Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು


Team Udayavani, Jan 9, 2025, 5:45 PM IST

web

ಚಳಿಗಾಲದಲ್ಲಿ (Winter) ವೈರಲ್‌ ಜ್ವರ, ನೆಗಡಿ, ಕಫ, ಮೂಗು ಕಟ್ಟಿದಂತಾಗುವುದು, ವೈರಸ್‌ (Virus) ಹರಡುವುದು ಸಾಮಾನ್ಯ. ಅದರಿಂದ ನಮ್ಮನ್ನು ನಾವು ರಕ್ಷಿಸಿಕೊಂಡು ಜಾಗೃತರಾಗುವುದು, ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ.

ಆಯುರ್ವೇದದ ಪ್ರಕಾರ, ಚಳಿಗಾಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಋತುವಾಗಿದೆ. ಶೀತ ಹವಾಮಾನ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಕಾರಣವಾಗುತ್ತದೆ. ಹೊಸ ಹವಾಮಾನಕ್ಕೆ ಹೊಂದಿಕೊಳ್ಳಲು ದೇಹ ಥರ್ಮೋರೆಗ್ಯುಲೇಶನ್‌ (Thermoregulation) ಗೆ ಒಳಗಾಗುತ್ತದೆ.

ಶೀತ ವಾತಾವರಣ ಜನರನ್ನು ಆಲಸ್ಯಗೊಳಿಸುತ್ತದೆ. ಬೆಳಿಗ್ಗೆ ಇಬ್ಬನಿ ಬೀಳುವುದರಿಂದಾಗಿ ಜನರಿಗೆ ಹೊರಬರಲು ಕಷ್ಟವಾಗುತ್ತದೆ. ಶೀತ ವಾತಾವರಣ ಎದುರಿಸಲು ಬೆಚ್ಚಗಿನ ಬಟ್ಟೆ ಮತ್ತು ಬಿಸಿನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಬೆಳಿಗ್ಗೆ ವ್ಯಾಯಾಮ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ಆದರೆ, ಬೆಳಗ್ಗೆ ಎದ್ದು ವ್ಯಾಯಾಮ ಮಾಡಲು ಮನಸು ಬರುವುದೇ ಇಲ್ಲ.

ಕಡಿಮೆ ದೈಹಿಕ ಚಟುವಟಿಕೆ, ತಾಪಮಾನದ ಕುಸಿತದಿಂದಾಗಿ ನಾವು ಶೀತ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತೇವೆ. ಕೆಲವೊಮ್ಮೆ ಈ ಹವಾಮಾನ ಬದಲಾವಣೆಯ ಪರಿವರ್ತನೆ ಹಲವಾರು ಚಳಿಗಾಲದ ರೋಗಗಳು ಆವರಿಸಬಹುದು. ಚಳಿಗಾಲದಲ್ಲಿ ಅನಾರೋಗ್ಯಕ್ಕೆ ಒಳಗಾಗುವವರ ಸಂಖ್ಯೆ ಕಡಿಮೆಯಾಗಿಲ್ಲ.

ಚಳಿಗಾಲ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ನಮ್ಮ ದೇಹವನ್ನು ಪೋಷಿಸುವ ಕಾಲವಾಗಿದೆ. ಪೌಷ್ಠಿಕಾಂಶವುಳ್ಳ ಬೆಚ್ಚಗಿನ ಆಹಾರ ಸೇವಿಸುವುದು, ಚೆನ್ನಾಗಿ ನಿದ್ದೆ ಮಾಡುವುದು ಮತ್ತು ಸಕ್ರಿಯವಾಗಿರುವುದು ಚಳಿಗಾಲದಲ್ಲಿ ಆರೋಗ್ಯವಾಗಿರಲು ಕೆಲ ಪ್ರಮುಖ ಅಂಶಗಳಾಗಿವೆ.

ಚಳಿಗಾಲದಲ್ಲಿ ಕೆಲ ಸುಲಭವಾದ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ನಾವು ಆರೋಗ್ಯಕರ ಚಳಿಗಾಲವನ್ನು ಆನಂದಿಸಬಹುದು. ಹಾಗಾಗಿ, ಚಳಿಗಾಲದಲ್ಲಿ ಆರೋಗ್ಯವಾಗಿರಲು ಕೆಲ ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ:

ಆರೋಗ್ಯಕರ ಆಹಾರ ಅಥವಾ ಆಹಾರ:

ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು ಚಳಿಗಾಲದಲ್ಲಿ ಶೀತ ಮತ್ತು ಜ್ವರಕ್ಕೆ ಹೆಚ್ಚು ಒಳಗಾಗುತ್ತಾರೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಮತೋಲಿತ ಆಹಾರ ಸೇವಿಸುವುದು ಅವಶ್ಯಕ. ಬೇಳೆ-ಕಾಳುಗಳು, ಧಾನ್ಯಗಳು, ಮಾಂಸ, ಕೋಳಿ, ಮೀನು, ಒಣ ಹಣ್ಣು, ಬೀಜಗಳು, ಮಸಾಲೆಗಳು ಮತ್ತು ಗಿಡಮೂಲಿಕೆಗಳು ಮತ್ತು ಸಾಕಷ್ಟು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಉತ್ತಮ.

ವಿಟಮಿನ್ ಸಿ (ಸಿಟ್ರಸ್ ಹಣ್ಣುಗಳು) ಯಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಏಕೆಂದರೆ ಅವು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಮತ್ತು ದೇಹವನ್ನು ಆರೋಗ್ಯವಾಗಿಡುತ್ತವೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಆಹಾರಗಳೆಂದರೆ ಜೋಳ, ರಾಗಿ, ಬೆಲ್ಲ, ಮೊಟ್ಟೆ, ಸಾಸಿವೆ ಎಲೆಗಳು ಮತ್ತು ಗಿಡಮೂಲಿಕೆಗಳು.

ವಿಟಮಿನ್ ಸೇವನೆ ಸಾಮಾನ್ಯವಾಗಿ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ. ವಿಟಮಿನ್ ಸಿ ಶೀತ ಮತ್ತು ಕೆಮ್ಮಿನಿಂದ ರಕ್ಷಿಸುತ್ತದೆ. ಸಿಟ್ರಸ್ ಹಣ್ಣುಗಳಾದ ಕಿತ್ತಳೆ ಮತ್ತು ನಿಂಬೆಹಣ್ಣುಗಳು ವಿಟಮಿನ್‌ನ ಅತ್ಯುತ್ತಮ ಮೂಲಗಳಾಗಿವೆ.

ವ್ಯಾಯಾಮ:

ಆರೋಗ್ಯಕರ ಜೀವನಶೈಲಿಗೆ ದೈಹಿಕ ಚಟುವಟಿಕೆ ಅತ್ಯಗತ್ಯ. ಚಳಿಗಾಲದ್ದುದ್ದಕ್ಕೂ ಫಿಟ್ ಆಗಿರಲು ದೈಹಿಕ ಚಟುವಟಿಕೆ ಒಂದು ಪ್ರಮುಖ ಅಂಶವಾಗಿದೆ. ವ್ಯಾಯಾಮ ಮಾಡುವುದರಿಂದ ದೇಹ ಬೆಚ್ಚಗಿರುತ್ತದೆ. ಶೀತ ವಾತಾವರಣಕ್ಕೆ ವ್ಯಾಯಾಮ ಅತ್ಯಂತ ಅವಶ್ಯಕ. ಈ ಹವಾಮಾನ ಹೊರಾಂಗಣ ವ್ಯಾಯಾಮವನ್ನು ಕಷ್ಟಕರವಾಗಿಸುತ್ತದೆ.ತೀವ್ರವಾದ ಅಥವಾ ಬಿರುಸಾದ ವ್ಯಾಯಾಮ ಮಾಡಬೇಕಾಗಿಲ್ಲ. ಮೆಟ್ಟಿಲುಗಳನ್ನು ಹತ್ತುವುದು, ಬೆಳಿಗ್ಗೆ 10 ಪುಲ್-ಅಪ್ ವ್ಯಾಯಾಮ, ಕಾರ್ಡಿಯೋ ವ್ಯಾಯಾಮ, ಜುಂಬಾ, ಸ್ಕಿಪ್ಪಿಂಗ್ ರೋಪ್ ಮತ್ತು ಯೋಗದಂತಹ ಒಳಾಂಗಣ ಚಟುವಟಿಕೆಗಳನ್ನು ಮಾಡಿದರೆ ಸಾಕು.

ವ್ಯಾಯಾಮ ಫಿಟ್ ಆಗಲು ಮತ್ತು ಮಾನಸಿಕ ಒತ್ತಡ, ಆಯಾಸ, ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ನಿಯಮಿತ ಚಟುವಟಿಕೆ ತೂಕ ಹೆಚ್ಚಾಗುವುದು, ಟೈಪ್ 2 ಮಧುಮೇಹ, ಹೃದಯ ಕಾಯಿಲೆ, ಪಾರ್ಶ್ವವಾಯುಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ತ್ವಚೆಯ ಆರೈಕೆ:

ಶೀತ ಹವಾಮಾನ ತ್ವಚೆಯನ್ನು ಹಾನಿಗೊಳಿಸುತ್ತದೆ. ಈ ಪರಿಣಾಮ ಒಣ ಮತ್ತು ತುರಿಕೆ ಚರ್ಮ, ಒಡೆದ ತುಟಿಗಳು ಮತ್ತು ಹಿಮ್ಮಡಿಗಳು ಬಿರುಕು ಬಿಡುತ್ತವೆ. ಚಳಿಗಾಲದಲ್ಲಿ ಚರ್ಮದ ಆರೈಕೆ ಮುಖ್ಯ. ಸೂರ್ಯನ ರಕ್ಷಣೆಯ ಕ್ರೀಮ್‌ (Sun protection cream) ಹಚ್ಚುವುದು, ಮಾಯಿಶ್ಚರೈಸೇಶನ್ ಹಚ್ಚಿಕೊಳ್ಳುವುದರಿಂದ ಒಣ ತ್ವಚೆಯಿಂದ ಮುಕ್ತಿ ಪಡೆಯಬಹುದು. ನೀರಿನ ಸೇವನೆ ಹೆಚ್ಚಿಸುವುದನ್ನು ಉತ್ತಮ.

ನೀರು:

ಭಾರತದಲ್ಲಿ ಚಳಿಗಾಲ ತುಂಬಾ ಶುಷ್ಕವಾಗಿರುತ್ತದೆ. ತಾಪಮಾನದಲ್ಲಿನ ಕುಸಿತದಿಂದಾಗಿ ತೇವಾಂಶದಲ್ಲಿ ಇಳಿಕೆ ಕಂಡುಬರುತ್ತದೆ. ಇದರಿಂದ ಚಳಿಗಾಲದಲ್ಲಿ ಚರ್ಮ ಒಣಗುವುದು, ಒಡೆಯುವುದು ಸಾಮಾನ್ಯ. ಶುಷ್ಕ ಚರ್ಮವನ್ನು ಹೊರತುಪಡಿಸಿ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು. ಉತ್ತಮವಾದ ಮಾಯಿಶ್ಚರೈಸರ್ ಸಹಾಯದಿಂದ ತ್ವಚೆಯನ್ನು ಆರೋಗ್ಯವಾಗಿರಿಸಿಕೊಳ್ಳಿ. ದೇಹವನ್ನು ಸಾಕಷ್ಟು ನೀರಿನಿಂದ ಹೈಡ್ರೇಟ್ ಮಾಡಿಕೊಳ್ಳಿ. ಪ್ರತಿದಿನ ಅಗತ್ಯ ಪ್ರಮಾಣದ ನೀರನ್ನು ಕುಡಿಯಿರಿ ಮತ್ತು ಹೈಡ್ರೇಟೆಡ್‌ ಆಗಿರಿ. ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ ಎಂದು ನೀರು ಕುಡಿಯುವುದನ್ನು ಕಡಿಮೆ ಮಾಡಬೇಡಿ. ನೀರಿನ ಬದಲು ಪರ್ಯಾಯವಾಗಿ ಗ್ರೀನ್ ಟೀ, ಎಳನೀರು, ಹಣ್ಣಿನ ಜ್ಯೂಸ್, ನಿಂಬೆ ಚಹಾ ಮತ್ತು ಗಿಡಮೂಲಿಕೆ ಚಹಾ ಸೇವನೆಯೂ ಮಾಡಬಹುದು.

ನಿದ್ರೆ:

ಉತ್ತಮ ಪ್ರಮಾಣದ ನಿದ್ರೆ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಕಾರ್ಟಿಸೋಲ್ ಎಂಬ ಸ್ಟ್ರೇಸ್ ಹಾರ್ಮೋನ್ ಅನ್ನು ನಿವಾರಿಸುತ್ತದೆ. ಕ್ಯಾಲೊರಿಗಳನ್ನು ಕರಗಿಸಲು ಕೂಡಾ ಸಹಕಾರಿಯಾಗಿದೆ. ಹೃದಯ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು, ತೂಕ ಹೆಚ್ಚಾಗುವುದನ್ನು ತಡೆಯಲು, ಜ್ಞಾಪಕ ಶಕ್ತಿ ವೃದ್ಧಿಗೆ, ಆತಂಕ, ಒತ್ತಡ ಕಡಿಮೆ ಮಾಡಲು ಪ್ರತಿ ರಾತ್ರಿ 7-8 ಗಂಟೆಗಳ ಕಾಲ ನಿದ್ರೆ ಮಾಡುವುದು ಅತೀ ಅಗತ್ಯ. ನಮ್ಮ ಮೆದುಳು ಮತ್ತು ದೇಹ ಉತ್ತಮವಾಗಿ ಕಾರ್ಯನಿರ್ವಹಿಸಲು ನಿದ್ದೆ ಸಹಾಯ ಮಾಡುತ್ತದೆ.

ನೈರ್ಮಲ್ಯ:

ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಕಡಿಮೆ ತಾಪಮಾನದಲ್ಲಿ ಅಭಿವೃದ್ಧಿ ಹೊಂದುತ್ತದೆ. ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಸಾಮಾನ್ಯ ಶೀತ, ಕೆಮ್ಮು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ, ಸೂಕ್ಷ್ಮಾಣುಗಳ ಹರಡುವಿಕೆಯನ್ನು ತಡೆಗಟ್ಟಲು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ದೂರವಿರಲು ಆಗಾಗ ಕೈಗಳನ್ನು ತೊಳೆಯಿರಿ. ಅದರೊಂದಿಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಅತ್ಯಗತ್ಯ. ಹೀಗೆ ಮಾಡುವುದರಿಂದ ಆಸ್ತಮಾ, ಅಲರ್ಜಿಗಳು, ಶೀತಗಳು ಮತ್ತು ಕೆಮ್ಮಿನ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ಆರೋಗ್ಯವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ:

ಚಳಿಗಾಲದ ಮುನ್ನೆಚ್ಚರಿಕೆಗಳು ನಿಯಮಿತವಾದ ಆರೋಗ್ಯ ತಪಾಸಣೆಯನ್ನು ಆರಿಸಿಕೊಳ್ಳುವ ಮೂಲಕ ಆರೋಗ್ಯದ ಸ್ಥಿತಿಗತಿಗಳನ್ನು ಪರಿಶೀಲಿಸುವುದನ್ನು ಒಳಗೊಂಡಿರುತ್ತದೆ. ಶೀತ ಹವಾಮಾನ ಆಸ್ತಮಾ, ಜ್ವರ, ಗಂಟಲು ನೋವು, ಕೀಲು ನೋವು ಮತ್ತು ಹೃದಯಾಘಾತದ ಅಪಾಯದಂತಹ ಆರೋಗ್ಯ ಸಮಸ್ಯೆಗಳನ್ನು ಪ್ರಚೋದಿಸುತ್ತದೆ. ಕಡಿಮೆ ತಾಪಮಾನ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತದೆ. ಆಗಾಗ ಹೆಲ್ತ್ ಚೆಕಪ್ ಮಾಡಿಸಿಕೊಳ್ಳುವುದು ಚಳಿಗಾಲದ ಕಾಯಿಲೆಗಳಿಂದ ದೂರವಿರಿಸಿ ತಂಪಾದ ವಾತಾವರಣದಲ್ಲಿಯೂ ಉತ್ತಮ ಆರೋಗ್ಯವನ್ನು ಆನಂದಿಸಲು ಉತ್ತಮ ಮಾರ್ಗವಾಗಿದೆ.

ಧೂಮಪಾನ ತ್ಯಜಿಸಿ:

ಧೂಮಪಾನ ಎಲ್ಲಾ ಹವಾಮಾನದಲ್ಲೂ ಅಪಾಯಕಾರಿಯೇ. ಆದರಲ್ಲೂ ವಿಶೇಷವಾಗಿ ಚಳಿಗಾಲದಲ್ಲಿ ಹಾನಿಕಾರಕ. ಶೀತ ಗಾಳಿ ಮತ್ತು ಹೊಗೆ ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಶ್ವಾಸಕೋಶದ ಶ್ವಾಸನಾಳದ ಊತ ಮತ್ತು ಕಿರಿದಾಗುವಿಕೆಗೆ ಕಾರಣವಾಗುತ್ತದೆ. ಉಸಿರಾಟದ ತೊಂದರೆ ಉಂಟಾಗುತ್ತದೆ. ನಿಷ್ಕ್ರಿಯ ಮತ್ತು ಸಕ್ರಿಯ ಧೂಮಪಾನಿಗಳು ಆರೋಗ್ಯವಂತ ಜನರಿಗಿಂತ ಶೀತಗಳು, ಜ್ವರ ಮತ್ತು ಇತರ ವೈರಲ್ ಸೋಂಕುಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಧೂಮಪಾನ ಚಳಿಗಾಲದಲ್ಲಿ ಉಸಿರಾಟದ ಸೋಂಕುಗಳಿಗೆ ಒಳಗಾಗುವಂತೆ ಮಾಡುತ್ತದೆ. ಆದ್ದರಿಂದ ಆರೋಗ್ಯ ಕಾಪಾಡಿಕೊಳ್ಳಲು ಧೂಮಪಾನ ತ್ಯಜಿಸುವುದು ಉತ್ತಮ ಮಾರ್ಗ.

ವಿಟಮಿನ್ ಡಿ:

ಮೂಳೆಗಳ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಗೆ ವಿಟಮಿನ್ ಡಿ ಅತ್ಯಗತ್ಯ. ಚಳಿಗಾಲದಲ್ಲಿ, ಬಟ್ಟೆಯ ಬಹು ಪದರಗಳ ಕಾರಣದಿಂದಾಗಿ ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯಲು ಸಾಧ್ಯವಾಗದಿರಬಹುದು. ಕಚೇರಿಗೆ ಹೋಗುವವರು ಹೆಚ್ಚು ಸಮಯ ಮನೆಯೊಳಗೆ ಇರುತ್ತಾರೆ. ಇದು ವಿಟಮಿನ್ ಡಿ ಕೊರತೆಗೆ ಕಾರಣವಾಗಬಹುದು. ಮೂಳೆ ನೋವು ಅಥವಾ ಬೆನ್ನು ಅಸ್ವಸ್ಥತೆ, ಕೀಲು ನೋವು, ಆಲಸ್ಯ, ಸುಸ್ತು, ವಿಳಂಬವಾದ ಗಾಯ, ಕೂದಲು ಉದುರುವಿಕೆ, ಆಗಾಗ್ಗೆ ಸೋಂಕುಗಳು, ಸ್ನಾಯು ನೋವು ಮತ್ತು ಆತಂಕದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಚಳಿಗಾಲದಲ್ಲಿ ವಿಟಮಿನ್ ಡಿ ಭರಿತ ಆಹಾರವನ್ನು ಸೇವಿಸಿ, ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯಿರಿ. ನೀವು ವಿಟಮಿನ್ ಡಿ ಕೊರತೆ ಹೊಂದಿದ್ದರೆ, ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳಾದ ಮೀನುಗಳು, ಮೊಟ್ಟೆಗಳು ಮತ್ತು ಅಣಬೆಗಳನ್ನು ಹೆಚ್ಚು ಸೇವಿಸಿ.

ನಿಮ್ಮನ್ನು ಬೆಚ್ಚಗೆ ಇಟ್ಟುಕೊಳ್ಳಿ:

ನೀವು ಹೊರಗೆ ಹೋಗುವಾಗ ಬೆಚ್ಚಗಾಗಲು ಉಣ್ಣೆಯ ಬಟ್ಟೆಗಳನ್ನು ಧರಿಸಿ. ಕುತ್ತಿಗೆ ಮತ್ತು ಕಾಲುಗಳನ್ನು ಸರಿಯಾಗಿ ಮುಚ್ಚಿಕೊಳ್ಳಿ. ದೇಹದ ಈ ಎರಡು ಭಾಗಗಳು ಶೀತ ಹವಮಾನಕ್ಕೆ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಸಾಧ್ಯವಾದಷ್ಟು ಸೂರ್ಯನ ಬೆಳಕಿನಲ್ಲಿರಲು ಪ್ರಯತ್ನಿಸಿ.

ಊಟದ ನಂತರ ಸ್ವಲ್ಪ ವಾಕಿಂಗ್ ಮಾಡುವುದು ಉತ್ತಮ. ವೇಗವಾಗಿ ನಡೆಯಬೇಕಾದ ಅಗತ್ಯವಿಲ್ಲ. ನಿಧಾನವಾಗಿ ನಡೆದರೂ ಬಿಸಿಲಿನ ತಾಪವನ್ನು ಆನಂದಿಸಿ. ತಣ್ಣೀರು ಕುಡಿಯಬೇಡಿ. ಬಿಸಿಯಾದ ನೀರು, ಬಿಸಿ ಚಹಾ, ಕಾಫಿ ಅಥವಾ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

-ಕಾವ್ಯಶ್ರೀ

ಟಾಪ್ ನ್ಯೂಸ್

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Naxal Movement End:1990 To 2025:ಕರ್ನಾಟಕ ನಕ್ಸಲೀಯರ ಶಸ್ತ್ರಾಸ್ತ್ರ ಹೋರಾಟದ ಯುಗಾಂತ್ಯ…

Naxal Movement End:1990 To 2025:ಕರ್ನಾಟಕ ನಕ್ಸಲೀಯರ ಶಸ್ತ್ರಾಸ್ತ್ರ ಹೋರಾಟದ ಯುಗಾಂತ್ಯ…

1-delhi

Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!

Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.