Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
ವ್ಯಕ್ತಿಯನ್ನು ಎತ್ತಿ ಎಸೆದ ಆನೆ.. ವಿಡಿಯೋ ಸೆರೆ
Team Udayavani, Jan 8, 2025, 12:54 PM IST
ತಿರುವನಂತಪುರಂ: ಕೇರಳದ ಮಲಪ್ಪುರಂ ನ ಪುತಿಯಂಗಡಿಯಲ್ಲಿ ಬುಧವಾರ (ಜ8) ಬೆಳಗ್ಗೆ ನಡೆದ ದೇವಸ್ಥಾನದ ಉತ್ಸವದ ಮೆರವಣಿಗೆ ವೇಳೆ ಆನೆಯೊಂದು ಅಟ್ಟಹಾಸ ಮೆರೆದ ಪರಿಣಾಮ ಸುಮಾರು 17 ಮಂದಿ ಗಾಯಗೊಂಡಿದ್ದಾರೆ. ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರಿಂದ ಈ ಘಟನೆ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆನೆಯು ಉದ್ರೇಕಗೊಂಡು ಗುಂಪಿನ ಮೇಲೆ ಎರಗಿದೆ. ಓರ್ವ ವ್ಯಕ್ತಿಯನ್ನು ಸೊಡಿಲಿನಲ್ಲಿ ಎತ್ತಿ ಗಾಳಿಯಲ್ಲಿ ಎಸೆದ ಕ್ಷಣದ ಬೆಚ್ಚಿ ಬೀಳುವ ವಿಡಿಯೋ ಸೆರೆಹಿಡಿಯಲಾಗಿದೆ. ವ್ಯಕ್ತಿಗೆ ತೀವ್ರ ಗಾಯಗಳಾಗಿದ್ದು, ತತ್ ಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಕೊಟ್ಟಕಲ್‌ನ ಆಸ್ಟರ್ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
#WATCH | Malappuram, Kerala: Many people were injured when an elephant turned violent during Puthiyangadi annual ‘nercha’ at BP Angadi, Tirur
(Source: Taluk Disaster Response Force) pic.twitter.com/jlm7tCGTxf
— ANI (@ANI) January 8, 2025
ಆನೆಯನ್ನು ಅದರ ಪಾಲಕರ ನೆರವಿನಿಂದ ನಿಯಂತ್ರಣಕ್ಕೆ ತರಲಾಯಿತು ಎಂದು ತಿಳಿದು ಬಂದಿದೆ.ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನರು ಕಂಗಾಲಾಗಿ ದಿಕ್ಕಾಪಾಲಾಗಿ ಓದಿ ಪ್ರಾಣ ಉಳಿಸಿಕೊಂಡಿದ್ದಾರೆ. ಈ ವೇಳೆ ಕಾಲ್ತುಳಿತವೂ ಸಂಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.