Kho Kho ಇಂಡಿಯಾಕ್ಕೆ ಒಡಿಶಾ ಪ್ರಾಯೋಜಕತ್ವ
Team Udayavani, Jan 7, 2025, 6:25 AM IST
ಭುವನೇಶ್ವರ: ಭಾರತೀಯ ಹಾಕಿಗೆ ಪ್ರಾಯೋಜಕತ್ವ ನೀಡಿ ಯಶಸ್ಸಿನ ಪಥದತ್ತ ಕೊಂಡೊಯ್ದ ಬೆನ್ನಲ್ಲೇ ಒಡಿಶಾ ಸರಕಾರವೀಗ ಭಾರತದ ಖೋ ಖೋ ತಂಡಕ್ಕೂ 3 ವರ್ಷಗಳ ಪ್ರಾಯೋಜಕತ್ವ ನೀಡಲು ನಿರ್ಧರಿಸಿದೆ.
ಒಡಿಶಾದ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸೋಮವಾರ ಈ ಘೋಷಣೆ ಮಾಡಿದರು. ಇದು 15 ಕೋಟಿ ರೂ. ಮೊತ್ತದ ಪ್ಯಾಕೇಜ್ ಆಗಿದೆ. ಅದರಂತೆ 2025ರ ಜನವರಿ ಯಿಂದ ಮೊದಲ್ಗೊಂಡು 2027ರ ಡಿಸೆಂಬರ್ ತನಕ ಖೋ ಖೋ ಇಂಡಿಯಾಗೆ ವಾರ್ಷಿಕ 5 ಕೋಟಿ ರೂ. ಆರ್ಥಿಕ ನೆರವು ನೀಡಲಿದೆ.
“ಭಾರತೀಯ ಖೋ ಖೋ ಪಾಲಿಗೆ ಇದೊಂದು ಸ್ಮರಣೀಯ ಕ್ಷಣವಾಗಿದೆ. ನಮ್ಮ ಸ್ಥಳೀಯ ಕ್ರೀಡೆಗ ಳನ್ನು ಬೆಂಬಲಿಸುವ ಮೂಲಕ ನಾವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದಷ್ಟೇ ಅಲ್ಲ, ಕ್ರೀಡಾಪಟು ಗಳಿಗೆ ಹೆಚ್ಚಿನ ಅವಕಾಶವನ್ನು ಸೃಷ್ಟಿಸುತ್ತಿ ದ್ದೇವೆ’ ಎಂದು ಮಾಝಿ ಹೇಳಿದರು.
ಒಡಿಶಾ ಸರಕಾರದ ಈ ನಿರ್ಧಾರ ವನ್ನು ಭಾರತೀಯ ಖೋ ಖೋ ಫೆಡರೇಶನ್ ಅಧ್ಯಕ್ಷ ಸುಧಾಂಶು ಮಿತ್ತಲ್ ಸ್ವಾಗತಿಸಿದ್ದಾರೆ. “ಈ ನಿರ್ಧಾರದಿಂದ ನಮ್ಮ ಸಾಂಪ್ರದಾಯಿಕ ಕ್ರೀಡೆ ನೂತನ ಎತ್ತರ ತಲುಪಲಿದೆ. ಜಾಗತಿಕ ಮಟ್ಟದಲ್ಲಿ ಖೋ ಖೋವನ್ನು ಉತ್ತೇಜಿಸುವ ನಮ್ಮ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
CLP Meeting: ಜ.13ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.