Malaysia Super 1000 Badminton: ಯಶಸ್ವಿ ಆರಂಭಕ್ಕೆ ಮೊದಲ ಮೆಟ್ಟಿಲು
Team Udayavani, Jan 7, 2025, 6:28 AM IST
ಕೌಲಾಲಂಪುರ: ವರ್ಷಾರಂಭದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಕೌಲಾಲಂಪುರ ಸಜ್ಜಾ ಗಿದೆ. ಮಂಗಳವಾರ ಇಲ್ಲಿ “ಮಲೇಷ್ಯಾ ಸೂಪರ್ 1000′ ಟೂರ್ನಿ ಆರಂಭವಾಗಲಿದ್ದು, ಭಾರತೀ ಯರ ಯಶಸ್ವಿ ಆರಂಭಕ್ಕೆ ಮೊದಲ ಮೆಟ್ಟಿಲಾಗಿದೆ.
ಡಬಲ್ಸ್ ಆಟಗಾರರಾದ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಪುರುಷರ ಸಿಂಗಲ್ಸ್ನಲ್ಲಿ ಲಕ್ಷ್ಯ ಸೇನ್, ಎಚ್.ಎಸ್. ಪ್ರಣಯ್ ಪ್ರಿಯಾಂಶು ರಾಜಾವತ್ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ. ಆದರೆ ಇತ್ತೀಚೆಗಷ್ಟೇ ದಾಂಪತ್ಯ ಜೀವನ ಆರಂಭಿಸಿದ ಪಿ.ವಿ. ಸಿಂಧು ಈ ಪಂದ್ಯಾವಳಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಮಾಳವಿಕಾ ಬನ್ಸೋಡ್, ಆಕರ್ಷಿ ಕಶ್ಯಪ್, ಅನುಪಮಾ ಉಪಾಧ್ಯಾಯ ಅವರೇ ಭಾರತದ ಭರವಸೆ ಆಗಿದ್ದಾರೆ.
ಚಿರಾಗ್-ಸಾತ್ವಿಕ್ ಜೋಡಿ
ಚಿರಾಗ್-ಸಾತ್ವಿಕ್ ಕಳೆದ ವರ್ಷ ಇಲ್ಲಿ ಉತ್ತಮ ಪ್ರದರ್ಶನ ನೀಡಿಯೂ ಪ್ರಶಸ್ತಿ ಜಯಿಸುವಲ್ಲಿ ವಿಫಲರಾಗಿದ್ದರು. 2024ರಲ್ಲಿ ಒಟ್ಟು 4 ಫೈನಲ್ಸ್ ಆಡಿದ್ದ ಈ ಜೋಡಿ ಎರಡರಲ್ಲಿ ಚಾಂಪಿಯನ್ ಆಗಿತ್ತು. ಕೊನೆಯಲ್ಲಿ ನಡೆದ ಚೀನ ಮಾಸ್ಟರ್ನಲ್ಲಿ ಸೆಮಿಫೈನಲ್ ತನಕ ಸಾಗಿದ್ದರು. ಆರಂಭಿಕ ಸುತ್ತಿನಲ್ಲಿ ಚೈನೀಸ್ ತೈಪೆಯ ಮಿಂಗ್ ಚೆ ಲು-ಟಾಂಗ್ ಕೈ ವೀ ವಿರುದ್ಧ ಸೆಣಸಲಿದ್ದಾರೆ.
“ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಸೂಪರ್ 300′ ಪ್ರಶಸ್ತಿಯನ್ನೆತ್ತಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಲಕ್ಷ್ಯ ಸೇನ್ ಭಾರತದ ನೆಚ್ಚಿನ ಆಟಗಾರನಾಗಿದ್ದಾರೆ. ಎಚ್.ಎಸ್. ಪ್ರಣಯ್ ಕೂಡ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಇವರ ಮೊದಲ ಎದುರಾಳಿ ಕೆನಡಾದ ಬ್ರಿಯಾನ್ ಯಾಂಗ್. ಪ್ರಿಯಾಂಶು ರಾಜಾವತ್ ಚೈನೀಸ್ ತೈಪೆಯ ಲೀ ಶಿ ಫೆಂಗ್ ವಿರುದ್ಧ ಆಡಲಿದ್ದಾರೆ.
ವನಿತಾ ಸಿಂಗಲ್ಸ್ನಲ್ಲಿ ಮಾಳವಿಕಾ ಬನ್ಸೋಡ್ ಮಲೇಷ್ಯಾದ ಗೋಹ್ ಜಿನ್ ವೀ ವಿರುದ್ಧ, ಆಕರ್ಷಿ ಕಶ್ಯಪ್ ಡೆನ್ಮಾರ್ಕ್ನ ಜೂಲಿ ಡವಾಲ್ ಜೇಕಬ್ಸನ್ ವಿರುದ್ಧ, ಅನುಪಮಾ ಉಪಾಧ್ಯಾಯ ಥಾಯ್ಲೆಂಡ್ನ ಪೋರ್ಣಪವೀ ಚೊದುವೋಂಗ್ ವಿರುದ್ಧ ಮೊದಲ ಸುತ್ತಿನ ಅಗ್ನಿಪರೀಕ್ಷೆ ಎದುರಿಸುವರು.
ವನಿತಾ ಡಬಲ್ಸ್ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಥಾಯ್ಲೆಂಡ್ನ ಓರ್ನಿಚಾ ಜೊಂಗÕಥಪೋರ್ನ್ಪಾರ್ನ್-ಸುಕಿಟಾ ಸುವಾಚೈ ವಿರುದ್ಧ ಆಡಲಿಳಿಯಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.