Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

Team Udayavani, Jan 7, 2025, 3:10 PM IST

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

ಬೆಂಗಳೂರು: 50 ವರ್ಷಗಳ ಸುದೀರ್ಘ ಪಯಣದ ಮೈಲಿಗಲ್ಲು ಸಾಧಿಸಿರುವ ಸಂಗೀತಾ ಮೊಬೈಲ್‌ಗಳ ವಿಭಾಗದಲ್ಲಿ ಭಾರತದ ಮೊಟ್ಟ ಮೊದಲ ವೈಶಿಷ್ಟ್ಯಗಳ ಮಳಿಗೆಯಾಗಿ ಗುರುತಿಸಿಕೊಂಡಿದ್ದು, ಸುವರ್ಣ ಸಂಭ್ರಮದ ಈ ಹೊತ್ತಿನಲ್ಲಿ ತನ್ನ ನೂತನ ಆಡಳಿತ ಕಚೇರಿ, ʼಸಂಗೀತಾ ವಿಷನ್‌ʼ, ಮತ್ತು ಹೊಸತನದಿಂದ ಕೂಡಿದ ಅತ್ಯುತ್ತಮ ಮಳಿಗೆ ‘ಸಂಗೀತಾ ಗ್ಯಾಜೆಟ್ಸ್‌’ ಅನ್ನು ಬೆಂಗಳೂರಿನ ಜಯನಗರದಲ್ಲಿ ಲೋಕಾರ್ಪಣೆಗೊಳಿಸಿತು.

ಸಂಗೀತಾ ಸುವರ್ಣ ಮಹೋತ್ಸವ ಸಂಭ್ರಮದ ಈ ಸಮಾರಂಭದಲ್ಲಿ ಚಲನಚಿತ್ರ ನಟ ನಿರ್ದೇಶಕ ಡಾ.ರಮೇಶ್‌ ಅರವಿಂದ್‌, ಸಂಸದ ತೇಜಸ್ವಿ ಸೂರ್ಯ, ಕರ್ನಾಟಕ ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್  ಅವರ ಉಪಸ್ಥಿತಿಯಲ್ಲಿ ಆಡಳಿತ ಕಚೇರಿ ಮತ್ತು ನೂತನ ಮಳಿಗೆ ಶುಭಾರಂಭಗೊಂಡಿತು.

ನಂದನ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಆರ್‌.ರವಿಚಂದರ್‌ ಅವರು ಜ್ಯೋತಿ ಬೆಳಗಿದರು. ಜಯನಗರ ಕ್ಷೇತ್ರದ ಶಾಸಕ ಸಿ.ಕೆ.ರಾಮಮೂರ್ತಿ, ದಕ್ಷಿಣ ಬೆಂಗಳೂರು ಬಿಜೆಪಿ ಮಾಜಿ ಅಧ್ಯಕ್ಷ ಎನ್‌.ಆರ್‌.ರಮೇಶ್‌, ಅಡ್ಯಾರ್‌ ಆನಂದ ಭವನದ ವ್ಯವಸ್ಥಾಪಕ ನಿರ್ದೇಶಕ ಕೆ.ಟಿ.ವೆಂಕಟೇಶ ರಾವ್‌ ಮೊದಲಾದವರು ಭಾಗವಹಿಸಿ ಸಂಗೀತಾದ ಪರಂಪರೆ ಮತ್ತು ವಿಶೇಷವಾಗಿ ಮೊಬೈಲ್‌ ವಿಭಾಗದಲ್ಲಿ ವೈಶಿಷ್ಟ್ಯತೆಯನ್ನು ಶ್ಲಾಘಿಸಿದರು.

ಸಂಗೀತಾದ ನೂತನ ಆಡಳಿತ ಕಚೇರಿ ʼಸಂಗೀತಾ ವಿಷನ್‌ʼ ಅನಾವರಣಗೊಳಿಸಿ ಮಾತನಾಡಿದ ಸಂಗೀತಾದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸುಭಾಶ್ಚಂದ್ರ ಅವರು ಹಣಕಾಸು ವರ್ಷ 2025-26ರಲ್ಲಿ ಸಂಗೀತಾ ತನ್ನ ಸಮೂಹಕ್ಕೆ 1,000 ಮಳಿಗೆಗಳನ್ನು ಸೇರ್ಪಡೆಗೊಳಿಸುವುದಾಗಿ ಘೋಷಿಸಿದರು. ಜೊತೆಗೆ ಪ್ರಸ್ತುತ ಇರುವ ಮೊಬೈಲ್‌ ಉಪಕರಣಗಳ (ಗ್ಯಾಜೆಟ್‌ಗಳ) ಇದೀಗ ಆಡಳಿತ ಕಚೇರಿಯೊಂದಿಗೆ ಲೋಕಾರ್ಪಣೆಗೊಂಡಿರುವ ಸಂಗೀತಾ ಮೊಬೈಲ್‌ ಉಪಕರಣಗಳ ಅತ್ಯಾಧುನಿಕ ಮತ್ತು ಅತ್ಯುತ್ತಮ ಮಳಿಗೆ ʼಸಂಗೀತಾ ಗ್ಯಾಜೆಟ್ಟ್‌ʼ ಗ್ರಾಹಕರಿಗೆ ಖರೀದಿಯ ಮತ್ತು ತಂತ್ರಜ್ಞಾನಗಳನ್ನೊಳಗೊಂಡ ಅತ್ಯುನ್ನತ ಅಪರಿಮಿತ ಅನುಭವವನ್ನು ಅನಾವರಣಗೊಳಿಸಲಿದೆ ವಿಸ್ತರಣೆ ಜೊತೆಗೆ ಭೌಗೋಳಿಕ ವಿಸ್ತರಣೆಗೆ ಅನುಗುಣವಾಗಿ ಸಂಗೀತಾ ಕೂಡ ತನ್ನ ವಿಸ್ತರಣೆ ಕೈಗೊಳ್ಳಲಿದೆ ಎಂದು ತಿಳಿಸಿದರು..

ತ್ವರಿತ ವಾಣಿಜ್ಯ ಬೆಳವಣಿಗೆಗಳು ಭಾರತದಲ್ಲಿ ಚಿಲ್ಲರೆ ವ್ಯಾಪಾರದ ಗತಿಯನ್ನೇ ಪರಿವರ್ತಿಸುವ ನಿಟ್ಟಿನಲ್ಲಿ ಸಾಗುತ್ತಿದೆ. 2025ನೇ ವರ್ಷವು ದಿನಸಿಯಿಂದ ಹಿಡಿದು ಗ್ಯಾಜೆಟ್‌ಗಳವರೆಗೆ ಕ್ರಾಂತಿಕಾರಕ ಬದಲಾವಣೆಗೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ತ್ವರಿತ ವಾಣಿಜ್ಯವು ಬೆಳವಣಿಗೆಯ ನಿರ್ಣಾಯಕ ಚಾಲಕ ಶಕ್ತಿಯಾಗಿ ಹೊರ ಹೊಮ್ಮಿದೆ. ಇದು ಗ್ರಾಹಕರು ಬ್ರಾಂಡ್‌ ಉತ್ಪನ್ನಗಳೊಂದಿಗೆ ಹೇಗೆ ಸಂವಹನ ನಡೆಸುತ್ತಾರೆಂಬುದನ್ನು ಪ್ರತಿಫಲನಗೊಳಿಸಲಿದೆ. ಈ ಪರಿವರ್ತನೆಯ ಕಾಲಘಟ್ಟದಲ್ಲಿ ಸಂಗೀತಾ ಮೊಬೈಲ್‌ ಉಪಕರಣಗಳ ಮಾರಾಟ ವಿಭಾಗದಲ್ಲಿ ತನ್ನದೇ ಆದ ವೈಶಿಷ್ಟ್ಯತೆಯೊಂದಿಗೆ ಮುಂಚೂಣಿಯಲ್ಲಿರಲಿದೆ ಎಂದು ಹೇಳಿದರು.

ಅತಿ ಶೀಘ್ರವಾಗಿ ಗ್ಯಾಜೆಟ್‌ಗಳನ್ನು ಗ್ರಾಹಕರಿಗೆ ತಲುಪಿಸುವ ತನ್ನ ಭರವಸೆ ಮತ್ತು ಬದ್ಧತೆಯೊಂದಿಗೆ ಸಂಗೀತಾ, ಇಂದಿನ ವೇಗದ ಜೀವನ ಶೈಲಿಯ ಬೇಡಿಕೆಗಳನ್ನು ಪೂರೈಸುವುದರೊಂದಿಗೆ ಅನುಕೂಲತೆಗಳು ಮತ್ತು ತಂತ್ರಜ್ಞಾನಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಸೇತುವಾಗಲಿದೆ ಎಂದರು.

1974ರಲ್ಲಿ ಗ್ರಾಮೊಫೋನ್‌ ಸ್ಟೋರ್‌ ಆಗಿ ಆರಂಭಗೊಂಡ ಸಂಗೀತಾ ದೇಶದಾದ್ಯಂತ 800ಕ್ಕೂ ಹೆಚ್ಚು ಸ್ಟೋರ್‌ಗಳೊಂದಿಗೆ ಮೊಬೈಲ್‌ ಚಿಲ್ಲರೆ ಮಾರಾಟದ ಅಗ್ರಗಣ್ಯ ಸಮೂಹವಾಗಿ ಹೊರಹೊಮ್ಮಿದೆ. ಗ್ರಾಹಕ ಸ್ನೇಹಿ ಉಪಕ್ರಮಗಳು ಮತ್ತು ನಿರಂತರ ವಿಕಸನವು ಸಂಗೀತಾವನ್ನು ಅತ್ಯಂತ ವಿಶ್ವಾಸಾರ್ಹ ಮಳಿಗೆಯಾಗಿ ಬೆಳೆಯುವಂತೆ ಮಾಡಿದೆ.

50ರ ಸುವರ್ಣ ಸಂಭ್ರಮದ ಈ ಹೊಸ್ತಿಲಲ್ಲಿ ಸಂಗೀತಾ, ಗ್ರಾಹಕರ ಅಗತ್ಯತೆಗಳನ್ನು ಪೂರೈಸುತ್ತಾ ಭಾರತದ ಅಗ್ರಗಣ್ಯ ಮೊಬೈಲ್‌ ಮಾರಾಟ ಮಳಿಗೆಯಾಗಿ ಹೊರಹೊಮ್ಮಿದ್ದು ಇದೇ ಸೇವೆಯನ್ನು ಸದಾ ಗ್ರಾಹಕರಿಗೆ ಇನ್ನು ಮುಂದೆಯೂ ಒದಗಿಸುವ ಬದ್ಧತೆ ಮತ್ತು ಭರವಸೆಯನ್ನು ನೀಡುತ್ತದೆ ಎಂದು ಸುಭಾಶ್ಚಂದ್ರ ಅವರು ಹೇಳಿದರು.

ಟಾಪ್ ನ್ಯೂಸ್

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.