60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Team Udayavani, Jan 6, 2025, 8:34 PM IST
ಯಾದಗಿರಿ: ”60 ಪರ್ಸೆಂಟ್ ಆರೋಪ ಮಾಡುತ್ತಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆರೋಪದಲ್ಲಿ ಯಾವುದೇ ಆಧಾರ, ಸತ್ಯಾಸತ್ಯತೆ ಇಲ್ಲ. ಆರೋಪ ಮಾಡುವಾಗ ಆಧಾರ ಬೇಕು” ಎಂದು ಲೋಕೋಪಯೋಗಿ ಸಚಿವ ಸತಿಶ್ ಜಾರಕಿಹೊಳಿ ಹೇಳಿದರು.
ಯಾದಗಿರಿ ಜಿಲ್ಲೆಯ ಸುದ್ದಿಗಾರರೊಂದಿಗೆ ಮಾತನಾಡಿ”ಮುಂಜಾನೆ ಎದ್ದು ಹತ್ತು ಆರೋಪ ಅವರು ಹೇಳುತ್ತಾರೆ, ನಾವು ಹೇಳುತ್ತೇವೆ ಎಂದಾದಾಗ ಆರೋಪಕ್ಕೆ ಗಟ್ಟಿಯಾದ ಕಾರಣ ಬೇಕಲ್ಲವೆ. ಗುತ್ತಿಗೆದಾರ ಸಚೀನ್ ಆತ್ಮಹ*ತ್ಯೆ ಪ್ರಕರಣ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಯಾಕೆ ಕೊಡಬೇಕು. ಬಿಜೆಪಿ ಅವರ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ, ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಬಳಕೆಯಾಗಿದೆ ಹೊರತು ನೇರವಾಗಿ ಪ್ರಿಯಾಂಕ್ ಖರ್ಗೆ ಕುಮ್ಮಕ್ಕಿನಿಂದ ಆತ್ಮಹತ್ಯೆ ಆಗಿಲ್ಲ, ಈ ಹಿಂದೆ ಈಶ್ವರಪ್ಪ ಅವರ ಹೆಸರು ಹೇಳಿ ಗುತ್ತಿಗೆದಾರ ಸಂತೋಪ ಆತ್ಮಹ*ತ್ಯೆ ಮಾಡಿಕೊಂಡಿರುವುದು ರಾಜ್ಯದ ಜನರಿಗೆ ಗೊತ್ತಿದೆ, ಅಂತಹ ಪ್ರಕರಣ ಇದಲ್ಲ ಎಂದು ಸಚಿವ ಜಾರಕಿಹೊಳಿ ಹೇಳಿದರು.
ಇನ್ನೂ ಮುಂದಿನ ಸಿಎಂ ವಿಚಾರವಾಗಿ ಉತ್ತಿರಿಸಿದ ಸಚಿವ ಸತೀಶ್ ಜರಕಿಹೊಳಿ ಕಾರ್ಯಕರ್ತರು ಘೋಷಣೆ ಕೂಗಿದರೆ ಸಿಎಂ ಆಗುವುದಿಲ್ಲ. ಬದಲಿಗೆ ಶಾಸಕರು ಕೂಗಬೇಕು. ಶಾಸಕರು ನಮ್ಮ ಪರವಾಗಿ ಘೋಷಣೆ ಕೂಗಿದಾಗ ಮಾತ್ರ ಮುಖ್ಯಮಂತ್ರಿ ಆಗಲುಸ ಸಾಧ್ಯ. ಸದ್ಯ ಸಿಎಂ ಬದಲಾವಣೆ ಪ್ರಸ್ತಾವೇ ಇಲ್ಲದೆ ಇದ್ದಾಗ ಅದರ ಬಗ್ಗೆ ಮಾತನಾಡುವುದು ವ್ಯರ್ಥ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.