Sullia: ಜಾಕ್‌ವೆಲ್ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್
ಸುಳ್ಯ ನಗರಕ್ಕೆ ನೀರು ಪೂರೈಕೆಯ ಪ್ರಮುಖ ಕೇಂದ್ರ | ಬೇಸಗೆಯ ದಿನ ಎದುರಿಸಲು ಸಿದ್ಧತೆ
Team Udayavani, Jan 8, 2025, 2:48 PM IST
ಸುಳ್ಯ: ಬೇಸಗೆ ದಿನಗಳು ಹತ್ತಿರವಾಗುತ್ತಿದ್ದಂತೆ ತೋಡು, ಹೊಳೆ, ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗುತ್ತಾ ಬರುತ್ತಿದೆ. ಸುಳ್ಯ ನಗರಕ್ಕೆ ನೀರು ಸರಬರಾಜಿಗೆ ಸಂಬಂಧಿಸಿದಂತೆ ನಾಗಪಟ್ಟಣ ಡ್ಯಾಂಗೆ ಗೇಟ್ ಅಳವಡಿಕೆಗೆ ಸಿದ್ಧತೆ ನಡೆಯುತ್ತಿದೆ. ಅದಕ್ಕೂ ಮೊದಲು ಇಲ್ಲಿನ ಜಾಕ್‌ವೆಲ್, ಚೇಂಬರ್‌ನ ಹೂಳು ತೆರವು ಕಾರ್ಯ ನಡೆಯಲಿದೆ.
ಪಯಸ್ವಿನಿ ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಾ ಬರುತ್ತಿದೆ. ಇನ್ನೊಂದೆಡೆ ಕೃಷಿ ಕಾರ್ಯಗಳಿಗೆ ರೈತರು ನದಿ ನೀರು ಉಪಯೂಗಿಸಲು ಆರಂಭಿಸಿದ್ದಾರೆ. ನಾಗಪಟ್ಟಣ ಡ್ಯಾಂಗೆ ಈಗಾಗಲೇ ಗೇಟ್ ಅಳವಡಿಸಬೇಕಾಗಿದ್ದರೂ ಅಳವಡಿಕೆ ಆಗಿಲ್ಲ. ನಗರ ಪಂಚಾಯತ್‌ನ ನೀರು ಸರಬರಾಜಿನ ಜಾಕ್‌ವೆಲ್‌ನ ಹೂಳು ತೆರವು ಕಾರ್ಯದ ಬಳಿಕ ಗೇಟ್ ಅಳವಡಿಕೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೂಳು-ಕೆಸರು ತೆರವಿಗೆ ಸಿದ್ಧತೆ
ಕಲ್ಲುಮುಟ್ಲು ಬಳಿಯಿಂದ ನಗರ ಪಂಚಾಯತ್ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಜಾಕ್‌ವೆಲ್‌ನಲ್ಲಿ ಹೂಳು ತುಂಬಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಡ್ಯಾಂಗೆ ಗೇಟ್ ಅಳವಡಿಕೆ ಮಾಡಿದ್ದರಿಂದ ನೀರು ತುಂಬಿ ಜಾಕ್‌ವೆಲ್‌ನ ಹೂಳು ತೆರವು ಸಾಧ್ಯವಾಗಿರಲಿಲ್ಲ. ಆದ್ದರಿಂದ ಈ ಬಾರೀ ಗೇಟ್ ಅಳವಡಿಕೆಗೆ ಮೊದಲೇ ಹೂಳು ತೆರವಿಗೆ ನಗರ ಪಂಚಾಯತ್‌ನಿಂದ ಸಿದ್ಧತೆ ನಡೆಸಿದೆ. ಮಳೆ ಇತ್ತೀಚಿನವರೆಗೆ ಬರುತ್ತಿದ್ದುದರಿಂದ ಎಲ್ಲ ಕೆಲಸ ಕಾರ್ಯಗಳೂ ನಿಧಾನವಾಗಿಯೇ ಸಾಗಿದೆ.
ಈ ವಾರದಲ್ಲಿ ಜಾಕ್‌ವೆಲ್‌ನ ಹೂಳು ತೆರವು ಹಾಗೂ ಹೊಳೆಯಲ್ಲಿರುವ ಜಾಕ್‌ವೆಲ್‌ಗೆ ಸಂಪರ್ಕಿಸುವ ಚೇಂಬರ್‌ನಲ್ಲಿ ತುಂಬಿರುವ ಕೆಸರು ತೆಗೆದು ಕ್ಲೀನ್ ಮಾಡುವ ಕಾರ್ಯ ನಡೆಯಲಿದೆ ಎಂದು ನಿರ್ವಾಹಕರು ತಿಳಿಸಿದ್ದಾರೆ.
ನಾಗಪಟ್ಟಣದ ಡ್ಯಾಂ ಅನ್ನು ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿಯೋಜಿಸಲಾದ ಸಂಸ್ಥೆಯೇ ಗೇಟ್ ಅಳವಡಿಕೆ ಹಾಗೂ ಮತ್ತಿತರ ಕೆಲಸಗಳನ್ನು ನಿರ್ವಹಿಸುತ್ತಿದೆ. ನಗರದಲ್ಲಿ ಈಗಾಗಲೇ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕಾರ್ಯ ಭರದಿಂದ ಸಾಗುತ್ತಿದೆ.
ನಾಗಪಟ್ಟಣದ ಡ್ಯಾಂಗೆ ಗೇಟ್ ಅಳವಡಿಕೆ ಕಾರ್ಯ ಸಣ್ಣ ನೀರಾವರಿ ಇಲಾಖೆಯಿಂದಲೇ ಆಗಲಿದೆ. ನಗರ ಪಂಚಾಯತ್‌ನ ಜಾಕ್‌ವೆಲ್‌ನ ಹೂಳು ತೆರವು, ಸಣ್ಣ ಮಟ್ಟಿನ ಕೆಸರು ತೆರವು ಕಾರ್ಯ ನಗರ ಪಂಚಾಯತ್‌ನಿಂದ ನಡೆಸಲಿದ್ದೇವೆ.
-ಸುಧಾಕರ್, ಮುಖ್ಯಾಧಿಕಾರಿ ಸುಳ್ಯ ನ.ಪಂ.
-ದಯಾನಂದ ಕಲ್ನಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.