Mahakumbh Mela: ಪ್ರಯಾಗ್ ರಾಜ್ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು ಬೆದರಿಕೆ
ಪ್ರಯಾಗ್ ರಾಜ್ ನಲ್ಲಿ 2025ರ ಮಹಾಕುಂಭ ಯುದ್ಧಭೂಮಿಯಾಗಲಿದೆ!
Team Udayavani, Jan 6, 2025, 5:22 PM IST
ಲಕ್ನೋ: ಉತ್ತರಪ್ರದೇಶದ ಪ್ರಯಾಗ್ ರಾಜ್ (Prayagaraj) ನಲ್ಲಿ ಜನವರಿ 13ರಿಂದ ಫೆಬ್ರುವರಿ 26ರವರೆಗೆ ನಡೆಯಲಿರುವ ಮಹಾಕುಂಭಮೇಳಕ್ಕೆ ಅಡ್ಡಿಪಡಿಸುವುದಾಗಿ ಖಲಿ*ಸ್ತಾನಿ ಭಯೋ*ತ್ಪಾದಕ, ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಮುಖಂಡ ಗುರು ಪತ್ವಂತ್ ಸಿಂಗ್ ಪನ್ನು ಮತ್ತೆ ಬೆದರಿಕೆಯೊಡ್ಡಿರುವುದಾಗಿ ವರದಿ ತಿಳಿಸಿದೆ.
ಪನ್ನು ಬೆದರಿಕೆಯೊಡ್ಡಿರುವ ವಿಡಿಯೋದಲ್ಲಿ, ಪ್ರಯಾಗ್ ರಾಜ್ ಚಲೋಗೆ ಕರೆ ನೀಡಿರುವ ಪನ್ನು, ಹಿಂದುತ್ವ ಸಿದ್ದಾಂತವನ್ನು ಅಂತ್ಯಗೊಳಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲ ಲಕ್ನೋ ಮತ್ತು ಪ್ರಯಾಗ್ ರಾಜ್ ನಲ್ಲಿ ಖಲಿಸ್ತಾನಿ ಮತ್ತು ಕಾಶ್ಮೀರಿ ಬಾವುಟವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನಗೊಳಿಸಿ ಎಂದು ತನ್ನ ಬೆಂಬಲಿಗರಲ್ಲಿ ಮನವಿ ಮಾಡಿಕೊಂಡಿದ್ದಾನೆ. ಪ್ರಯಾಗ್ ರಾಜ್ ನಲ್ಲಿ 2025ರ ಮಹಾಕುಂಭ ಯುದ್ಧಭೂಮಿಯಾಗಲಿದೆ ಎಂದು ಘೋಷಿಸಿದ್ದಾನೆ.
ಕಳೆದ ಹತ್ತು ದಿನಗಳಲ್ಲಿ ಪನ್ನು ಮಹಾಕುಂಭಮೇಳ ಗುರಿಯಾಗಿರಿಸಿ ನೀಡಿರುವ ಎರಡನೇ ಬೆದರಿಕೆ ಇದಾಗಿದೆ. ಮಕರ ಸಂಕ್ರಾಂತಿ (ಜ.14), ಮೌನಿ ಅಮಾವಾಸೆ (ಜ.29) ಹಾಗೂ ಬಸಂತ್ ಪಂಚಮಿ (ಫೆ.03)ಯಂದು ಕುಂಭಮೇಳದಲ್ಲಿ ನಡೆಯಲಿರುವ ಪವಿತ್ರ ಶಾಹಿ ಸ್ನಾನದ ದಿನ ಅಡ್ಡಿಪಡಿಸುವುದಾಗಿ ಪನ್ನು ಈ ಮೊದಲು ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಬೆದರಿಕೆಯೊಡ್ಡಿದ್ದ.
ಪನ್ನು ಮೊದಲು ಬಿಡುಗಡೆಗೊಳಿಸಿದ್ದ ವಿಡಿಯೋ ವಿರುದ್ಧ ಅಖಿಲ ಭಾರತೀಯ ಅಖಾರ ಪರಿಷತ್ ನ ಮಹಾಂತ್ ರವೀಂದ್ರ ಪುರಿ, ಪನ್ನು ಬೆದರಿಕೆ ಹುಚ್ಚುತನದ್ದು, ಆತನೊಬ್ಬ ಮೂರ್ಖ ಎಂದು ತಿರುಗೇಟು ನೀಡಿದ್ದರು.
“ಒಂದು ವೇಳೆ ಪನ್ನು ಎಂಬ ಹೆಸರಿನ ವ್ಯಕ್ತಿ ಮಹಾಕುಂಭ ಪ್ರವೇಶಿಸಿದರೆ, ಹೊಡೆದು ಹೊರಗಟ್ಟುತ್ತೇವೆ. ನಾವು ಇಂತಹ ನೂರಾರು ಹುಚ್ಚರನ್ನು ನೋಡಿದ್ದೇವೆ” ಎಂದು ಮಹಾಂತ್ ರವೀಂದ್ರ ಪುರಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಉತ್ತರಪ್ರದೇಶ ಮತ್ತು ಪಂಜಾಬ್ ಪೊಲೀಸರ ಎನ್ ಕೌಂಟರ್ ನಲ್ಲಿ ಖಲಿ*ಸ್ತಾನಿ ಜಿಂದಾಬಾದ್ ಪಡೆಯ ಮೂವರು ಉ*ಗ್ರರು ಕೊನೆಯುಸಿರೆಳೆದಿದ್ದ ನಂತರ ಪನ್ನು ಈ ಬೆದರಿಕೆ ಹಾಕಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Mangaluru University: ಹೊಸ ಕೋರ್ಸ್ ಆರಂಭಕ್ಕೆ ವಿವಿ ಅನುಮತಿ ಅಗತ್ಯ
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.