Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Team Udayavani, Jan 8, 2025, 2:35 PM IST
ಮುಂಬಯಿ: ನಟಿಯೊಬ್ಬರ ಮನೆಯಿಂದ ಅಮೂಲ್ಯವಾದ ವಸ್ತು ಹಾಗೂ ನಗದನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಪೊಲೀಸರು ಸಮೀರ್ ಅನ್ಸಾರಿ (37) ಎಂಬಾತನನ್ನು ಬಂಧಿಸಿದ್ದಾರೆ.
ಏನಿದು ಘಟನೆ?:
ಮುಂಬಯಿಯ ಖಾರ್ ವೆಸ್ಟ್‌ನಲ್ಲಿರುವ ಬಾಲಿವುಡ್ ನಟಿ ಪೂನಂ ಧಿಲ್ಲೋನ್ (Bollywood actress Poonam Dhillon) ಅವರ ನಿವಾಸದಿಂದ ಇತ್ತೀಚೆಗೆ ರೂ.1 ಲಕ್ಷ ಮೌಲ್ಯದ ವಜ್ರದ ಕಿವಿಯೋಲೆ, ರೂ.35,000 ನಗದು ಮತ್ತು 500 ಯುಎಸ್ ಡಾಲರ್‌ಗಳು ಕಳ್ಳತನವಾಗಿತ್ತು.
ನಟಿ ಪೂನಂ ಜುಹುದಲ್ಲಿ ನೆಲೆಸುತ್ತಿದ್ದಾರೆ. ಅವರ ಮಗ ಅನ್ಮೋಲ್ ಖಾರ್ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಅಪರೂಪಕ್ಕೊಮ್ಮೆ ಧಿಲ್ಲೋನ್ ಖಾರ್ ಮನೆಗೆ ಬಂದು ಹೋಗುತ್ತಾರೆ.
ಇದನ್ನೂ ಓದಿ: Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
ಸಮೀರ್ ಅನ್ಸಾರಿ ಪೂನಂ ಅವರ ನಿವಾಸಕ್ಕೆ ಪೈಂಟಿಂಗ್ ಕೆಲಸಕ್ಕೆಂದು ಬಂದಿರುತ್ತಾನೆ. ಫ್ಲಾಟ್‌ಗೆ ಬಣ್ಣ ಬಳಿಯುವ ತಂಡದ ಭಾಗವಾಗಿ ಅನ್ಸಾರಿ ಅವರು ಡಿಸೆಂಬರ್ 28 ರಿಂದ ಜನವರಿ 5 ರವರೆಗೆ ನಟಿಯ ನಿವಾಸದಲ್ಲಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಕೆಲಸದ ವೇಳೆ ಅನ್ಸಾರಿ ಬೀಗ ಹಾಕದೆ ಇದ್ದ ಕಬೋರ್ಡ್ ವೊಂದನ್ನು ನೋಡುತ್ತಾನೆ. ಬ್ಯಾಗ್ ವೊಂದರಲ್ಲಿ 1 ಲಕ್ಷ ರೂ ಮೌಲ್ಯದ ವಜ್ರದ ಕಿವಿಯೋಲೆ, ರೂ.35,000 ನಗದು, ಮತ್ತು 500 ಯುಎಸ್ ಡಾಲರ್ ನ್ನು ಇಡಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಅನ್ಸಾರಿ ಕಳ್ಳತನ ಮಾಡಿದ್ದಾನೆ. ಕದ್ದ ಹಣದಲ್ಲಿ ಪೈಂಟಿಂಗ್ ತಂಡದ ಭಾಗವಾಗಿದ್ದ ತನ್ನ ಸಹೋದ್ಯೋಗಿಗಳಿಗೆ ಪಾರ್ಟಿ ಕೊಟ್ಟು 9,000 ರೂ. ಖರ್ಚು ಮಾಡಿದ್ದಾನೆ ಎಂದು ವರದಿಯಾಗಿದೆ.
ಕೃತ್ಯ ಬಯಲಿಗೆ ಬಂದಿದ್ದೇಗೆ?: ನಟಿಯ ಪುತ್ರ ಅನ್ಮೋಲ್ ಜನವರಿ 5 ರಂದು ದುಬೈನಿಂದ ಹಿಂತಿರುಗಿ ಬಂದು ಬೆಲೆಬಾಳುವ ವಸ್ತುಗಳು ಮತ್ತು ನಗದು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ವಸ್ತುಗಳು ಕಾಣೆಯಾಗಿರುವುದನ್ನು ಗಮನಿಸಿದ ಆತ ತಮ್ಮ ತಾಯಿಯ ಬಳಿ ವಿಷಯವನ್ನು ಹೇಳಿದ್ದಾನೆ. ನಟಿಯ ಮ್ಯಾನೇಜರ್ ಸಂದೇಶ್ ಚೌಧರಿ ಖಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ವಿಚಾರಣೆಯ ಭಾಗವಾಗಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪೈಂಟ್ ಕೆಲಸದವರನ್ನು ಕರೆದಿದ್ದಾರೆ. ಈ ವೇಳೆ ಅನ್ಸಾರಿ ಹಣ ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಕಾರಣದಿಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.