಬಹಳಷ್ಟು ಕಿರಿದಾಗಿದ್ದು, ಒಂದು ಪಾರ್ಶ್ವದಲ್ಲಿ ಮಾತ್ರ ಕಾಂಕ್ರೀಟ್ ಹಾಕಲಾಗಿದ್ದು, ಭೂ ಸ್ವಾಧೀನ ಸಮಸ್ಯೆಯಿಂದ ಇನ್ನೊಂದು ಪಾರ್ಶ್ವ ಹಾಗೇ ಉಳಿದಿದೆ. ಇದು ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು
Alankaru: ಮನೆಯಲ್ಲಿ ಬೆಂಕಿ ದುರಂತ: ಎಲ್ಲ ವಸ್ತುಗಳು ಸುಟ್ಟು ಕರಕಲು
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.