Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
ಮಳೆಗಾಲದಲ್ಲಿ ಮೋರಿ ಬ್ಲಾಕ್ ಆಗಿ ಗದ್ದೆ ಮನೆಗಳಿಗೆ ನೀರು
Team Udayavani, Jan 9, 2025, 1:12 PM IST
ಕಿನ್ನಿಗೋಳಿ: ಮೂಲ್ಕಿ – ಕಿನ್ನಿಗೋಳಿ ರಾಜ್ಯ ಹೆದ್ದಾರಿ 70ರ ಕೆಂಚನಕೆರೆಯಲ್ಲಿ ಮಳೆಗಾಲದಲ್ಲಿ ಅಗಲ ಕಿರಿದಾದ ಮೋರಿ ಬ್ಲಾಕ್ ಆಗಿ ಕೃತಕ ನೆರೆ ಸಮಸ್ಯೆ ಉಂಟಾಗುತ್ತಿತ್ತು. ಇದರಿಂದ ಸಮೀಪದ ಭತ್ತದ ಗದ್ದೆ ಮತ್ತು ಮನೆಗಳಿಗೆ ನೆರೆ ನೀರು ನುಗ್ಗಿ ಭಾರಿ ನಷ್ಟ ಉಂಟಾಗುತ್ತಿತ್ತು. ಈ ಬಗ್ಗೆ ಉದಯವಾಣಿ ಸುದಿನದಲ್ಲಿ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ಮೋರಿ ನಿರ್ಮಾಣಕ್ಕೆ ಮುಂದಾಗಿದ್ದು, ಕೆಲಸ ಪ್ರಗತಿಯಲ್ಲಿದೆ.
ಕೆಂಚನಕೆರೆ ಅಂಗರಗುಡ್ಡೆಯ ಪಕ್ಕದಲ್ಲಿ ಲೇಔಟ್ ಮಾಡಲು ಜಾಗ ಸಮತಟ್ಟು ಮಾಡಿದ್ದು ಅಲ್ಲಿನ ಮಣ್ಣು ಕೆಸರು ಬಂದು ಇಲ್ಲಿನ ಮೋರಿಗಳಲ್ಲಿ ತುಂಬಿದ್ದರಿಂದ ಸಮಸ್ಯೆಯಾಗಿತ್ತು. ಮೋರಿಯಲ್ಲಿ ಕುಡಿಯು ನೀರಿನ ಪೈಪ್‌ಗ್ಳನ್ನು ಅಳವಡಿಸಿರುವುದರಿಂದ ಸಮಸ್ಯೆ ಉಲ್ಬಣಿಸಿದೆ ಎಂದು ಸ್ಥಳೀಯರಾದ ಶ್ರೀಧರ್ ಕಾಮತ್ ಮಾಹಿತಿ ನೀಡಿದ್ದಾರೆ. ಸ್ಥಳೀಯರಾದ ನಾರಾಯಣ ಕಾಮತ್ ಅವರು ಕಿಲ್ಪಾಡಿ ಗ್ರಾಮ ಪಂಚಾಯತ್‌ಗೆ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ವಿಕಾಸ್ ಶೆಟ್ಟಿ ಅವರು ಲೋಕೋಪಯೋಗಿ ಇಲಾಖೆ ಹಾಗೂ ಶಾಸಕರಿಗೂ ಮನವಿ ಮಾಡಿದ್ದರು. ಇದೀಗ ಇಲಾಖೆಯು ಹೊಸ ಮೋರಿ ನಿರ್ಮಾಣಕ್ಕೆ ಮುಂದಾಗಿದೆ.
ತಿಂಗಳಲ್ಲಿ ಕಾಮಗಾರಿ ಮುಕ್ತಾಯ
ನಾಲ್ಕು ಅಡಿ ಅಗಲದ ಮೋರಿ ನಿರ್ಮಿಸಿ ಇಕ್ಕೆಲಗಳಲ್ಲಿ ಕಾಂಕ್ರೀಟ್ ಪಿಟ್ ಆಳವಡಿಸಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಲಾಗುವುದು. ಒಂದು ಬದಿಯಲ್ಲಿ ಚರಂಡಿಯ ಬದಿಯ ಮಣ್ಣು ತೆರವುಗೊಳಿಸಿ ಅಗಲ ಮಾಡಲಾಗುವುದು. ಸುಮಾರು ಒಂದು ತಿಂಗಳ ಒಳಗೆ ಕಾಮಗಾರಿ ನಡೆಸಿ ಮುಗಿಸಿ ಸಾರ್ವಜನಿಕರ ಸೇವೆಗೆ ಸಜ್ಜು ಗೊಳಿಸಿಲಾಗುವುದು.
-ಲೋಕೋಪಯೋಗಿ ಅಭಿಯಂತರು, ಮಂಗಳೂರು ವಿಭಾಗ
ಸಂಚಾರಕ್ಕೆ ಪರ್ಯಾಯ ರಸ್ತೆ
ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲಾಗುವುದು ಹಾಗೂ ಪರ್ಯಾಯ ರಸ್ತೆಯನ್ನು ನಿರ್ಮಾಣ ಮಾಡಿದ್ದು ವಾಹನ ಚಾಲಕರ ಗಮನಕ್ಕೆ ಎಚ್ಚರಿಕೆಯ ಫಲಕ ಹಾಕಲಾಗಿದೆ ಇಲಾಖೆಯ ಪ್ಲಾನ್ ಪ್ರಕಾರ ಕಾಮಗಾರಿ ನಡೆಯಲಿದೆ.
-ಬಶೀರ್ ಹಳೆಯಂಗಡಿ, ಗುತ್ತಿಗೆದಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.