Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
ಲಕ್ಷಾಂತರ ರೂ. ಯೋಜನೆ ನದಿಪಾಲು!; ಕೆಮರಾ ಮಾಯ!
Team Udayavani, Jan 7, 2025, 2:17 PM IST
ಮಂಗಳೂರು: ನಗರದ ಹೊರವಲಯದ ನೇತ್ರಾವತಿ ಸೇತುವೆ ಯಲ್ಲಿ ಸುರಕ್ಷೆಯ ದೃಷ್ಟಿಯಿಂದ ಅಳವಡಿಸಲಾಗಿದ್ದ ಸಿಸಿ ಕೆಮರಾಗಳು ಕೈಕೊಟ್ಟಿವೆ. ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಪ್ರಕರಣಗಳು ಹಾಗೂ ನದಿಗೆ ತ್ಯಾಜ್ಯ ಎಸೆಯುವುದನ್ನು ತಡೆ ಯಲು ತಡೆಬೇಲಿಯೊಂದಿಗೆ ಕೆಮರಾ ಅಳವಡಿಸಲಾಗಿತ್ತು. ಆದರೆ ಇದೀಗ ಕೆಮರಾಗಳು ಬಳಕೆಗೆ ಇಲ್ಲವಾಗಿದೆ.
ಮಂಗಳೂರು ನಗರಾಭಿವೃದ್ಧಿ ಪ್ರಾಧಿ ಕಾರದ ಮೂಲಕ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಸಿಸಿ ಕೆಮರಾಗಳನ್ನು ಆಳವಡಿಸ ಲಾಗಿತ್ತು. ಆದರೆ ಅವುಗಳು ನಿರ್ವಹಣೆಯ ಕೊರತೆಯಿಂದಾಗಿ ಸೊರಗಿ ಹೋಗಿವೆ. ಸೇತು ವೆಯ ಎರಡೂ ಭಾಗಗಳಲ್ಲಿ ಅಳವಡಿಸ ಲಾಗಿರುವ ಕೆಮರಾಗಳು ಕಳಚಿವೆ.
ವೈರ್‌ಲೆಸ್ ವಿಶೇಷ ಕೆಮರಾ
2021ರಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಮುತುವರ್ಜಿಯಲ್ಲಿ ರಕ್ಷಣಾ ಬೇಲಿ ಹಾಗೂ ಸಿಸಿ ಕೆಮರಾಗಳನ್ನು ಅಳವಡಿಸಲಾಗಿತ್ತು. ಎರಡೂ ಸೇತುವೆ ಆರಂಭ ಹಾಗೂ ಅಂತ್ಯದ ಭಾಗದಲ್ಲಿ ಒಟ್ಟು ನಾಲ್ಕು ಕೆಮರಾಗಳನ್ನು ಅಳವಡಿಸಲಾಗಿತ್ತು. ಈ ಕೆಮರಾಗಳು ವೈರ್‌ಲೆಸ್ ವಿಶೇಷ ಕೆಮರಾಗಳಾಗಿದ್ದವು. ಸುಮಾರು 500 ಮೀ. ದೂರದ ವರೆಗೆ ದೃಶ್ಯ ಸೆರೆ ಹಿಡಿಯುವ ಸಾಮಾರ್ಥ್ಯ ಹೊಂದಿದ್ದವು.
ಕೆಮರಾಗಳು ಮಾಯ!
ನಾಲ್ಕು ವರ್ಷಗಳ ಹಿಂದೆ ಅಳವಡಿ ಸಿರುವ ಕೆಮರಾಗಳು ಇದೀಗ ಮಾಯ ವಾಗಿವೆ. ಒಂದು ವರ್ಷ ದಿಂದ ನಿರ್ವ ಹಣೆಯ ಕೊರತೆ ಎದು ರಾಗಿತ್ತು. ಇದೀಗ ಎರಡು ಕೆಮರಾ ಗಳು ಮಾಯ ವಾಗಿದ್ದು, ಮತ್ತೆ ಎರಡು ಕೆಮರಾಗಳು ಪೋಲ್‌ನಲ್ಲಿ ನೇತಾಡುತ್ತಿವೆ.
ತುಕ್ಕು ಹಿಡಿಯುತ್ತಿದೆ ರಕ್ಷಣಾ ಬೇಲಿ
ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 3200 ಮೀ. ಉದ್ದದ ರಕ್ಷಣಾ ಬೇಲಿ ಇದೀಗ ತುಕ್ಕು ಹಿಡಿಯುತ್ತಿದೆ. ಸೂಕ್ತ ರೀತಿಯಲ್ಲಿ ಬೇಲಿಯ ನಿರ್ವಹಣೆ ಮಾಡಬೇಕಾದ ಅಗತ್ಯವಿದೆ. ಕೆಲವು ಕಡೆಗಳಲ್ಲಿ ತುಕ್ಕು ಹಿಡಿದಿದ್ದು, ಪೈಂಟಿಂಗ್ ನಡೆಸದೇ ಇದ್ದಲ್ಲಿ ರಕ್ಷಣಾ ಬೇಲಿ ಕಿತ್ತು ಹೋಗುವ ಆತಂಕವಿದೆ. ಇದರ ಮೇಲ್ಭಾಗದಲ್ಲಿರುವ ಮುಳ್ಳಿನ ಬೇಲಿ ಕೂಡ ಸುವ್ಯವಸ್ಥೆಯಲ್ಲಿಲ್ಲ.
ನಿರ್ವಹಣೆ ಅಗತ್ಯ
ಸೇತುವೆಯ ಮೇಲೆ ರಕ್ಷಣಾ ಬೇಲಿ ಅಳವಡಿಸಿದ ಬಳಿಕ ಆತ್ಮಹತ್ಯೆ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ. ಕೆಮರಾ ಇದ್ದ ಸಂದರ್ಭದಲ್ಲಿ ನದಿಗೆ ಕಸ ಎಸೆಯುವುದು ನಿಯಂತ್ರಣದಲ್ಲಿತ್ತು. ಸೇತುವೆಯಲ್ಲಿ ಅಳವಡಿಸಲಾಗಿರುವ ಕೆಮರಾಗಳು ವಿವಿಧ ಕಾರಣಕ್ಕೆ ಉಪಯುಕ್ತವಾಗಿದೆ. ದರೋಡೆ ಪ್ರಕರಣಗಳು ಸಹಿತ ಕಳ್ಳ ಸಾಗಾಣೆಯಂತಹ ಕೃತ್ಯ ಪತ್ತೆಗೂ ನೆರವಾಗಬಹುದು. ಸಿಸಿ ಕೆಮರಾಗಳನ್ನು ನಿರ್ವಹಣೆ ಮಾಡುವುದು ಅಗತ್ಯವಾಗಿದೆ.
-ನಿತೇಶ್ ಡಿ., ವಾಹನ ಸವಾರ
ಇಲಾಖೆ ಸೂಚನೆ
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಅನುದಾನ ಬಳಸಿಕೊಂಡು ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಪ್ರಸ್ತುತ ನಿರ್ವಹಣೆ ಕೊರತೆ ಇದೆ. ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಸಂಬಂಧಿಸಿ ಇಲಾಖೆಗೆ ಸೂಚನೆ ನೀಡಲಾಗಿದೆ. ತ್ವರಿತವಾಗಿ ಕ್ರಮಕೈಗೊಳ್ಳಲು ತಿಳಿಸಿದ್ದೇನೆ.
-ಡಿ. ವೇದವ್ಯಾಸ ಕಾಮತ್, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.