Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ
Team Udayavani, Jan 9, 2025, 12:02 AM IST
ಮಂಗಳೂರು: ಮುಕ್ಕದ ಶ್ರೀನಿವಾಸ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಅಪರೂಪ ಎಂಬಂತೆ 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆ ಸಲಾಗಿದೆ. 90 ವರ್ಷದವರಿಗೆ ತೆರೆದ ಹೃದಯದ ಶಸ್ತ್ರಚಿಕಿತ್ಸೆ ನಡೆಸುವುದು ತೀರಾ ವಿರಳ.
ಮಂಜೇಶ್ವರದ ರಾಧಾ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಹೃದಯದ ಒಳಗೆ ಎಡ ಭಾಗದಲ್ಲಿ ಗಡ್ಡೆ ಅಂಶ ಕಂಡು ಬಂದಿತ್ತು. ಈ ಅಡಚಣೆಯಿಂದಾಗಿ ಉಸಿರಾಟದ ತೊಂದರೆ, ಎದೆ ಬಡಿತದಲ್ಲಿ ಏರಿ ಳಿತ ಆಗುತ್ತಿತ್ತು. ಒಂದು ಹೆಜ್ಜೆ ಇಡಲು ಹಾಗೂ ಮಲಗಲು ಕಷ್ಟ ಪಡುತ್ತಿದ್ದರು. ಆಸ್ಪತ್ರೆಯಲ್ಲಿ ಏಕೋ ಕಾರ್ಡಿಯೋಗ್ರಾಫಿಯಲ್ಲಿ ಹೃದಯದ ಎಡ ಭಾಗದಲ್ಲಿ ಗಡ್ಡೆಯು 6 ಸೆ.ಮೀ. ಹಾಗೂ 5 ಸೆ.ಮೀ. ಗಾತ್ರದಲ್ಲಿ ಆವರಿ ಸಿದ್ದು, ಎಡ ಭಾಗದಲ್ಲಿರುವ ಮೈಟ್ರಲ್ ಕವಾಟದ ಮೂಲಕ ಎಡ ವೆಂಟ್ರಿಕಲ್‌ಗೆ ಬರುತ್ತಿತ್ತು. ಇದರಿಂ ದಾಗಿ ಮೈಟ್ರಲ್ ಕಾರ್ಯವೈಖರಿಗೆ ಧಕ್ಕೆಯಾಗುತ್ತಿತ್ತು. ವೈದ್ಯರು ತುರ್ತು ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ನಡೆಸಿದರು. ಶಸ್ತ್ರಚಿಕಿತ್ಸೆ ಬಳಿಕ ಕೇವಲ 5 ದಿನಗಳಲ್ಲಿ ರೋಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ದ್ದಾರೆ.
ಶಸ್ತ್ರಚಿಕಿತ್ಸೆಯಲ್ಲಿ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ| ಅಮಿತ್ ಕಿರಣ್, ಅರಿವಳಿಕೆ ತಜ್ಞ ಡಾ| ಬಾಲಕೃಷ್ಣ ಭಟ್, ಸಹಾಯಕ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಹರೀಶ್ ಶೆಟ್ಟಿ, ಡಾ| ಸಿದ್ದಾರ್ಥ್ ಎಸ್., ಡಾ| ಮಧು ಭಾಗವಹಿಸಿದ್ದರು. ಆಸ್ಪತ್ರೆಯ ಆಡಳಿತ ಮಂಡಳಿ ಸಹಕಾರದಿಂದ ಬಹಳ ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.