ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
ನನ್ನ ನೇಮಕಾತಿಯ ಮಾಹಿತಿಯನ್ನು ಮೊದಲು ಪ್ರಧಾನ ಮಂತ್ರಿಗಳ ಕಚೇರಿಯಿಂದಲೇ ತಿಳಿಸಲಾಯಿತು..
Team Udayavani, Jan 8, 2025, 2:25 PM IST
ತಿರುವನಂತಪುರಂ: ಇಸ್ರೋ ಯಶಸ್ವಿಯಾಗಿ ಸಾಗುತ್ತಿದೆ ಮತ್ತು ಚಂದ್ರಯಾನ-4 ಮತ್ತು ಗಗನ್‌ಯಾನ್‌ಗಳು ಮುಂದಿನ ಪ್ರಮುಖ ಕಾರ್ಯಗಳಲ್ಲಿ ಸೇರಿವೆ ಎಂದು ಪ್ರಖ್ಯಾತ ರಾಕೆಟ್ ವಿಜ್ಞಾನಿ ಮತ್ತು ನೂತನವಾಗಿ ನೇಮಕಗೊಂಡ ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಬುಧವಾರ(ಜ8) ಹೇಳಿಕೆ ನೀಡಿದ್ದಾರೆ.
”ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಮತ್ತು ಇಸ್ರೋ ಅಧ್ಯಕ್ಷರಾಗಿ ತಮ್ಮ ಹೊಸ ಅವಧಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ ನಾರಾಯಣನ್, ಹಿಂದೆ ಮಹಾನ್ ನಾಯಕರ ನೇತೃತ್ವದ ಇಂತಹ ಮಹಾನ್ ಸಂಸ್ಥೆಯ ಭಾಗವಾಗಿರುವುದನ್ನು ದೊಡ್ಡ ಅದೃಷ್ಟವೆಂದು ಪರಿಗಣಿಸುತ್ತೇನೆ” ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಾರಾಯಣನ್, ‘ನನ್ನ ನೇಮಕಾತಿಯ ಮಾಹಿತಿಯನ್ನು ಮೊದಲು ಪ್ರಧಾನ ಮಂತ್ರಿಗಳ ಕಚೇರಿಯಿಂದ ನನಗೆ ರವಾನಿಸಲಾಗಿದೆ. ಪ್ರಧಾನಿ ಎಲ್ಲವನ್ನೂ ನಿರ್ಧರಿಸುತ್ತಿದ್ದಾರೆ. ಹಾಲಿ ಅಧ್ಯಕ್ಷ ಎಸ್.ಸೋಮನಾಥ್ ಸರ್ ಕೂಡ ಕರೆ ಮಾಡಿ ನೇಮಕ ಮಾಡಿರುವ ವಿಚಾರ ಹೇಳಿದರು’ ಎಂದರು.
”ಡಿಸೆಂಬರ್ 30 ರಂದು ಬಾಹ್ಯಾಕಾಶ ಡಾಕಿಂಗ್ ಪ್ರಯೋಗ (SpaDeX) ಮಿಷನ್ ಅನ್ನು ಪ್ರಾರಂಭಿಸಿದೆ. SpaDeX ಉಪಗ್ರಹಗಳ ಡಾಕಿಂಗ್ ಪ್ರಯೋಗ ಜನವರಿ 9 ರಂದು ನಡೆಯಲಿದೆ. ಗಗನ್‌ಯಾನ್ ಮತ್ತೊಂದು ಪ್ರಮುಖ ಕಾರ್ಯಕ್ರಮವಾಗಿದೆ, ಅದರ ಭಾಗವಾಗಿ ಸಿಬಂದಿ ಇಲ್ಲದ ಮಾಡ್ಯೂಲ್ ಅಥವಾ ಅನ್‌ಕ್ರೂಡ್ ರಾಕೆಟ್‌ನ ಉಡಾವಣೆಗೆ ಸಂಬಂಧಿಸಿದ ಕೆಲಸಗಳು ಯಶಸ್ವಿಯಾಗಿ ಪ್ರಗತಿಯಲ್ಲಿವೆ” ಎಂದರು.ಜನವರಿ 14 ರಿಂದ ನಾರಾಯಣನ್ ಅಧಿಕಾರ ಅವಧಿ ಆರಂಭವಾಗಲಿದೆ.
2022, ಜನವರಿಯಲ್ಲಿ ಡಾ. ಕೆ ಶಿವನ್ ಅವರಿಂದ ಅಧಿಕಾರ ವಹಿಸಿಕೊಂಡ ಡಾ. ಸೋಮನಾಥ್ ಅವರು ಅಧಿಕಾರ ಸ್ವೀಕರಿಸಿದ್ದರು. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಅತ್ಯಂತ ನಿರ್ಣಾಯಕ ಘಟ್ಟಗಳಲ್ಲಿ ಅವರು ಕಾರ್ಯ ನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.