Smile: ಚಿಂತೆಯನ್ನು ದೂರಮಾಡಿ ಒಮ್ಮೆ ನೀ ನಗು
Team Udayavani, Jan 9, 2025, 3:41 PM IST
ಒಂದು ನಗು ಎಲ್ಲ ಸಮಸ್ಯೆ ದೂರ ಮಾಡಬಹುದು. ಮನಸ್ಸಿನ ದುಗುಡಗಳಿಗೆ ನಗುವೇ ಮದ್ದು ಎಂದರೆ ತಪ್ಪಿಲ್ಲ. ಅದರಲ್ಲು ಪ್ರೀತಿ ಪಾತ್ರರು ಜತೆ ಇದ್ದಾಗ ಅವರ ನಗು ನೋಡೋದೆ ಚಂದ. ನನ್ನಮ್ಮ ಯಾವಾಗ್ಲೂ ಹೇಳ್ಳೋರು ನಿನ್ ನೆಗಿ ಕಂಡ್ರೆ ಸಾಕ್ ಒಂತರಾ ನೆಮ್ಮದಿ, ತಲೆಬಿಸಿ ಎಲ್ಲ ಹೋತ್ ಅಂತ.
ನಾನು ಚಿಕ್ಕವಳಿದ್ದಾಗಿಂದ್ಲು ರೂಢಿಸಿಕೊಂಡಿರೋ ಒಳ್ಳೆ ಬುದ್ಧಿ ಅಂದ್ರೆ ನನ್ನ ಜತೆ ಇರೋರನ್ನ ನಗಿಸ್ತಾ ಇರಬೇಕು ಅನ್ನೋದು. ನಗ್ತಾ ಇರೋ ವ್ಯಕ್ತಿನ ನೋಡಿದಾಗ ಅವನ ಆತ್ಮ ವಿಶ್ವಾಸವನ್ನ ಬಿಂಬಿಸುವಂತೆ ಇರುತ್ತದೆ. ನಗು ಸಂಬಂಧವನ್ನ ಬಲಪಡಿಸುತ್ತದೆ ಸ್ನೇಹ, ಪ್ರೀತಿ ಹಾಗೂ ಆತ್ಮೀಯತೆಯ ಸ್ಥಾಪನೆಗೆ ನಗು ಅನಿವಾರ್ಯ.
ನಗುವ ಹಿರಿಮೆಯನ್ನು ಮೆರೆದ ಕನ್ನಡದ ಮಾತುಗಳಿವೆ: ನಗುವಿನ ಹೂವಿನ ಮರೆದ ಬಡಕೆ, ಬದುಕು ಬಾಳಿನಲ್ಲಿ ಸೋಲದು ಕಶಕೆ, ಅಂದಹಾಗೆ ನಗುವುದು ತಾನೇ ಜೀವನದ ಅತ್ಯುತ್ತಮ ಔಷಧ. ಅದು ಕೇವಲ ಮುಖ ಭಾವನೇ ಅಲ್ಲ ಒಂದು ರೀತಿಯ ಚಿಂತನೆ. ಕೆಲವರ ಮುಖದಲ್ಲಿ ನಗುವಿನ ಛಾಯೆ ಇರುವುದೇ ಇಲ್ಲ. ಅದು ಅವರವರ ವ್ಯಕ್ತಿತ್ವ ನಗುವಿಲ್ಲದ ಮೊಗ ಚಂದಿರನಿಲ್ಲದ ಬಾನಿನಂತೆ ಕಳೆ ಹೊಳಪು ಇರದು. ಒಬ್ಬ ಮನುಷ್ಯ ಸೋತು ಕೂತಾಗ ಅವನ ಜೀವನ ಸಂಗಾತಿ ಇಲ್ಲವೆ ಮನಸ್ಸಿಗೆ ಹತ್ತಿರವಾದಂತವರ ಒಂದು ನಗು ಸಾಕಂತೆ ಪುನಃ ಜೀವಿಸಲು.
ಹಾಗೆಂದು ಯಾವಾಗ್ಲೂ ನಗ್ತಾ ಇದ್ರೆ ಹುಚ್ಚು ಅಂತಾರಂತೆ ಅಲ್ವಾ. ಎಲ್ಲದಕ್ಕೂ ಮಿತಿ ಇದೆ. ಅನಾಹುತ ಆದಲ್ಲೆಲ್ಲಾ ಹೋಗಿ ನಗ್ತಾ ಇದ್ರೆ ನಾಲ್ಕು ಬಾರಿಸಬೋದು. ಜೀವನ ಅಂದ್ರೇನೆ ಹಾಗೆ ಎಲ್ಲ ಇತಿ ಮಿತಿ ಅಲ್ಲಿದ್ರೇನೆ ಚಂದ. ಈಗಿನ ಕಾಲದಲ್ಲಿ ಕೆಲವು ಜನರನ್ನು ಕಂಡಾಗ ಎನಪ್ಪಾ ನಗೋಕು ದುಡ್ಡ್ ಕೊಡ್ಬೇಕಾ ಅಂತಾ ಅನಿಸಿದ್ದು ಉಂಟು. ಮತ್ತೂಬ್ಬರ ಮುಖದ ನಗು ಮೂಡಲು ನೀವು ಕಾರಣವಾದರೆ ಎಷ್ಟು ಚಂದ ಅಲ್ಲವೇ?.
- ಅನುಪಮ
ಆಳ್ವಾಸ್, ಮೂಡುಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.