ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ
Team Udayavani, Jan 8, 2025, 11:57 PM IST
ಮಂಗಳೂರು: ಪೊಲೀಸರನ್ನು, ನಾಗರಿಕರನ್ನು ಹತ್ಯೆ ಮಾಡಿ ಸಮಾಜಘಾತಕ ಶಕ್ತಿಯಾಗಿ ಬೆಳೆದ ನಕ್ಸಲರಿಗೆ ಕೆಂಪುಹಾಸು ಹಾಕಲಾ ಗುತ್ತಿದೆ. ಕಾಡಿನಲ್ಲಿದ್ದವರಿಗೆ ನಾಡಿನಲ್ಲಿ ಚಟುವಟಿಕೆ ನಡೆಸಲು ಪ್ರೋತ್ಸಾ ಹ ನೀಡಿದಂತಾಗಿದೆ. ಮುಖ್ಯಮಂತ್ರಿಗಳ ಈ ನಡೆ ಖಂಡನೀಯ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಪತ್ರಕರ್ತರ ಜತೆ ಮಾತ ನಾಡಿದ ಅವರು, ಸಮಾಜ ದಲ್ಲಿ ಅಶಾಂತಿಯನ್ನು ಮೂಡಿಸಿ ದವರನ್ನು ಈ ರೀತಿ ಸ್ವಾಗತಿಸಿದರೆ ಇನ್ನಷ್ಟು ಮಂದಿ ಪ್ರಚೋದನೆಗೆ ಒಳಪಡುತ್ತಾರೆ. ಸರಕಾರವಾಗಿ ಕಾನೂನು ಸುವ್ಯವಸ್ಥೆ ಕಾಪಾ ಡುವಂತಿದ್ದರೆ ಅವರನ್ನು ನ್ಯಾಯಾಲಯದಲ್ಲಿ ಶರಣಾಗತಿ ಮಾಡಿಸಬೇಕಿತ್ತು. ಇದರಲ್ಲೂ ಸಿಎಂ ಜನಪ್ರಿಯತೆ ಪಡೆಯಲು ಹೊರಟಿದ್ದಾರಾ ಎಂದರು.
ನಕ್ಸಲರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆಗೆ ರಾಜ್ಯ ಸರಕಾರ ಮುಂದಾಗಿದೆ. ರಾಜ್ಯದಲ್ಲಿ ರಸ್ತೆ, ಸೇತುವೆಗಳಿಲ್ಲದ ಹಲವು ಕುಗ್ರಾಮ ಗಳಿವೆ. ಪಶ್ಚಿಮ ಘಟ್ಟ ತಪ್ಪಲಿನ ಹಲವು ಗ್ರಾಮಗಳಿಗೆ ಇಂದಿಗೂ ವಿದ್ಯುತ್ ಇಲ್ಲ. ಈ ಸಮಸ್ಯೆ ಗಳ ಪರಿಹಾರಕ್ಕೆ ಯಾವ ಕ್ರಮ ಕೈಗೊಳ್ಳ ಲಾಗಿದೆ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.