Network Problem: ಇಲ್ಲಿ ಟವರ್ ಇದೆ, ಆದರೆ ನೆಟ್ವರ್ಕ್ ಸಿಗಲ್ಲ!
ಇಡೂರು, ಚಿತ್ತೂರು ನಿವಾಸಿಗಳ ಬಗೆಹರಿಯದ ಸಮಸ್ಯೆ; ಹೊಸ ಟವರ್‌ಗೂ ಕನೆಕ್ಷನ್ ಕಿರಿಕಿರಿ
Team Udayavani, Jan 9, 2025, 2:21 PM IST
ವಂಡ್ಸೆ: ಇಡೂರು ಕುಂಜ್ಞಾಡಿ ಹಾಗು ಚಿತ್ತೂರು ಪರಿಸರದಲ್ಲಿ ಟವರ್‌ಗಳು ಇದ್ದರೂ ನೆಟ್‌ವರ್ಕ್ ಸಮಸ್ಯೆಗೆ ಇನ್ನೂ ಶಾಶ್ವತ ಪರಿಹಾರ ಲಭಿಸದಿರುವುದು ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಬರುವ ಕರೆಗಳಿಗೆ ಸಮರ್ಪಕ ಉತ್ತರ ನೀಡಲಾಗದೇ ಸಂಕಟದಿಂದ ಇಲಾಖೆಗಳಿಗೆ ಹಿಡಿಶಾಪ ಹಾಕುವುದು ನಿತ್ಯ ನಿರಂತರವಾಗಿದೆ. ಮೊಬೈಲ್ ಸಂಬಂಧಿತ ಉಳಿದ ಕೆಲಸಗಳೆಲ್ಲ ಕನಸೇ ಬಿಡಿ!
ಊಟಕ್ಕಿಲ್ಲದ ಉಪ್ಪಿನಕಾಯಿ
ಕಳೆದ 8-10 ವರ್ಷಗಳಿಂದ ಬಿ.ಎಸ್.ಎನ್.ಎಲ್. ಟವರ್ ಇಲ್ಲಿ ಸ್ಥಿರವಾಗಿ ನಿಂತಿದೆ. ಆದರೆ, ಜನರ ಪಾಲಿಗೆ ಮಾತ್ರ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ಒಂದಷ್ಟು ದಿನ ನೆಟ್ ವರ್ಕ್ ಸಮಸ್ಯೆ ನಿವಾರಣೆಯಾಗಿದೆ ಅಂದುಕೊಂಡರೆ ಮುಂದಿನ ಹಲವು ದಿನ ಮತ್ತೆ ಅದೇ ಗೋಳು. ಒಟ್ಟಾರೆ ಹಗಲು ರಾತ್ರಿ ಮೊಬೆ„ಲ್ ಸಂಪರ್ಕ ವ್ಯವಸ್ಥೆ ಕೊಂಡಿಯ ಶಿಖರದ ಟವರ್ ಗಳ ತಾಂತ್ರಿಕ ಸಮಸ್ಯೆ ಬಳಕೆದಾರರನ್ನು ಗೊಂದಲಕ್ಕೆ ತಳ್ಳಿದೆ.
ನೆಟ್‌ವರ್ಕ್ ವಂಚಿತ ಮನೆಗಳು
ಇಲ್ಲಿನ ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ ಕರೆಂಟ್ ಇದ್ದಾಗ ಮಾತ್ರ ಮೊಬೆ„ಲ್ ಸಂಪರ್ಕ ಸ್ವಲ್ಪವಾದರೂ ಸಿಗುತ್ತದೆ. ಕರೆಂಟ್ ಹೋದಾಗ ಮೊಬೈಲ್ ಸಂಪರ್ಕ ಕೂಡಾ ಕಟ್. ಮೊಬೆ„ಲ್ ಟವರ್ ನಿರ್ವಹಣಾ ಕೇಂದ್ರದಲ್ಲಿ ಜನರೇಟರ್ ಇದ್ದರೂ ಅದರ ಬಳಕೆಗೆ ಡೀಸೆಲ್ ಕೊರತೆ ಜನರನ್ನು ಇನ್ನಷ್ಟು ನಿರಾಸೆಗೊಳಿಸಿದೆ. ಒಂದೆಡೆ ತಾಂತ್ರಿಕ ದೋಷವಾದರೆ ಮತ್ತೂಂದೆಡೆ ಸೌಕರ್ಯಗಳ ಕೊರತೆಯಿಂದಾಗಿ ವ್ಯವಸ್ಥೆ ಕೈಕೊಡುತ್ತಿದೆ.
ಹೊಸ ಟವರ್‌ಗಳಿಗೂ ಅದೇ ಸ್ಥಿತಿ
ಕುಕ್ಕಡ ಹಾಗೂ ಹೊಸೂರಿನಲ್ಲಿ ನೂತನ ಟವರ್ ನಿರ್ಮಿಸಲಾಗಿದ್ದರೂ ಸ್ಯಾಟ್‌ಲೈಟ್ ಸಂಪರ್ಕ ವ್ಯವಸ್ಥೆ ಸಮಸ್ಯೆಯಿಂದಾಗಿ ಇಲ್ಲಿ ಕೂಡ ಅದೇ ರಾಗ ಅದೇ ಹಾಡು ಎಂಬಂತಾಗಿದೆ. ಅಭಿವೃದ್ಧಿ ಪಥದಲ್ಲಿರುವ ಆಧುನಿಕ ವ್ಯವಸ್ಥೆಗಳಲ್ಲೊಂದಾದ ಮೊಬೈಲ್ ಟವರ್ ಗ್ರಾಮಗ್ರಾಮಗಳಲ್ಲಿ ತಲೆಎತ್ತಿಕೊಂಡಿದ್ದರೂ ಬಳಕೆದಾರರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ವಂಚಿತರಾಗುತ್ತಿರುವುದು ಇಲಾಖೆಯ ಸೇವೆಯ ವೈಫಲ್ಯವೇ ಅಥವಾ ಆಧುನಿಕ ಉಪಕರಣಗಳ ಬಳಕೆಗೆ ಎದುರಾದ ತಾಂತ್ರಿಕ ದೋಷವೇ ಅಥವ 4ಜಿ, 5ಜಿಗಳ ಧಾವಂತದ ನಡುವೆ ಎದುರಾಗುತ್ತಿರುವ ತಾಂತ್ರಿಕ ದೋಷಗಳನ್ನು ನಿಭಾಯಿಸುವಲ್ಲಿ ಇಲಾಖೆ ಎಡವುತ್ತಿದೆಯೇ ಎಂಬುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.
ತಾಯಿ-ಮಕ್ಕಳ ಬಾಂಧವ್ಯಕ್ಕೂ ಅಡ್ಡಿ
ಚಿತ್ತೂರು, ಇಡೂರು ಭಾಗದ ಹೆಚ್ಚಿನ ಯುವಕರು ಬೆಂಗಳೂರು ಇಲ್ಲವೇ ದುಬೈನಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಮನೆಯವರ ಜತೆ ಮಾತನಾಡಲು ಅವಕಾಶ ಸಿಗುವುದು ರಾತ್ರಿಯ ಹೊತ್ತು ಮಾತ್ರ. ಆದರೆ, ಈ ಭಾಗದಲ್ಲಿ ರಾತ್ರಿ ವಿದ್ಯುತ್‌ನೊಂದಿಗೆ ಮೊಬೈಲ್ ಸಂಪರ್ಕ ಕೂಡಾ ಕೈಕೊಡುತ್ತದೆ. ಹೀಗಾಗಿ ಮಕ್ಕಳಿಗೆ ತಾಯಿ ಜತೆ ಮಾತನಾಡುವುದು ಕೂಡಾ ಕಷ್ಟ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜತೆಗೆ ಏನಾದರೂ ತುರ್ತು ಸಮಸ್ಯೆ ಎದುರಾದರೆ ಸಂಪರ್ಕ ಸಾಧಿಸಲು ಹರಸಾಹಸ ಪಡಬೇಕು.
ಶಾಶ್ವತ ಪರಿಹಾರ ಲಭಿಸಿಲ್ಲ
ಚಿತ್ತೂರು ಹಾಗೂ ಇಡೂರಿನಲ್ಲಿ ಮೊಬೈಲ್ ಟವರ್ ಗಳಿವೆ. ಆದರೆ ನೆಟ್‌ವರ್ಕ್ ವಂಚಿತರಾದ ಈ ಭಾಗದ ನಿವಾಸಿಗಳ ನಿತ್ಯ ಗೋಳಿಗೆ ಇನ್ನೂ ಶಾಶ್ವತ ಪರಿಹಾರ ಲಭಿಸಿಲ್ಲ.
– ಸರ್ವೋತ್ತಮ ಶೆಟ್ಟಿ, ಇಡೂರು
-ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.