Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
20 ಡಿ.ಸೆ. ವರೆಗೆ ಇಳಿದ ಕನಿಷ್ಠ ತಾಪಮಾನ
Team Udayavani, Jan 9, 2025, 7:05 AM IST
ಮಂಗಳೂರು: ಕರಾವಳಿಯಲ್ಲಿ ಮುಂಜಾನೆ ಚಳಿಯ ಕಚಗುಳಿ ತೀವ್ರಗೊಂಡಿದೆ. ಕೆಲವು ದಿನಗಳಿಂದ ಮಂಗಳೂರು ನಗರ ವ್ಯಾಪ್ತಿಯಲ್ಲಿ ಮುಂಜಾನೆ ಕನಿಷ್ಠ ತಾಪಮಾನ ಇಳಿಕೆಯಾಗಿ 20-21 ಡಿ.ಸೆ. ಆಸುಪಾಸಿನಲ್ಲಿದೆ. ಗ್ರಾಮಾಂತರ ಪ್ರದೇಶದಲ್ಲಿ ಇನ್ನೂ 1-2 ಡಿ.ಸೆ. ನಷ್ಟು ಇಳಿಕೆಯಾಗುತ್ತಿದೆ.
ಪ್ರಸ್ತುತ ಮಳೆ ಬಹುತೇಕ ದೂರವಾಗಿ ಆಕಾಶ ಶುಭ್ರವಾಗಿದೆ. ರಾತ್ರಿ ಇಬ್ಬನಿಯೂ ಬೀಳುತ್ತಿದ್ದು, ಗ್ರಾಮೀಣ ಭಾಗದಲ್ಲಿ ಮುಂಜಾನೆ ಮಂಜು ಕೂಡ ಕವಿದಿರುತ್ತಿದೆ. ಮುಂಜಾನೆ 8-9 ಗಂಟೆಯ ವರೆಗೂ ಚಳಿ ಅನುಭವವಾಗುತ್ತಿದೆ.
ಇನ್ನೂ ಕೆಲವು ದಿನ ತಾಪಮಾನ ಯಥಾಸ್ಥಿತಿಯಲ್ಲಿ ಇರಲಿದ್ದು, ಜ.15ರ ಬಳಿಕ ಏರಿಳಿತವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶೀತ ಗಾಳಿ ಮುನ್ಸೂಚನೆ
ಹವಾಮಾನ ಇಲಾಖೆಯು ಉತ್ತರ ಕನ್ನಡ ಜಿಲ್ಲೆ ಸಹಿತ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಶೀತ ಗಾಳಿ ಬೀಸುವ ಎಚ್ಚರಿಕೆ ನೀಡಿದ್ದು, ಕನಿಷ್ಠ ತಾಪಮಾನ ವಾಡಿಕೆಗಿಂತ ಇನ್ನೂ 2-4 ಡಿ.ಸೆ. ವರೆಗೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಇದರ ಪರಿಣಾಮದಿಂದ ಕರಾವಳಿಯಲ್ಲೂ ತಾಪಮಾನದಲ್ಲಿ ತುಸು ಇಳಿಕೆಯಾಗಬಹುದು.
ಮಧ್ಯಾಹ್ನ ಸೆಕೆ
ಮುಂಜಾನೆ ವೇಳೆ ಚಳಿ ವಾತಾವರಣವಿದ್ದರೂ, ಹೊತ್ತೇರುತ್ತಿದ್ದಂತೆ ಬಿಸಿಲ ಝಳದಿಂದ ಉರಿ ಸೆಕೆ ಅನುಭವವಾಗುತ್ತಿದೆ. ಜತೆಗೆ ಗಾಳಿಯಲ್ಲಿ ತಣ್ಣನೆಯ ಅನುಭವವೂ ಆಗುತ್ತಿದೆ. ಸಂಜೆಯಾಗುತ್ತಲೇ ಮತ್ತೆ ಚಳಿ ತೀವ್ರಗೊಳ್ಳುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.