Naxal Movement End:1990 To 2025:ಕರ್ನಾಟಕ ನಕ್ಸಲೀಯರ ಶಸ್ತ್ರಾಸ್ತ್ರ ಹೋರಾಟದ ಯುಗಾಂತ್ಯ…

ಕರ್ನಾಟಕದ  ನಕ್ಸಲ್‌ ಚಳವಳಿಯ ಇತಿಹಾಸ…

Team Udayavani, Jan 8, 2025, 7:04 PM IST

Naxal Movement End:1990 To 2025:ಕರ್ನಾಟಕ ನಕ್ಸಲೀಯರ ಶಸ್ತ್ರಾಸ್ತ್ರ ಹೋರಾಟದ ಯುಗಾಂತ್ಯ…

ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಅರಣ್ಯಗಳಲ್ಲಿ ಸುಮಾರು ಎರಡು ದಶಕಗಳ ಕಾಲ ಬಂದೂಕು ಹಿಡಿದು ಹೋರಾಟ ನಡೆಸಿದ್ದ ಆರು ಮಂದಿ ನಕ್ಸಲೀಯರು ಬುಧವಾರ (ಜನವರಿ 08) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಪರಮೇಶ್ವರ ಸೇರಿದಂತೆ ಪೊಲೀಸ್‌ ವರಿಷ್ಠಾಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಇದರೊಂದಿಗೆ ಹಲವು ದಶಕಗಳ ಕಾಲ ರಾಜ್ಯ ಸರ್ಕಾರಕ್ಕೆ ತಲೆನೋವಾಗಿದ್ದ ನಕ್ಸಲ್‌ ಹೋರಾಟ ರಾಜ್ಯದಲ್ಲಿ ಅಂತ್ಯಕಾಣುವ ಕಾಲ ಸಮೀಪಿಸಿದಂತಾಗಿದೆ.

ಕರ್ನಾಟಕದಲ್ಲಿ ಈ ನಕ್ಸಲ್‌ ಹೋರಾಟ ಯಾವಾಗ ಪ್ರಾರಂಭವಾಯಿತು…ಈವರೆಗೆ ನಡೆದ ಎನ್‌ ಕೌಂಟರ್‌ ನಲ್ಲಿ ಎಷ್ಟು ನಕ್ಸಲೀಯರು ಹತರಾಗಿದ್ದಾರೆ…ಎಷ್ಟು ನಕ್ಸಲೀಯರು ಶರಣಾಗಿದ್ದಾರೆ ಎಂಬ ವಿವರ ಇಲ್ಲಿದೆ…

1990ರಿಂದ 2012ರವರೆಗೆ ರಾಜ್ಯದಲ್ಲಿ ನಕ್ಸಲ್‌ ಚಳವಳಿ ಉತ್ತುಂಗದಲ್ಲಿದ್ದ ಕಾಲ…ಆ ಸಂದರ್ಭದಲ್ಲಿ ಸುಮಾರು 40ರಿಂದ 45 ಶಸ್ತ್ರಾಸ್ತ್ರಧಾರಿ ನಕ್ಸಲೀಯರು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದ ದಟ್ಟ ಅರಣ್ಯದಲ್ಲಿ ಸಕ್ರಿಯರಾಗಿದ್ದರು. ಅಷ್ಟೇ ಅಲ್ಲ ಶುಷ್ಕ ಪ್ರದೇಶವಾದ ಬೀದರ್‌, ರಾಯಚೂರು, ಬಳ್ಳಾರಿ ಮತ್ತು ತುಮಕೂರು, ಪಾವಗಡದಲ್ಲಿಯೂ ನಕ್ಸಲೀಯರ ಅಟ್ಟಹಾಸ ಜೋರಾಗಿತ್ತು.

2005 ಹಾಗೂ 2012ರ ನಡುವೆ ನಕ್ಸಲ್‌ ನಿಗ್ರಹ ದಳದ 11 ಎನ್‌ ಕೌಂಟರ್‌ ಗಳಲ್ಲಿ 19 ಮಂದಿ ನಕ್ಸಲೀಯರು ಹ*ತ್ಯೆಗೀಡಾಗಿದ್ದರು. ಈ ಕಾರ್ಯಾಚರಣೆ ವೇಳೆ ಮೂವರು ನಾಗರಿಕರು ಸಾವಿಗೀಡಾಗಿದ್ದರು. 2005ರಲ್ಲಿ ತುಮಕೂರಿನಲ್ಲಿ ನಕ್ಸಲೀಯರ ಹೊಂಚು ದಾಳಿಗೆ ರಾಜ್ಯದ ಎಂಟು ಮಂದಿ ಕೆಎಸ್‌ ಆರ್‌ ಪಿ ಪೊಲೀಸರು ಕೊನೆಯುಸಿರೆಳೆಯುವಂತಾಗಿತ್ತು. ಅಲ್ಲದೇ ಪೊಲೀಸರ ಮಾಹಿತಿದಾರರೆಂದು ಆರೋಪಿಸಿ ನಕ್ಸಲೀಯರು ಏಳು ಮಂದಿ ನಾಗರಿಕರನ್ನು ಕೊ*ಲೆಗೈದಿದ್ದರು.

2005ರಲ್ಲಿ ನಕ್ಸಲೀಯರ ಚಳವಳಿ ಹತ್ತಿಕ್ಕಲು ರಾಜ್ಯ ಸರ್ಕಾರ ನಕ್ಸಲ್‌ ನಿಗ್ರಹ ಪಡೆ (ANF) ಯನ್ನು ರಚಿಸಿತ್ತು. ಕರ್ನಾಟಕ ಉಡುಪಿ ಜಿಲ್ಲೆ ಹಾಗೂ ಮಲೆನಾಡು, ಪಶ್ಚಿಮಘಟ್ಟ ಪ್ರದೇಶದಲ್ಲಿ ಎಎನ್‌ ಎಫ್‌ 15 ಕ್ಯಾಂಪ್ಸ್‌ ಗಳನ್ನು ಹೊಂದಿದ್ದು, 500 ಸಿಬಂದಿಗಳು ಕಾರ್ಯಾಚರಿಸುತ್ತಿದ್ದರು.

2003ರ ನವೆಂಬರ್‌ 17ರಂದು ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಲ್ಲೊಟ್ಟೊದಲ್ಲಿ ಎಎನ್‌ ಎಫ್‌ ನಡೆಸಿದ ಪ್ರಥಮ ಎನ್‌ ಕೌಂಟರ್‌ ನಲ್ಲಿ ನಕ್ಸಲೀಯರಾದ ರಾಯಚೂರಿನ ಹಾಜಿಮಾ ಮತ್ತು ಕೊಪ್ಪದ ಪಾರ್ವತಿ ಬಲಿಯಾಗಿದ್ದರು.

ಆ ಬಳಿಕ 2005ರ ಫೆಬ್ರುವರಿ 6ರಂದು ಚಿಕ್ಕಮಗಳೂರಿನಲ್ಲಿ ಕರ್ನಾಟಕದ ನಕ್ಸಲ್‌ ಚಟುವಟಿಕೆಯ ಮಾಸ್ಟರ್‌ ಮೈಂಡ್‌, ನಕ್ಸಲ್‌ ನಾಯಕ ಸಾಕೇತ್‌ ರಾಜನ್‌ ಎನ್‌ ಕೌಂಟರ್‌ ನಲ್ಲಿ ಹತನಾಗಿದ್ದ. ಈ ಸಂದರ್ಭದಲ್ಲಿ ಸಾಕೇತ್‌ ಜತೆಗಿದ್ದ ಶಿವಲಿಂಗು ಎಂಬಾತನೂ ಸಾವಿಗೀಡಾಗಿದ್ದ.

ಏತನ್ಮಧ್ಯೆ ನಕ್ಸಲೀಯರು 2005ರ ಮೇ 17ರಂದು ಪೊಲೀಸ್‌ ಮಾಹಿತಿದಾರ ಎಂದು ಆರೋಪಿಸಿ ಬುಡಕಟ್ಟು ಮುಖಂಡ ಶೇಷಯ್ಯ ಅವರನ್ನು ಹ*ತ್ಯೆಗೈದಿತ್ತು. ನಂತರ ಸಾಕೇತ್‌ ರಾಜನ್‌ ಎನ್‌ ಕೌಂಟರ್‌ ಗೆ ಪ್ರತೀಕಾರವಾಗಿ ನಕ್ಸಲೀಯರು 2005ರ ಫೆಬ್ರುವರಿ 10ರಂದು ವೆಂಕಟಮ್ಮನಹಳ್ಳಿಯಲ್ಲಿ ಆರು ಮಂದಿ ಪೊಲೀಸರನ್ನು ಹಾಗೂ ನಾಗರಿಕರೊಬ್ಬರನ್ನು ಹ*ತ್ಯೆಗೈದಿತ್ತು.

2005ರ ಜೂನ್‌ 23ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ದೇವರಬಾಳು ಬಳಿ ನಡೆದ ಎನ್‌ ಕೌಂಟರ್‌ ನಲ್ಲಿ ಬೆಳಗಾವಿಯ ಅಜಿತ್‌ ಕುಸಬಿ, ಮೂಡಿಗೆರೆಯ ಸಬ್ಲಿ ಉಮೇಶ್‌ ಕೊನೆಯುಸಿರೆಳೆದಿದ್ದರು. 2006ರ ಡಿಸೆಂಬರ್‌ 25ರಂದು ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿ ದಿನಕರ್‌, 2007ರ ಜುಲೈ 10ರಂದು ಕೊಪ್ಪದಲ್ಲಿ ನಡೆದ ಎನ್‌ ಕೌಂಟರ್‌ ನಲ್ಲಿ ಸಿಂಧನೂರಿನ ಗೌತಮ್‌, ಪರಮೇಶ್ವರ, ಸುಂದರೇಶ್‌, ಮನೆಯ ಯಜಮಾನ ರಾಮೇಗೌಡ್ಲು, ಪತ್ನಿ ಕಾವೇರಿ ಸಾವಿಗೀಡಾಗಿದ್ದರು.

2008ರ ನವೆಂಬರ್‌ 19ರಂದು ಹೊರನಾಡು ಸಮೀಪ ನಡೆದ ಎನ್‌ ಕೌಂಟರ್‌ ನಲ್ಲಿ ಸೊರಬದ ಮನೋಹರ್‌ ಹಾಗೂ ಅಭಿಲಾಷ್, ನವೀನ್‌ ಹ*ತ್ಯೆಗೀಡಾಗಿದ್ದರು. 2010ರ ಮಾರ್ಚ್‌ 1ರಂದು ಬೆಳ್ತಂಗಡಿಯ ಕುತ್ಲೂರಿನಲ್ಲಿ ನಡೆದ ಎನ್‌ ಕೌಂಟರ್‌ ನಲ್ಲಿ ವಸಂತ ಗೌಡ್ಲು ಕೊನೆಯುಸಿರೆಳೆದಿದ್ದ. 2024ರ ನವೆಂಬರ್‌ 18ರಂದು ಹೆಬ್ರಿಯ ಪೀತಬೈಲು ಸಮೀಪ ನಡೆದ ಎನ್‌ ಕೌಂಟರ್‌ ನಲ್ಲಿ ನಕ್ಸಲ್‌ ಮುಖಂಡ ವಿಕ್ರಮ್‌ ಗೌಡ ಹತನಾಗಿದ್ದ.

ಈಗಾಗಲೇ ಶರಣಾದ ನಕ್ಸಲೀಯರು ಯಾರು?

ಈ ಹಿಂದೆ ರಾಜ್ಯ ಸರ್ಕಾರ ಘೋಷಿಸಿದ್ದ ನಕ್ಸಲ್‌ ಶರಣಾಗತಿ ಪ್ಯಾಕೇಜ್‌ ನಡಿ ಹಾಗಲಗಂಚಿ ವೆಂಕಟೇಶ್‌, ಮಲ್ಲಿಕಾ, ಹೊರ್ಲೆ ಜಯ, ಸಿರಿಮನೆ ನಾಗರಾಜ್‌, ನೂರ್‌ ಶ್ರೀಧರ್‌, ನೀಲಗುಳಿ ಪದ್ಮನಾಭ, ಪರಶುರಾಮ, ಭಾರತಿ, ಕನ್ಯಾಕುಮಾರಿ, ಶಿವು, ಚನ್ನಮ್ಮ ಸೇರಿ ಒಟ್ಟು 14 ಮಂದಿ ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಮರಳಿದ್ದು, ಇಂದು (ಜ-08) ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ(ಜಯಣ್ಣ), ಕೆ.ವಸಂತ್‌ ಮತ್ತು ಟಿ.ಎನ್.ಜೀಶ್‌ ಶರಣಾಗಿದ್ದಾರೆ.

ಮೂಲಗಳ ಪ್ರಕಾರ, ರಾಜ್ಯದಲ್ಲಿ ಕೇವಲ ಓರ್ವ ನಕ್ಸಲ್‌ ಮಾತ್ರ ಶರಣಾಗತಿಗೆ ಬಾಕಿ ಉಳಿದಿದ್ದು, ಆತನ ಶರಣಾಗತಿಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದ್ದು, ಇದರೊಂದಿಗೆ ಕರ್ನಾಟಕದಲ್ಲಿ ಎರಡೂವರೆ ದಶಕಗಳ ಕಾಲದ ನಕ್ಸಲ್‌ ಚಳವಳಿ ಅಂತ್ಯ ಕಂಡಂತಾಗಿದೆ.

ಟಾಪ್ ನ್ಯೂಸ್

1-bel

Nagaland; ವಾಹನ ಕಂದಕಕ್ಕೆ ಬಿದ್ದು ಬೆಳಗಾವಿ ಯೋಧ ಹುತಾತ್ಮ

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!

Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-bel

Nagaland; ವಾಹನ ಕಂದಕಕ್ಕೆ ಬಿದ್ದು ಬೆಳಗಾವಿ ಯೋಧ ಹುತಾತ್ಮ

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.