Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
Team Udayavani, Jan 8, 2025, 7:05 AM IST
ಮಂಗಳೂರು: ಮೈಸೂರು ವಿಭಾಗದ ಹಾಸನ- ಮಂಗಳೂರು ನಡುವೆ 247 ಕಿ.ಮೀ. ರೈಲು ಹಳಿ ದ್ವಿಗುಣಗೊಳಿಸುವುದಕ್ಕಾಗಿ ಅಂತಿಮ ಸ್ಥಳ ಸರ್ವೇ ಕಾರ್ಯಕ್ಕೆ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ ಡಿಪಿಆರ್ ಸಜ್ಜುಗೊಳಿಸುವುದು, ಭೂತಾಂತ್ರಿಕ ಅಧ್ಯಯನ, ಸಿಗ್ನಲಿಂಗ್, ಎಲೆಕ್ಟ್ರಿ ಕಲ್ ಕೆಲಸಗಳು ಇತ್ಯಾದಿ ಬಗ್ಗೆ ಸರ್ವೇ ಕೈಗೊಳ್ಳಲಾಗುವುದು. ಘಾಟಿ ವಿಭಾಗದ 120 ಕಿ.ಮೀ. ಮತ್ತು ಹಾಸನ -ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್ – ಮಂಗಳೂರು ಜಂಕ್ಷನ್ ನಡು ವಣ 127 ಕಿ.ಮೀ. ಅಂತರದಲ್ಲಿ ಫ್ಲಾಟರ್ ಗ್ರೇಡಿಯಂಟ್ ಒದಗಿಸುವುದು ಇದರಲ್ಲಿ ಸೇರಿದೆ.
ಈ ಕುರಿತು ಸಂಸದ ಕ್ಯಾ| ಬ್ರಿಜೇಶ್ ಚೌಟ “ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇದು ಮಂಗಳೂರು – ಬೆಂಗಳೂರು ನಡುವಿನ ರೈಲು ಸಂಪರ್ಕಕ್ಕೆ ಹೊಸ ದಿಶೆಯನ್ನು ನೀಡಲಿದ್ದು, ಜನರ ಪ್ರಯಾಣ ಮತ್ತು ಸರಕು ಸಾಗಾಟ ಇನ್ನಷ್ಟು ಸುಗಮಗೊಳಿಸಲಿದೆ ಎಂದು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.