Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
ಅನುಮತಿ ಸಿಕ್ಕ ಬಳಿಕ ಮತ್ತೆ ಡಿನ್ನರ್ ಪಾರ್ಟಿ: ಸಚಿವ
Team Udayavani, Jan 9, 2025, 7:40 AM IST
ಬೆಂಗಳೂರು: ಊಟ ನಮ್ಮದು, ಅಜೆಂಡಾ ನಮ್ಮದು. ಬೇರೆಯವರಿಗೆ ಆತಂಕ ಏಕೆ? ಎಸ್ಸಿ, ಎಸ್ಟಿ ಶಾಸಕ, ಸಚಿವರ ಔತಣಕೂಟ ಈಗ ಒಂದು ವಾರ ಮುಂದೆ ಹೋಗಬಹುದಷ್ಟೇ. ಅನುಮತಿ ಸಿಕ್ಕ ಮೇಲೆ ಡಿನ್ನರ್ ಏರ್ಪಡಿಸಬಹುದು ಎಂದು ಹೇಳುವ ಮೂಲಕ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಡಿನ್ನರ್ ಪಾಲಿಟಿಕ್ಸ್ ಮುಂದುವರಿಯುವ ಬಗ್ಗೆ ಸುಳಿವು ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೆ ಈ ರೀತಿಯ ಸಭೆಗಳು ಬೇಡ ಅಂತ ಅಧ್ಯಕ್ಷರು ಹೇಳ್ತಾರೆ ಅಷ್ಟೇ. ಇದೆಕ್ಕೆಲ್ಲ ಸಾಮಾನ್ಯವಾಗಿ ಒಂದೇ ಬಣ್ಣ ಇರುತ್ತದೆ. ಆದರೆ, ಅದು ನಂತರದಲ್ಲಿ ಏಳು ಬಣ್ಣಗಳಾಗಿ ಬಿಡುತ್ತದೆ. ಹಾಗಾಗಿ, ತುಸು ಗೊಂದಲ ಉಂಟಾಗುತ್ತದೆ. ಅದೇನೇ ಇರಲಿ, ಈಗ ಅನುಮತಿ ಪಡೆದರೆ ಯಾವುದೇ ಗೊಂದಲಗಳೇ ಇರುವುದಲ್ಲ’ ಎಂದು ಹೇಳಿದರು.
ಈ ಬಾರಿಯ ಡಿನ್ನರ್ ಸಭೆಗೆ ಪಕ್ಷದ ಅಧ್ಯಕ್ಷರೂ ಬರಲಿದ್ದಾರಾ ಎಂದು ಕೇಳಿದಾಗ, “ಪ್ಯಾಚ್ವರ್ಕ್ ಮಾಡಬೇಕು ಅಂದ್ರೆ ಅವರನ್ನೂ ಕರೆಯಲೇಬೇಕಾಗುತ್ತದೆ’ ಎಂದು ಸೂಚ್ಯವಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.: ಅನರ್ಹ “ಬಿಪಿಎಲ್’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ
“ಕಾಂಗ್ರೆಸ್ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’
BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್.ಟಿ. ಸೋಮಶೇಖರ್
Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್. ಸಂತೋಷ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.