Mangaluru: ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಸರಳ ವ್ಯಾಯಾಮ!
Team Udayavani, Jan 6, 2025, 11:29 PM IST
ಮಂಗಳೂರು: ನೀವು ವಿದೇಶ ಪ್ರವಾಸ ಮಾಡುತ್ತೀರಾ? ಅಥವಾ ದೇಶೀಯವಾಗಿ ದೂರದ ಪ್ರವಾಸ ಕೈಗೊಳ್ಳುತ್ತೀರಾ? ಹಾಗಾದರೆ ಇನ್ನು ಮುಂದೆ ವಿಮಾನ ನಿಲ್ದಾಣದಲ್ಲಿ 2 -3 ನಿಮಿಷ ಸರಳ ವ್ಯಾಯಾಮ ಮಾಡಬೇಕಾಗುತ್ತದೆ!
ವಿಮಾನ ಪ್ರಯಾಣದ ವೇಳೆ ಆಹ್ಲಾದಕತೆಯನ್ನು ಪಡೆಯಲು ಹಾಗೂ ದೇಹ-ಮನಸ್ಸಿಗೆ ಉಲ್ಲಾಸ ತುಂಬುವಂತೆ ಮಾಡುವ ಆಶಯದಿಂದ ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್ (ಸಿಐಎಸ್‌ಎಫ್) ಎಲ್ಲ ವಿಮಾನ ನಿಲ್ದಾಣಗಳಲ್ಲಿ ಸರಳ ವ್ಯಾಯಾಮ ಪರಿಕಲ್ಪನೆಯನ್ನು ಜಾರಿಗೆ ತಂದಿದೆ.
ಸುದೀರ್ಘ ಪ್ರಯಾಣಕ್ಕೆ ಮುನ್ನ ಕೆಲವು ಸರಳ ವ್ಯಾಯಾಮಗಳನ್ನು ಮಾಡುವಂತೆ ಹಾಗೂ ಆ ಮೂಲಕ ವಿಮಾನ ಯಾನ ಸಂದರ್ಭ ಪ್ರಯಾಣಿಕ ಅನುಭವ ಸುಗಮಗೊಳಿಸುವುದು ಈ ವ್ಯವಸ್ಥೆಯ ಉದ್ದೇಶ. ಕಳೆದ ಮೂರು ದಿನಗಳಿಂದ ಇದರ ಅಭ್ಯಾಸ ನಡೆಯುತ್ತಿದೆ.
ಆಸಕ್ತ ಪ್ರಯಾಣಿಕರಿಗೆ ಸರಳ ವ್ಯಾಯಾಮ ನಡೆಸಲಾಗುತ್ತದೆ. “ಸ್ಟ್ರಚ್ಚಿಂಗ್’ ನಂತಹ ಕಸರತ್ತು, ಸ್ನಾಯು ಸೆಳೆತ ಕಡಿಮೆ ಮಾಡುವಂತೆ ಮಾಡುವ ಕ್ರಮ, ರಕ್ತಪರಿಚಲನೆ ಹೆಚ್ಚಿಸುವುದು ಹಾಗೂ ಪ್ರಯಾಣಿಕನ ದೇಹದ ವಿವಿಧ ಅವಯವಗಳಿಗೆ ಸೂಕ್ತ ವಿಶ್ರಾಂತಿ ನೀಡುವುದು ಇದರಿಂದ ಸಾಧ್ಯವಾಗಲಿದೆ. ಸಿಐಎಸ್‌ಎಫ್ ಸಿಬಂದಿಯೇ ಇದನ್ನು ನಡೆಸಿಕೊಡಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.