Karkala; ಕೋರ್ಟ್ಗೆ ಹಾಜರಾದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ
Team Udayavani, Jan 6, 2025, 6:32 PM IST
ಕಾರ್ಕಳ: ಹಳೆ ಪ್ರಕರಣವೊಂದರ ಸಾಕ್ಷ್ಯ ಹೇಳಿಕೆ ನೀಡಲು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಮಲೈ ಅವರು ಸೋಮವಾರ(ಜ6) ಕಾರ್ಕಳ ಕೋರ್ಟ್ಗೆ ಹಾಜರಾದರು.
ಹಿಂದೆ ಕಾರ್ಕಳದಲ್ಲಿ ಎಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದ ಸಂದರ್ಭ ಸ್ಪೋಟಕ ವಸ್ತುಗಳನ್ನು ಹೊಂದಿದ್ದ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಸಿದ್ದರು. ಈ ಪ್ರಕರಣದ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿತ್ತು. ಅಣ್ಣಾಮಲೈ ಅವರ ಸಾಕ್ಷ್ಯ ಹೇಳಿಕೆ ಬಾಕಿ ಇದ್ದು, ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಈ ವೇಳೆ ಪುರಸಭೆ ಮಾಜಿ ಸದಸ್ಯ ಪ್ರಕಾಶ್ ರಾವ್, ಸ್ಥಳೀಯ ಪ್ರಮುಖರಾದ ಯೋಗೇಶ್ ನಾಯಕ್ ಮತ್ತು ವಕೀಲರೊಂದಿಗೆ ಮಾತುಕತೆ ನಡೆಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.