Kasaragod Crime News: ನೇಣು ಬಿಗಿದು ಯುವಕ ಆತ್ಮಹ*ತ್ಯೆ
Team Udayavani, Jan 6, 2025, 7:57 PM IST
ನೇಣು ಬಿಗಿದು ಯುವಕ ಆತ್ಮಹತ್ಯೆ
ಮುಳ್ಳೇರಿಯ: ಇಲ್ಲಿಗೆ ಸಮೀಪದ ಕಾರ್ಲೆ ನಿವಾಸಿ ಜಯರಾಮ ಶೆಟ್ಟಿ ಅವರ ಪುತ್ರ, ಗಾರೆ ಕಾರ್ಮಿಕ ಕೆ.ಮನೋಜ್(31) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೇಲಂಪಾಡಿ ಬಸ್ ಪ್ರಯಾಣಿಕರ ತಂಗುದಾಣ ಸಮೀಪದ ಹಳೆಯ ಕಟ್ಟಡದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದು, ಆದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಷ ಸೇವಿಸಿದ ಯುವತಿ ಸಾವು
ಮುಳ್ಳೇರಿಯ: ಇಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳ್ಳೂರು ಕುಂಜತ್ತೋಡಿ ನಿವಾಸಿ ಕೃಷ್ಣ ಅವರ ಪುತ್ರಿ ಪಿ.ಕೆ.ಜಯಶ್ರೀ (20) ಸಾವಿಗೀಡಾದರು. ಡಿ.29 ರಂದು ಮನೆಯಲ್ಲಿ ಇಲಿ ವಿಷ ಸೇವಿಸಿದ್ದರು. ಮೃತರು ಮಂಗಳೂರಿನ ಮೀನು ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಾಂಜಾ ಸಹಿತ ಇಬ್ಬರ ಬಂಧನ
ಉಪ್ಪಳ: ಕೋಡಿಬೈಲಿನಲ್ಲಿ ಕಾಸರಗೋಡು ಸ್ಪೆಷಲ್ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆಯಲ್ಲಿ 50 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು, ಈ ಸಂಬಂಧ ವೆಳ್ಳತ್ತಿರಿ ತಾಲೂಕಿನ ಪೊಳುಧನ ನಿವಾಸಿ ಮುಬಾಶಿರ್(27) ಮತ್ತು ಪುನಲೂರು ತಾಲೂಕಿನ ಮಾಳಕ್ಕೋಡ್ ನಿವಾಸಿ ವಿಘ್ನೇಶ್ ಪಿ(24)ನನ್ನು ಬಂಧಿಸಿದೆ. ಗಾಂಜಾ ನೀಡಿದ ಶಂಕೆಯಲ್ಲಿ ಕಿರಣ್ ವಿರುದ್ಧ ಕೇಸು ದಾಖಲಿಸಲಾಗಿದೆ.
ಮದ್ಯ ಸಹಿತ ಬಂಧನ
ಸೀತಾಂಗೋಳಿ: ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯ ಕೈವಶವಿರಿಸಿದ ನೆಲ್ಲಿಕಟ್ಟೆ ನಿವಾಸಿ ಗೋಪಾಲಕೃಷ್ಣ (50)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. 6 ಲೀಟರ್ ವಿದೇಶಿ ಮದ್ಯವನ್ನು ವಶಪಡಿಸಲಾಯಿತು.
ಮಟ್ಕಾ: ವ್ಯಕ್ತಿಯ ಬಂಧನ
ಬದಿಯಡ್ಕ: ಬಾಲಡ್ಕ ಬಸ್ ತಂಗುದಾಣ ಪರಿಸರದಿಂದ ಮಟ್ಕಾ ದಂಧೆಯಲ್ಲಿ ನಿರತನಾಗಿದ್ದ ಪೆರ್ಲಡ್ಕ ನಿವಾಸಿ ವಸಂತನ್(50) ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಈತನಿಂದ 2020 ರೂ. ವಶಪಡಿಸಲಾಗಿದೆ.
ಕಾರು ಢಿಕ್ಕಿ: ಬೈಕ್ ಸವಾರರಿಬ್ಬರಿಗೆ ಗಾಯ
ಮಂಜೇಶ್ವರ: ಉದ್ಯಾವರ ಮಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಢಿಕ್ಕಿ ಹೊಡೆದು ಬೈಕ್ ಸವಾರರಾದ ಬಾಯಾರು ಬಳ್ಳೂರು ನಿವಾಸಿಗಳಾದ ಕೃಷ್ಣ ಆಚಾರ್ಯ ಅವರ ಪುತ್ರ ಓಂಕಾರ್ ಆಚಾಯ(21) ಹಾಗು ದಾಮೋದರ ಆಚಾರ್ಯ ಅವರ ಪುತ್ರ ರಾಮಚಂದ್ರ ಆಚಾರ್ಯ(55) ಗಾಯಗೊಂಡಿದ್ದಾರೆ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಕೃಷಿಕನ ಶವ ಬಾವಿಯಲ್ಲಿ ಪತ್ತೆ
ಕಾಸರಗೋಡು: ಮನೆ ಪಕ್ಕದ ಅಡಿಕೆ ತೋಟದಲ್ಲಿರುವ ಬಾವಿಯಲ್ಲಿ ಕೃಷಿಕ, ಪೆರುಂಬಳ ಮೇಲತ್ತ್ ವೀಟಿಲ್ ಮುಲ್ಲಚ್ಚೇರಿ ಕೃಷ್ಣನ್ ನಾಯರ್(72) ಅವರ ಮೃತದೇಹ ಪತ್ತೆಯಾಗಿದೆ. ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಾಂಜಾ ಸಹಿತ ಬಂಧನ
ಕಾಸರಗೋಡು: ಹೊಸದುರ್ಗ ಪಡನ್ನಕ್ಕಾಡ್‌ನಲ್ಲಿ ಹೊಸದುರ್ಗ ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ 10 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು, ಈ ಸಂಬಂಧ ಪಡನ್ನಕ್ಕಾಡ್ ಕರುವಳಂ ನಿವಾಸಿ ಹನೀಫಾ ಕೆ.ಎಂ. ನನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.