ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಅಕ್ರಮ ವಲಸಿಗರ ಸೆರೆ

Team Udayavani, Jan 7, 2025, 8:00 AM IST

Bangla-immigrtnst

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಪ್ರಜೆಗಳನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ಅವರ ಸರ ಕಾ ರ ಪತನವಾದ ಬಳಿಕ ಭಾರತಕ್ಕೆ ಬಾಂಗ್ಲಾ ವಲಸಿಗರ ಪ್ರಮಾಣ ಹೆಚ್ಚಾಗಿದ್ದು, ಇದು ದೇಶದ ಆಂತರಿಕ ಭದ್ರತೆಗೆ ಸಮಸ್ಯೆ ತಂದೊಡ್ಡುತ್ತಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶಿಗರು ಭಾರತಕ್ಕೆ ಏಕೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಾರೆ? ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಸರಕಾರಗಳು ಏನು ಮಾಡುತ್ತಿವೆ? ಅಕ್ರಮ ವಲಸಿಗರಿಂದ ಉಂಟಾಗುತ್ತಿರುವ ಸಮಸ್ಯೆಗಳೇನು ಎಂಬುದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಕಾವಲಿಗೆ ನಿಂತಿರುವ ಸೈನಿಕರ ಕಣ್ಣು ತಪ್ಪಿಸಿ, ಇಲ್ಲವೇ ವ್ಯಾಪಾರಿಗಳ ಸೋಗಿನಲ್ಲಿ ಗಡಿ­ಯನ್ನು ದಾಟಿ, ಬಳಿಕ ತಮ್ಮ ಹೆಸರು, ವಿಳಾಸ, ಗುರುತು ಎಲ್ಲ ವನ್ನೂ ಮರೆಮಾಡಿಕೊಂಡು ಭಾರತಕ್ಕೆ ಪ್ರತೀ ವರ್ಷ ಸಾವಿ­ರಾರು ಜನ ಬರುತ್ತಿದ್ದಾರೆ. ಗಡಿ ಭಾಗದಲ್ಲಿ ಸಿಲುಕಿಕೊಂಡವರನ್ನು ಭದ್ರತಾಪಡೆಗಳು ತತ್‌ಕ್ಷಣವೇ ಹಿಂದಕ್ಕೆ ಕಳುಹಿಸಿದರೆ, ಅಕ್ರಮ ಮಾರ್ಗಗಳ ಮೂಲಕ ಭಾರತವನ್ನು ಪ್ರವೇಶಿಸುವವರು, ಮರೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಭಾರತದಲ್ಲಿ ಅಕ್ರಮ­ವಾಗಿ ನೆಲೆಸಿರುವವರಿಂದ ಭಾರತದ ಭದ್ರತೆಗೆ ಧಕ್ಕೆ ಉಂಟಾಗ­ಬಹುದು ಎಂಬ ಕಾರಣಕ್ಕೆ ಭದ್ರತಾ ಪಡೆಗಳು ಇತ್ತೀಚಿನ ದಿನಗಳಲ್ಲಿ ತಮ್ಮ ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ. ಹೀಗಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಕ್ರಮ­ವಾಗಿ ನೆಲೆಸಿದ್ದ ಬಾಂಗ್ಲಾದೇಶ ಪ್ರಜೆಗಳನ್ನು ಪತ್ತೆ ಮಾಡಲಾಗಿದೆ.

ಬಾಂಗ್ಲಾದಲ್ಲಿನ ಧಾರ್ಮಿಕ, ರಾಜಕೀಯ ಪಲ್ಲಟ
ಶೇಖ್‌ ಹಸೀನಾ ಅವರ ಸರಕಾರ ಪತನವಾದ ಬಳಿಕ ಬಾಂಗ್ಲಾ ದೇಶದಲ್ಲಿ ರಾಜಕೀಯ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಪಾಕಿಸ್ಥಾನದಿಂದ ಬೇರೆಯಾದ ಬಳಿಕ ಮುಸ್ಲಿಂ ರಾಷ್ಟ್ರವಾದರೂ ಪಾಕಿ ಸ್ಥಾ ನದಲ್ಲಿದ್ದಂತೆ ಧಾರ್ಮಿಕ ಒತ್ತಡ ಬಾಂಗ್ಲಾದಲ್ಲಿ ಇರಲಿಲ್ಲ. ಆದರೆ ಹಸೀನಾ ಸರಕಾರ ಬಿದ್ದ ಬಳಿಕ ಬಾಂಗ್ಲಾ ಮೂಲ ಭೂತವಾದಿಗಳ ಕೈಗೆ ಸಿಲುಕಿಕೊಂಡಿದೆ. ಧಾರ್ಮಿಕವಾಗಿ ಕಟ್ಟಲೆಗಳನ್ನು ಹೆಚ್ಚು ಮಾಡಲಾಗಿದೆ. ಅಲ್ಲದೇ ಸರಕಾರ ಕುಸಿತ ಕಂಡಿರುವುದರಿಂದ ಆರ್ಥಿಕವಾಗಿಯೂ ಬಾಂಗ್ಲಾ ಕುಸಿತ ಕಂಡಿದ್ದು, ಜನ ಜೀವನ ದುಸ್ತರವಾಗಿದೆ. ಹೀಗಾಗಿ ಇದರಿಂದ ತಪ್ಪಿಸಿಕೊಳ್ಳಲು ಬಾಂಗ್ಲಾದೇಶಿಗರು ಅಕ್ಕಪಕ್ಕದ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.

ವಲಸಿಗರಿಗೆ ಭಾರತವೇ ನಂ.1 ಆಯ್ಕೆ!
ಭಾರತದೊಂದಿಗೆ ಮಾತ್ರ ಬಾಂಗ್ಲಾದೇಶ ಭೂ ಗಡಿಯನ್ನು ಹೊಂದಿದೆ. ಅದು ಬರೋಬ್ಬರಿ 4096 ಕಿ.ಮೀ. ಇಷ್ಟು ಬೃಹತ್‌ ಗಡಿಯ ಬಹುತೇಕ ಪ್ರದೇಶದಲ್ಲಿ ಅರಣ್ಯಗಳಿವೆ. ಹೀಗಾಗಿಯೇ ವಲಸಿಗರಿಗೆ ಭಾರತ ಮೊದಲ ಆಯ್ಕೆಯಾಗಿದೆ. ಅಷ್ಟೇ ಅಲ್ಲದೇ 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಬಹುತೇಕ ನಿರಾಶ್ರಿತರಿಗೆ ಭಾರತ ನೆಲೆ ನೀಡಿತ್ತು. ಅಲ್ಲದೇ ಅವರನ್ನು ಉತ್ತಮವಾಗಿ ನಡೆಸಿಕೊಂಡಿತ್ತು. ಈ ಕಾರಣಕ್ಕೂ ಒಮ್ಮೆ ಭಾರತವನ್ನು ಪ್ರವೇಶಿಸದರೆ ಹೇಗಾದರೂ ಬದುಕು ಕಟ್ಟಿಕೊಳ್ಳಬಹುದು ಎಂದು ಬಾಂಗ್ಲಾದೇಶಿಗರು ಚಿಂತಿಸುತ್ತಾರೆ. ಅಲ್ಲದೇ ಬಾಂಗ್ಲಾದೇಶಕ್ಕಿಂತ ಭಾರತದ ಆರ್ಥಿಕತೆ ಉತ್ತಮವಾಗಿ­ರುವುದು ಸಹ ಬಾಂಗ್ಲಾದೇಶಿಗರನ್ನು ಆಕರ್ಷಿಸುತ್ತಿದೆ.

ಏಜೆಂಟರಿಗೆ ಹಣ ಕೊಟ್ಟು ಭಾರತಕ್ಕೆ ಪ್ರವೇಶ
ಗಡಿ ಭದ್ರತಾ ಪಡೆಯ ಯೋಧರು ಹಗಲು ರಾತ್ರಿಯೆನ್ನದೇ ಗಡಿ­ಯಲ್ಲಿ ಕಾವಲಿದ್ದರೂ ಸಹ ಅವರ ಕಣ್ತಪ್ಪಿಸಿ, ಬಾಂಗ್ಲಾ ಪ್ರಜೆಗಳು ಅಕ್ರಮ­ವಾಗಿ ಭಾರತಕ್ಕೆ ಪ್ರವೇಶಿಸು­ತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಅರಣ್ಯಗಳ ಮೂಲಕ ಇವ ರನ್ನು ಭಾರತಕ್ಕೆ ರವಾನಿಸಲು ಬಹ ಳಷ್ಟು ಏಜೆನ್ಸಿಗಳು ಬಾಂಗ್ಲಾದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ವಲಸಿಗರನ್ನು ಗಡಿ ದಾಟಿ ಸುವುದಷ್ಟೇ ಅಲ್ಲದೇ, ಅವರನ್ನು ಭಾರತದ ಭದ್ರತಾ ಪಡೆಗಳ ಕಣ್ತಪ್ಪಿಸಿ ಗಡಿಯೊಳಗೂ ಕಿ.ಮೀ.ಗಟ್ಟಲೆ ಸಾಗಿಸುವ ಕೆಲಸವನ್ನು ಈ ಏಜೆನ್ಸಿಗಳು ಮಾಡು ತ್ತವೆ. ಅರಣ್ಯ, ಗುಡ್ಡಗಾಡು ದಾಟಿ ಹೋಗಲು 7,000-8,000 ರೂ ಹಾಗೂ ಜಲಮಾರ್ಗದ ಮೂಲಕ ಗಡಿ ದಾಟಲು 2ರಿಂದ 3,000 ರೂ ಹಣವನ್ನು ಏಜೆನ್ಸಿಯವರು ಪಡೆಯುತ್ತಾರೆ.

ಒಂದೇ ಕಡೆ ನೆಲೆ ನಿಲ್ಲದೆ ಅಲೆದಾಟ
ಅಕ್ರಮವಾಗಿ ಭಾರತವನ್ನು ಪ್ರವೇಶಿಸುವ ಬಾಂಗ್ಲಾದೇಶಿಗರು, ವ್ಯಾಪಾರಿಗಳು ಅಥವಾ ಕಾರ್ಮಿಕರ ಸೋಗಿ­ನಲ್ಲಿ ಸ್ಥಳೀಯ ಭಾಷೆಯಲ್ಲಿ ಮಾತನಾಡುತ್ತಾ ಒಂದಷ್ಟು ವರ್ಷ ದೇಶದ ಹಲವು ಪ್ರದೇಶ­ಗಳಲ್ಲಿ ವಾಸ ಮಾಡಲು ಆರಂಭಿಸುತ್ತಾರೆ. ಬಳಿಕ ಯಾವುದೋ ಕೆಲಸ ಮಾಡುತ್ತಾ, ಸ್ಥಳೀಯರಿಗೆ ಯಾವುದೇ ಅನುಮಾನ ಬಂದಿಲ್ಲ ಎಂಬುದು ಅರಿವಾದ ಬಳಿಕ ಅಲ್ಲೇ ನೆಲೆ ನಿಲ್ಲುತ್ತಾರೆ. ಭದ್ರತಾ ಪಡೆಗಳ ಕಣ್ತಪ್ಪಿ­ಸಲು ಮೊದಲ ಒಂದಷ್ಟು ವರ್ಷ ಅಕ್ರಮ ವಲಸಿಗರು ಒಂದೆಡೆ ನೆಲೆ ನಿಲ್ಲದೇ ಅಲೆದಾಟ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಪಶ್ಚಿಮ ಬಂಗಾಲ ಅಥವಾ ಅಸ್ಸಾಂನಲ್ಲಿ ಭಾರತ ಪ್ರವೇಶಿಸುವವರು ಉತ್ತರ ದಿಲ್ಲಿಯಲ್ಲೋ, ದಕ್ಷಿಣದ ಕರ್ನಾಟಕದಲ್ಲೋ ಸೆರೆ ಸಿಗುತ್ತಿದ್ದಾರೆ.

ಬಾಂಗ್ಲಾದೇಶಿಗರನ್ನು ಪತ್ತೆ ಹಚ್ಚುತ್ತಿರುವುದು ಹೇಗೆ?
ಅಕ್ರಮ ವಲಸಿರಿಂದ ಭಾರತದ ಭದ್ರತೆಗೆ ಧಕ್ಕೆಯಾಗಲಿದೆ ಎಂಬ ಕಾರಣಕ್ಕೆ ಸರಕಾರಗಳು ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ. ಇದಕ್ಕಾಗಿಯೇ ವಿಶೇಷ ತಂಡಗಳನ್ನು ರಚನೆ ಮಾಡಲಾಗುತ್ತಿದೆ. ಈ ತಂಡಗಳಲ್ಲಿ ಸ್ಥಳೀಯ ಪೊಲೀಸರಿಂದ ಹಿಡಿದು ಕೇಂದ್ರೀಯ ತನಿಖಾ ದಳದವರೆಗಿನ ಅಧಿಕಾರಿಗಳನ್ನು ನೇಮಕ ಮಾಡಲಾ ಗುತ್ತಿದೆ. ಅನುಮಾನ ಬಂದ ಪ್ರದೇಶಗಳಲ್ಲಿ ಮನೆಮನೆಗೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ನಿರಂತರವಾಗಿ ಗುಪ್ತಚರ ವಿಭಾಗಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಮನೆ ಮನೆ ಪರಿಶಿಲನೆ ವೇಳೆ ಎಲ್ಲ ದಾಖಲಾತಿಗಳನ್ನು ತಪ್ಪದೇ ಪರಿಶೀಲಿಸಲಾಗುತ್ತಿದೆ.

ಅಕ್ರಮ ವಲಸಿಗರನ್ನು ಏನು ಮಾಡಲಾಗುತ್ತದೆ?
1955ರ ಪೌರತ್ವ ಕಾಯ್ದೆಯ ಅನ್ವಯ ಅಕ್ರಮ ವಲಸಿಗರನ್ನು ಶಿಕ್ಷಿಸಲಾಗುತ್ತದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದವರು ಭಾರತದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದರೆ, ಅವರ ಕೃತ್ಯಗಳಿಗೆ ಅನುಗುಣವಾದ ಶಿಕ್ಷೆ ವಿಧಿಸಲಾಗುತ್ತದೆ. ಬಳಿಕ ಅವರನ್ನು ಬಾಂಗ್ಲಾಕ್ಕೆ ಗಡೀಪಾರು ಮಾಡಲಾಗುತ್ತದೆ. ಅಕ್ರಮ ವಲಸಿಗರನ್ನು ಇರಿಸಲು ಪ್ರತೀ ರಾಜ್ಯದಲ್ಲೂ ಜೈಲುಗಳನ್ನು ನಿರ್ಮಾಣ ಮಾಡಲಾಗಿರುತ್ತದೆ. ಸೆರೆ ಸಿಕ್ಕ ಅಕ್ರಮ ವಲಸಿಗರನ್ನು ಈ ಜೈಲುಗಳಲ್ಲಿಟ್ಟು, ಬಳಿಕ ರಾಯಭಾರಿಗಳಲ್ಲಿ ತನಿಖೆ ನಡೆಸಿ ಅವರನ್ನು ಗಡೀಪಾರು ಮಾಡಲಾಗುತ್ತದೆ.

ವಲಸಿಗರು ಹೆಚ್ಚುವುದರಿಂದ ಉಂಟಾಗುವ ಸಮಸ್ಯೆಗಳು
ವಲಸಿಗರ ಸಂಖ್ಯೆ ಹೆಚ್ಚಾದರೆ ಒಂದು ದೇಶದ ಆರ್ಥಿಕ ಸ್ಥಿತಿ ಕುಸಿಯಬಹುದು

ಅಕ್ರಮ ವಲಸಿಗರಿಂದ ದೇಶದಲ್ಲಿ ಕೊಲೆ, ಸುಲಿಗೆಯಂತಹ ಅಪರಾಧಗಳ ಹೆಚ್ಚಳ

ಭಯೋತ್ಪಾದಕರಿಗೆ ಸಹಾಯ ಒದಗಿಸುವ ಮೂಲಕ ದೇಶದ ಭದ್ರತೆಗೆ ಧಕ್ಕೆ

ಜನಸಂಖ್ಯೆಗೆ ಸಂಬಂಧಿಸಿದಂತಹ ದತ್ತಾಂಶಗಳನ್ನು ಸಂಗ್ರಹಿಸಲು ಸಮಸ್ಯೆ

ವಲಸಿಗರ ಹೆಚ್ಚಳದಿಂದ ಸಾಮಾಜಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ

ಅಕ್ರಮ ವಲಸೆ ತಡೆಗಟ್ಟಲು ಏಕೆ ಸಾಧ್ಯವಾಗುತ್ತಿಲ್ಲ?
ಅಕ್ರಮವಾಗಿ ನೆಲೆಸಿರುವುದನ್ನು ಪ್ರಜೆಗಳಿಂದ ಬೇರ್ಪಡಿಸಲು ದತ್ತಾಂಶಗಳ ಕೊರತೆ

ಸಾರಿಗೆ ಸಂಸ್ಥೆಗಳ ಮೇಲೆ ಕಠಿನವಾದ ಕಾನೂನುಗಳು ಇಲ್ಲದಿರುವುದು

ಬೃಹತ್‌ ಗಡಿ ಇರುವುದರಿಂದ ಎಲ್ಲ ಪ್ರದೇಶದ ಮೇಲೆ ಕಣ್ಣಿಡುವ ಸವಾಲು

ವಲಸೆಗಾರರರಿಗೆ ಭಯೋತ್ಪಾದಕ ಅಥವಾ ಕ್ರಿಮಿನಲ್‌ ಸಂಘಟನೆಗಳ ಸಹಾಯ

ಅಕ್ರಮ ವಲಸಿಗರಿಗೆ ಕಠಿನ ಶಿಕ್ಷೆ ವಿಧಿಸುವ ಕಾನೂನು ಇಲ್ಲದಿರುವುದು

ಕರ್ನಾಟಕದಲ್ಲೂ ಇದ್ದಾರೆ ಬಾಂಗ್ಲಾದೇಶಿ ವಲಸಿಗರು
ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಕರ್ನಾಟಕದಲ್ಲೂ ಬಾಂಗ್ಲಾದೇಶದ ಪ್ರಜೆಗಳು ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಬಹುತೇಕರು ಕಾಫಿ ಹಾಗೂ ಟೀ ತೋಟಗಳಲ್ಲಿ ಮತ್ತು ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ರಾಜ್ಯ ಸರ ಕಾ ರ ಅನುಮಾನ ವ್ಯಕ್ತಪಡಿಸಿದೆ. ಕಳೆದ ತಿಂಗಳು ಈ ಬಗ್ಗೆ ಮಾಹಿತಿ ನೀಡಿದ್ದ ಗೃಹ ಸಚಿವರು, ರಾಜ್ಯದಲ್ಲಿ 159 ಮಂದಿ ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದರು. ಅಲ್ಲದೇ ಅಕ್ರಮ ವಲಸಿಗರನ್ನು ಪತ್ತೆ ಮಾಡಲು ವಿಶೇಷ ಕಾರ್ಯಪಡೆಯನ್ನು ಸಹ ರಚಿಸಲಾಗಿದೆ.

ಭಾರತದಲ್ಲಿ 2 ಕೋಟಿಗೂ ಅಧಿಕ ಅಕ್ರಮ ವಲಸಿಗರು?
ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ ಬಾಂಗ್ಲಾದೇಶಿಗರ ಸಂಖ್ಯೆಯ ಬಗ್ಗೆ ಕೇಂದ್ರ ಸರ ಕಾ ರನಿಖರವಾದ ಮಾಹಿತಿ ನೀಡದಿದ್ದರೂ ಸಹ 2 ಕೋಟಿಗೂ ಅಧಿಕ ಬಾಂಗ್ಲಾದೇಶಿಗರು ಭಾರತದಲ್ಲಿರಬಹುದು ಎಂದು ಅನುಮಾನವಿದೆ. 2023ರಲ್ಲಿ ರಾಜ್ಯಸಭೆಯಲ್ಲಿ ಮಾತನಾಡಿದ್ದ ಸಚಿವ ಕಿರಣ್‌ ರಿಜಿಜು ಅಕ್ರಮ ವಲಸಿಗರ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಿಲ್ಲ ಎಂದು ಹೇಳಿದ್ದರು. 2016ರಲ್ಲಿ ಲೋಕಸಭೆಗೆ ಮಾಹಿತಿ ನೀಡಿದ್ದ ಕೇಂದ್ರ ಸರಕಾರ, ಭಾರತದಲ್ಲಿ 2 ಕೋಟಿಗೂ ಅಧಿಕ ಬಾಂಗ್ಲಾದೇಶಿಗರು ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಿತ್ತು.

– ಗಣೇಶ್‌ ಪ್ರಸಾದ್‌

ಟಾಪ್ ನ್ಯೂಸ್

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Gove-CM-Meet

Governer Meet CM: ಸಿ.ಟಿ.ರವಿ ಪ್ರಕರಣ: ಮುಖ್ಯಮಂತ್ರಿ ವರದಿ ಕೇಳಿದ ರಾಜ್ಯಪಾಲ ಗೆಹ್ಲೋಟ್‌

1-horoscope

Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ

BGV-CM

UGC Draft: ಕೇಂದ್ರ ಸರಕಾರದ ವಿರುದ್ಧ ಮತ್ತೊಂದು ಸುತ್ತಿನ ಸಮರ: ಸಿಎಂ ಎಚ್ಚರಿಕೆ

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

Nuclear-Plant

Nuclear Power Plant: ಇನ್ನೊಂದು ಅಣುಸ್ಥಾವರ ಮೂರು ಜಿಲ್ಲೆಗಳಲ್ಲಿ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister-CR-patil

Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Gove-CM-Meet

Governer Meet CM: ಸಿ.ಟಿ.ರವಿ ಪ್ರಕರಣ: ಮುಖ್ಯಮಂತ್ರಿ ವರದಿ ಕೇಳಿದ ರಾಜ್ಯಪಾಲ ಗೆಹ್ಲೋಟ್‌

1-horoscope

Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ

BGV-CM

UGC Draft: ಕೇಂದ್ರ ಸರಕಾರದ ವಿರುದ್ಧ ಮತ್ತೊಂದು ಸುತ್ತಿನ ಸಮರ: ಸಿಎಂ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.