Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಸೋಶಿಯಲ್ ಮೀಡಿಯಾ ಕಾಮೆಂಟ್ಸ್‌ಗೆ ರಚಿತಾ ರಾಮ್ ತಿರುಗೇಟು
Team Udayavani, Jan 8, 2025, 11:34 AM IST
ಒಂದು ವೇಳೆ ಕಷ್ಟಬಂದು ನಾನು ಎಲ್ಲಾ ಕಳೆದುಕೊಂಡರೆ ದೇವಸ್ಥಾನದಲ್ಲಿ ಕೆಲಸ ಮಾಡಿ ಪ್ರಸಾದ ತಿಂದು ಬದುಕುತ್ತೇನೆಯೇ ಹೊರತು ಯಾರ ಜೊತೆಯೂ ಹೋಗಿ ಇರುವವಳಲ್ಲ ನಾನು…
– ಇದು ಡಿಂಪಲ್ ಕ್ವೀನ್ ರಚಿತಾ ರಾಮ್ ನೇರ ಮಾತು. ಇದಕ್ಕೆ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ರಚಿತಾ ರಾಮ್ ಅವರ ಕೋಟಿ ಬೆಲೆಯ ಕಾರು, ಅವರ ಲೈಫ್ ಸ್ಟೈಲ್ ಬಗ್ಗೆ ಕಾಮೆಂಟ್ ಮಾಡಿದ್ದು. ಈ ಕುರಿತು ಮಾಧ್ಯಮ ಜೊತೆ ಮಾತನಾಡಿರುವ ರಚಿತಾ, ನಾನು ನಂಬಿರೋದು ನನ್ನ ಕೆಲಸವನ್ನು ಎಂದಿದ್ದಾರೆ.
“ನಾನು ಏನೆಂದು ನನ್ನ ಜೊತೆ ಇರುವವರಿಗೆ ಗೊತ್ತಿದೆ. ನನಗೆ ಇಷ್ಟೊಂದು ಸ್ಪಾನ್ಸರ್ ಅಂತ ಇದ್ದಿದ್ರೆ ನಾನ್ಯಾಕೆ ಇಷ್ಟೊಂದು ಕಷ್ಟಪಟ್ಟು 12 ವರ್ಷ ಕೆಲಸ ಮಾಡಬೇಕಿತ್ತು. ನೆಮ್ಮದಿಯಾಗಿ, ಖುಷಿಯಾಗಿ ಬೇಕಾದ ದೇಶ ಸುತ್ತಿಕೊಂಡು ಒಂದೆರಡು ಸಿನಿಮಾ ಮಾಡಿಕೊಂಡು ಇರುತ್ತಿದ್ದೆ. ಭಗವಂತನೇ ನನ್ನ ಜೀವನದಲ್ಲಿ ಒಳ್ಳೆಯ ಸ್ಪಾನ್ಸರ್.
ಒಳ್ಳೆಯ ಕೆರಿಯರ್ ಕೊಟ್ಟಿದ್ದಾನೆ. ನಾನು ಖುಷಿಯಾಗಿದ್ದೇನೆ. ಸ್ಪಾನ್ಸರ್ ತಗೊಳುವವಳಲ್ಲ ನಾನು. ನನಗೆ ಜೀವನದಲ್ಲಿ ಕಷ್ಟಬಂದು ಎಲ್ಲಾ ಕಳೆದುಕೊಂಡೆ ಅಂದಾಗಲೂ, ದೇವಸ್ಥಾನದಲ್ಲಿ ಹೋಗಿ ಕೆಲಸ ಮಾಡಿ, ಅಲ್ಲಿ ಕೊಟ್ಟ ಪ್ರಸಾದ ತಿಂದುಕೊಂಡು ಇರುತ್ತೇನೆಯೇ ಹೊರತು, ಯಾರ ಜೊತೆಯೂ ಹೋಗಿ ಇರುವವಳಲ್ಲ. ಇದು ನಮ್ಮ ಅಪ್ಪ-ಅಮ್ಮ ಹೇಳಿಕೊಟ್ಟಿರುವಂಥದ್ದು’ ಎಂದು ಖಡಕ್ ಆಗಿ ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ರಚಿತಾ, “ದೇವರು ನನಗೆ ತುಂಬಾ ಕೆಲಸ ಕೊಟ್ಟಿದ್ದಾನೆ. ಇದಕ್ಕೂ ಮೀರಿ ನಾನು ಅತಿಯಾಗಿ ಆಸೆ ಪಟ್ಟರೆ ತಪ್ಪಾಗುತ್ತೆ. ನಾನು ಮಾಡುವ ಕೆಲಸಕ್ಕೆ ಅದಕ್ಕೆ ತಕ್ಕುದಾದ
ಸಂಭಾವನೆ ಪಡೆಯುತ್ತೇನೆ. ಫ್ರಿಯಾಗಿ ಕೆಲಸ ಮಾಡಿಲ್ಲ. ನಾನು ಕಿರುತೆರೆಯಲ್ಲಿ ದಿನಕ್ಕೆ 750 ರೂಪಾಯಿ ಸಂಭಾವನೆಯಿಂದ ಕೆರಿಯರ್ ಶುರು ಮಾಡಿದವಳು. ಇವತ್ತು ನಾನು ಏನು ಸಂಭಾವನೆ ಪಡೆಯುತ್ತೇನೆ ಎನ್ನುವುದು ನನ್ನ ಆಡಿಟರ್‌ಗೆ, ನನ್ನ ಸಿಎಗೆ ಗೊತ್ತಿರುತ್ತದೆ. ನಿಮ್ಮನ್ನು ಟ್ರಿಗರ್ ಮಾಡಬೇಕು ಎಂದು ತುಂಬಾ ಜನ ಏನೇನೋ ಕಾಮೆಂಟ್ ಮಾಡುತ್ತಾರೆ. ಕೆಲಸ ಮಾಡುವವರು ಟ್ರಿಗರ್ ಆಗಲ್ಲ. ನನಗೆ ಮಾಡಲು ತುಂಬಾ ಕೆಲಸ ಇದೆ. ತುಂಬಾ ಆಸೆಗಳಿವೆ. ನನ್ನ ಅಪ್ಪ-ಅಮ್ಮನ ಆಸೆಗಳನ್ನು ಈಡೇರಿಸಬೇಕೆಂದಿದೆ. ನಾನು ಅದರ ಬಗ್ಗೆ ಮಾತ್ರ ಗಮನಹರಿಸುತ್ತೇನೆ. ಜನ ಸುಮ್ ಸುಮ್ನೆ ಪ್ರೀತಿ ಕೊಡಲ್ಲ. ಅವರು ಕೊಟ್ಟಂತಹ ಪ್ರೀತಿ, ಮರ್ಯಾದೆ ಗೌರವನಾ ಕಾಪಾಡಬೇಕು. ಆ ಉದ್ದೇಶದಿಂದ ನಾನು ಕೆಲಸ ಮಾಡುತ್ತಿದ್ದೇನೆ. ನಾನು ತಪ್ಪು ಮಾಡಿದರೆ ತಪ್ಪು ಮಾಡಿದ್ದೇನೆ ಎಂದು ನೇರವಾಗಿ ಹೇಳುವ ವ್ಯಕ್ತಿ’ ಎಂದಿದ್ದಾರೆ.
1 ಕೋಟಿ ರೂ ಸಂಭಾವನೆ:
ಸದ್ಯ ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿಯಾಗಿದ್ದಾರೆ. ಸದ್ಯ ಚಿತ್ರೀಕರಣದಲ್ಲಿರುವ ನವನಟನ ಸಿನಿಮಾವೊಂದಕ್ಕೆ ರಚಿತಾ ರಾಮ್ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆನ್ನಲಾಗಿದೆ. ಈ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಕೋಟಿ ಸಂಭಾವನೆ ಪಡೆದ ಕನ್ನಡದ ನಟಿಯಾಗಿ ಹೊರಹೊಮ್ಮಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.