Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!

ಎತ್ತರಕ್ಕೆ ಬೆಳೆದ ಗಿಡ-ಗಂಟಿ, ಹುಲ್ಲು ದಾಟಿ ಒಳಗೆ ಹೋಗಲಿಕ್ಕೇ ಭಯ

Team Udayavani, Jan 8, 2025, 4:45 PM IST

11(1

ಮಣಿಪಾಲ: ಮಣಿಪಾಲದ ಗುಡ್ಡದ ಮೇಲಿರುವ ಮಣ್ಣಪಳ್ಳ ಕೆರೆ ಪ್ರಕೃತಿ ಮತ್ತು ಮನುಷ್ಯ ಸೇರಿ ಕಟ್ಟಿದ ಸ್ವರ್ಗ ಸದೃಶ ಪ್ರದೇಶ. ಮನಸ್ಸು ಮಾಡಿದರೆ ಅತ್ಯುತ್ತಮ ಪ್ರವಾಸಿ ತಾಣವಾಗಬಹುದಾದ ಇದು ಸದ್ಯಕ್ಕೆ ನಿರ್ವಹಣೆಯ ಕೊರತೆಯಿಂದ ಸೊರಗಿದೆ. ಎಲ್ಲರನ್ನೂ ಕೈಬೀಸಿ ಕರೆಯಬಹುದಾಗಿದ್ದ ಈ ಕೆರೆ ಪ್ರದೇಶಕ್ಕೆ ಪ್ರವೇಶ ಮಾಡುವಾಗಲೇ ಭಯ ಹುಟ್ಟುವ ಪರಿಸ್ಥಿತಿ ಇದೆ. ಇದಕ್ಕೆ ಕಾರಣ, ಇಲ್ಲಿನ ಪ್ರವೇಶ ದ್ವಾರಗಳಲ್ಲಿ ಬೆಳೆದು ನಿಂತಿರುವ ಹುಲ್ಲು, ಪೊದೆಗಳು.

120 ಎಕ್ರೆ ಪ್ರದೇಶದಲ್ಲಿ ಹರಡಿರುವ ಈ ಕೆರೆ ಪರಿಸರಕ್ಕೆ ಪ್ರವೇಶಿಸಲು ಒಂದಲ್ಲ, ಎರಡಲ್ಲ. ಐದರಿಂದ ಆರು ಪ್ರವೇಶ ದ್ವಾರಗಳಿವೆ. ಆದರೆ, ಕೆಲವನ್ನು ಹೊರತುಪಡಿಸಿದರೆ ಉಳಿದವು ಪ್ರವೇಶಕ್ಕೆ ಸೂಕ್ತವಾಗಿ ಕಾಣಿಸುತ್ತಿಲ್ಲ.

ನಿಜವೆಂದರೆ, ಹುಡ್ಕೊ ಕಾಲನಿಯ ಪ್ರಸನ್ನ ಗಣಪತಿ ದೇವಾಲಯ ಪಕ್ಕದ ದ್ವಾರವೊಂದನ್ನು ಬಿಟ್ಟರೆ ಬೇರೆ ಎಲ್ಲೂ ಇದು ಮಣ್ಣಪಳ್ಳ ಕೆರೆಗೆ ಹೋಗುವ ದಾರಿ ಎಂಬುದನ್ನು ತೋರಿಸುವ ಯಾವುದೇ ಕುರುಹುಗಳಿಲ್ಲ.

ಕೆಲವು ಪ್ರವೇಶ ದ್ವಾರಗಳಂತೂ ಕೈಬೀಸಿ ಕರೆಯುವುದು ಬಿಡಿ, ಒಳಗೆ ಪ್ರವೇಶಿಸುವುದಕ್ಕೇ ಭಯ ಹುಟ್ಟಿಸುತ್ತವೆ. ಮಣ್ಣಪಳ್ಳಕ್ಕೆ ಅತೀ ಹೆಚ್ಚು ಜನರು ಬರುವುದು ಪ್ರಸನ್ನ ಗಣಪತಿ ದೇವಾಲಯದ ಪಕ್ಕದಿಂದ. ಎರಡನೇ ಅತೀ ಹೆಚ್ಚು ಜನರು ಪ್ರವೇಶ ಪಡೆಯುವುದು ಮಣಿಪಾಲದ ಪ್ಲಾನೆಟೋರಿಯಂ ಪಕ್ಕದಿಂದ.

ಭಯಾನಕ ದಾರಿ
ಮಣಿಪಾಲ ನಗರ, ಎಂಜೆಸಿ ಮೈದಾನ, ಎಂಐಟಿ, ಪೊಲೀಸ್‌ ಕ್ವಾರ್ಟರ್ಸ್‌ ಕಡೆಯಿಂದ ಪ್ಲಾನೆಟೋರಿಯಂ ಸಮೀಪವಾಗಿ ಮಣ್ಣಪಳ್ಳ ಕೆರೆಗೆ ಬರಲು ಒಂದು ಪ್ರವೇಶವಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಭಯ ಹುಟ್ಟಿಸುವಂತಿದೆ ಎಂದರೆ, ಯಾರಾದರೂ ಮೊದಲ ಬಾರಿಗೆ ಈ ರಸ್ತೆಯಲ್ಲಿ ಬಂದರೆ ತಾವು ಯಾವುದೋ ದೊಡ್ಡ ಕಾಡಿನ ನಡುವೆ ಸಿಕ್ಕಿ ಹಾಕಿಕೊಂಡಿದ್ದೇವೆ ಎಂಬ ಭಯ ಕಾಡಬಹುದು. ಇಲ್ಲಿ ಸುತ್ತಲೂ ಹುಲ್ಲು ಪೊದೆಗಳು ಬೆಳೆದಿದ್ದು ಕೇವಲ ನಾಲ್ಕು ಅಡಿಯ ರಸ್ತೆಯಲ್ಲಿ ಗುಹೆಯಂಥ ಜಾಗದಲ್ಲಿ ಸಾಗಬೇಕು.

ಇದೇ ದಾರಿಯಾಗಿ ದೇಶದ ನಾನಾ ಭಾಗದ ಕಾರ್ಮಿಕರು ಕೂಡ ಕೆರೆಯನ್ನು ದಾಟಿ ತಮ್ಮ ಮನೆಗಳಿಗೆ ಹೋಗುತ್ತಾರೆ. ಹೀಗಾಗಿ ಈ ದಾರಿಯಲ್ಲಿ ಹೆಣ್ಮಕ್ಕಳು ಇಲ್ಲಿ ಒಬ್ಬೊಬ್ಬರಾಗಿ ಹೋಗುವುದಕ್ಕೆ ಭಯಪಡುವ ಸ್ಥಿತಿ ಇದೆ. ಇಲ್ಲಿ ದಾರಿಯ ಸುತ್ತ ಮಾತ್ರವಲ್ಲ, ಸುತ್ತಮುತ್ತಲಿನ ಜಾಗವೆಲ್ಲವೂ ಪೊದೆಗಳಿಂದ ಆವರಿಸಲ್ಪಟ್ಟಿದೆ. ಮನುಷ್ಯರು ಮಾತ್ರವಲ್ಲ ಬೇರೆ ಪ್ರಾಣಿಗಳ ಭಯವೂ ಕಾಡುತ್ತದೆ.

ಅಷ್ಟ ದಿಕ್ಕುಗಳಲ್ಲೂ ಭದ್ರತೆ ಇಲ್ಲ!
ಮಣ್ಣಪಳ್ಳ ಕೆರೆ ಎಂದರೆ ಯಾರು ಬೇಕಾದರೂ ಬರಬಹುದಾದ ಪ್ರದೇಶ. ಇಷ್ಟು ದೊಡ್ಡ ಪ್ರದೇಶದಲ್ಲಿ ಏನೇ ಆದರೂ ಯಾರೂ ಕೇಳುವವರಿಲ್ಲ. ಯಾವ ಪ್ರವೇಶ ದ್ವಾರದಲ್ಲೂ ಭದ್ರತೆ ಇಲ್ಲ, ಒಬ್ಬನೇ ಒಬ್ಬ ಸಿಬಂದಿ ಇಲ್ಲ.

ಇಲ್ಲಿ ಪ್ರವೇಶ ದ್ವಾರಗಳನ್ನು ಮುಚ್ಚುವ ಪರಿಪಾಠವೇ ಇಲ್ಲ. ದಿನದ 24 ಗಂಟೆಯೂ ಇದು ಮುಕ್ತ ಮುಕ್ತ. ಮುಚ್ಚಬೇಕೆಂದರೂ ಇದಕ್ಕೆ ಗೇಟುಗಳೇ ಇಲ್ಲ! ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಇದು ತೆರೆದಿರುತ್ತದೆ ಎಂಬ ಬೋರ್ಡ್‌ ಇದೆ. ಆದರೆ, ಏಳು ಗಂಟೆಯ ಬಳಿಕವೂ ಯಾರಾದರೂ ಇದ್ದಾರಾ ಎಂದು ಪರಿಶೀಲನೆ ನಡೆಸುವ ವ್ಯವಸ್ಥೆ ಇಲ್ಲಿಲ್ಲ. ರಾತ್ರಿಯ ನಂತರವೂ ಇಲ್ಲಿ ಕೆಲವರು ಪಾರ್ಟಿ ಮಾಡುತ್ತಿರುವುದಕ್ಕೆ ಕುರುಹುಗಳು ಕಾಣಸಿಗುತ್ತವೆ. ಇಲ್ಲಿ ಸ್ವಲ್ಪ ಮಟ್ಟಿಗಾದರೂ ಭದ್ರತೆಯ ಭಾವ ಒದಗಿಸುವವರು ಬೋಟಿಂಗ್‌ ವ್ಯವಸ್ಥೆ ನೋಡಿಕೊಳ್ಳುವವರು. ಆದರೆ, ಎಲ್ಲ ಭಾಗವನ್ನು ಅವರಾದರೂ ಹೇಗೆ ನೋಡಿಕೊಳ್ಳಬೇಕು!

ಆತಂಕ ಹುಟ್ಟಿಸುವ ಸಂಗತಿಗಳು

01 ಮಣ್ಣಪಳ್ಳ ಪ್ರವೇಶಕ್ಕೆ ಐದಾರು ದ್ವಾರಗಳಿವೆ. ಆದರೆ, ಒಂದೆರಡು ಹೊರತುಪಡಿಸಿ ಉಳಿದವು ಭಯಹುಟ್ಟಿಸುತ್ತವೆ.
02 ಪ್ರಸನ್ನ ಗಣಪತಿ ಪಕ್ಕದ ದ್ವಾರ ಬಿಟ್ಟರೆ ಬೇರೆ ಯಾವುದಕ್ಕೂ ಗೇಟುಗಳೇ ಇಲ್ಲ. ಯಾರು ಬೇಕಾದರೂ ನುಗ್ಗಬಹುದು.
03 ಇಡೀ ಕೆರೆಗೆ ಒಬ್ಬ ನಿರ್ವಾಹಕನಾಗಲೀ, ಕಾವಲುಗಾರನಾಗಲೀ ಇಲ್ಲ. ಅಪಾಯ ಸಂಭವಿಸಿದರೆ ಕೇಳುವವರೂ ಇಲ್ಲ.
04 ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಓಪನ್‌ ಎಂದು ಬೋರ್ಡಿದೆ. ಆದರೆ, ರಾತ್ರಿ ಇಡೀ ಇಲ್ಲೇ ಉಳಿದರೂ ಕೇಳುವವರಿಲ್ಲ.
05 ಬೆಳಗ್ಗೆ ಮತ್ತು ಸಂಜೆ ನಡಿಗೆದಾರರು, ವಾಯು ವಿಹಾರಿಗಳು ಬರುತ್ತಾರೆ. ನಡುವೆ ಪ್ರೇಮಿಗಳದೇ ಕಾರುಬಾರು!
06 ಟ್ರ್ಯಾಕ್‌ನ ಉದ್ದಕ್ಕೂ ಸುತ್ತಲೂ ಪೊದೆ, ಗಿಡ-ಗಂಟಿಗಳು ಬೆಳೆದಿವೆ. ಹೀಗಾಗಿ ಆತಂಕದಿಂದಲೇ ಹೆಜ್ಜೆ ಇಡಬೇಕು.
07 ಇಷ್ಟೆಲ್ಲ ಜನ ಬರುವ, ಮಣ್ಣಪಳ್ಳದಲ್ಲಿ ಭದ್ರತೆಗೆ ಸೂಕ್ತವಾದ ಸಿಸಿ ಕೆಮರಾ ವ್ಯವಸ್ಥೆ ಇಲ್ಲ.

ಎಲ್ಲೆಂದರಲ್ಲಿ ಪ್ರೇಮಿಗಳ ಪ್ರೇಮಾಲಾಪ!
ಮಣ್ಣಪಳ್ಳ ಕೆರೆ ಪ್ರದೇಶದಲ್ಲಿ ಹೇಳುವವರೂ ಕೇಳುವವರು ಯಾರೂ ಇಲ್ಲದೆ ಇರುವುದರಿಂದ ಪ್ರೇಮಿಗಳ ಸ್ವರ್ಗವಾಗಿದೆ! ಹಗಲಿಡೀ ಕಾಲೇಜಿನ ಹುಡುಗ-ಹುಡುಗಿಯರು ಮತ್ತು ಜೋಡಿಗಳು ಇಲ್ಲಿ ಬಂದು ಪ್ರೇಮಾಲಾಪದಲ್ಲಿ ತೊಡಗುವುದು ಮಾಮೂಲಾಗಿದೆ. ಕೆಲವೊಮ್ಮೆ ಅವರ ವರ್ತನೆಗಳು ಸಭ್ಯರಿಗೆ ಮುಜುಗರ ಉಂಟು ಮಾಡುವಂತಿರುತ್ತವೆ. ಕೆಲವು ದಿನಗಳ ಹಿಂದೆ ಪೊಲೀಸರು ಇಲ್ಲಿಗೆ ದಾಳಿ ನಡೆಸಿದಾಗ 20ಕ್ಕೂ ಅಧಿಕ ಜೋಡಿಗಳು ಸಿಕ್ಕಿಬಿದ್ದಿದ್ದವು. ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

9

Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್‌ ಜಾಮ್‌

8

Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ

7(1

Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ

5(1

Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.