UV Fusion: ತೆಪ್ಪ ದ್ವೀಪದೂರಿಗೊಂದು ಸಂಪರ್ಕಸೇತು
Team Udayavani, Jan 9, 2025, 3:57 PM IST
ಉತ್ತರ ಕನ್ನಡದ ಯಲ್ಲಾಪುರ ಹಾಗೂ ಅಂಕೋಲದ ನಡುವಿನ ಗಂಗಾವಳಿ ನದಿ ದಡದಲ್ಲಿರುವ ಊರು ಕೈಗಡಿ. ಮೂಲಭೂತ ಸೌಕರ್ಯಗಳನ್ನು ಹೊಂದಿರದ ಕುಗ್ರಾಮ. ನಿತ್ಯ ಉಪಯೋಗಕ್ಕೆ ಬೇಕಾದ ಸಣ್ಣ ಸಣ್ಣ ವಸ್ತುಗಳು ಬೇಕಾದರೂ ನದಿ ದಾಟಿ ದೂರದ ಗುಳ್ಳಾಪುರಕ್ಕೆ ಹೋಗಬೇಕು. ಮಳೆಗಾಲದಲ್ಲಿ ಪಟ್ಟಣಕ್ಕೂ ಊರಿಗೂ ಇರುವ ಒಂದೇ ಒಂದು ರಸ್ತೆಯು ಹಳ್ಳ ಕೊಳ್ಳಗಳು ತುಂಬಿಹರಿದು ಸಂಚಾರವೇ ಸ್ಥಗಿತವಾಗುತ್ತಿತ್ತು. ಆಗಂತೂ ಆ ಊರು ಎಲ್ಲೆಡೆಯಿಂದ ಸಂಪರ್ಕವನ್ನು ಕಳೆದುಕೊಂಡು ಸುತ್ತಲೂ ನೀರು ತುಂಬಿ ದ್ವೀಪದಂತಾಗಿಬಿಡುತ್ತಿತ್ತು.
ಮಳೆಗಾಲಕ್ಕೆ ಬೇಕಾದ ಆವಶ್ಯಕ ವಸ್ತುಗಳನ್ನು ಮುಂಚಿತವಾಗಿಯೇ ತಂದಿಟ್ಟುಕೊಳ್ಳುವ ಪರಿಸ್ಥಿತಿ ಇಂದಿಗೂ ಇದೆ. ಸಾಮಗ್ರಿಗಳನ್ನೇನೋ ಮುಂಚಿತವಾಗಿಯೇ ತಂದಿಡಬಹುದು ಆದರೆ ಆರೋಗ್ಯ ಹಾಗಲ್ಲವಲ್ಲ; ಅದು ಹೇಗೆ ಯಾವಾಗ ಕೆಡುತ್ತದೆಯೋ ಯಾರಿಗೂ ತಿಳಿಯದು. ಹೀಗಿದ್ದಾಗ ಅನಿವಾರ್ಯ ಸಂಚಾರಕ್ಕೆಂದೇ ಅವರು ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ಪರ್ಯಾಯ ಮಾರ್ಗವೇ ತೆಪ್ಪ.
ತೆಪ್ಪ ದಪ್ಪನೆಯ ಬಿದಿರುಗಳನ್ನು ಸಾಲಾಗಿ ಜೋಡಿಸಿ ಗಟ್ಟಿಯಾದ ಕಟ್ಟುಗಳನ್ನು ಬಿಗಿದು ಮಾಡಿರುವ ನದಿ ದಾಟಲು ಸಹಕಾರಿಯಾಗುವ ಒಂದು ಮಾದರಿಯ ದೋಣಿ. ಮಳೆಗಾಲದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ಊರಿಗೆ ಅದೇ ಸಂಪರ್ಕಸೇತು.
ಹೇಗಾದರೂ ಮಾಡಿ ನದಿ ದಾಟಿಕೊಂಡರೆ ಮುಂದೆ ಪೇಟೆಯನ್ನು ಸೇರಬಹುದಿತ್ತು. ತೆಪ್ಪ ಅನಾರೋಗ್ಯ ಉಂಟಾದವರಿಗೆ ಮಾತ್ರವಲ್ಲ ಎಲ್ಲರಿಗೂ ಅಗತ್ಯವಾದರೆ ಆಗಿತ್ತು. ಶಾಲೆಗೆ ಹೋಗುವ ಮಕ್ಕಳು, ಪೇಟೆಗೆ ಅಗತ್ಯವಸ್ತುಗಳನ್ನು ತರಲು ಹೋಗುವವರು, ವಾರದ ಸಂತೆಗೆ ಬೇರಲಸಿನ ಕಾಯಿಯನ್ನು ತೆಗೆದುಕೊಂಡು ಹೋಗುವ ಹೆಬ್ಟಾರರು ಮತ್ತು ಅವರ ಎರಡು ಮೂಟೆಗಳೂ ತೆಪ್ಪದ ಮೂಲಕವೇ ಸಾಗಬೇಕಾಗಿತ್ತು.
ಒಂದಲ್ಲ ಒಂದು ಕೆಲಸದ ಮೇಲೆ ಎಲ್ಲರೂ ಅದರ ಪ್ರಯಾಣಿಕರೇ. ಅದಕ್ಕಾಗಿಯೇ ವರ್ಷಕ್ಕೊಮ್ಮೆ ಎಲ್ಲರೂ ಸೇರಿ ತೆಪ್ಪ ಕಟ್ಟುವ ಪದ್ಧತಿ; ಅದೂ ಇಂದಿಗೂ ಇದೆ.
ಪೇಟೆಗೆ ಹೋದವರು ಮರಳಿ ಬರಲು ಹೊತ್ತಾಗುತ್ತಿತ್ತು. ಮತ್ತೆ ತೆಪ್ಪದ ಮೇಲೆಯೇ ದಾಟಿ ಬರಬೇಕು. ನಮ್ಮ ಸಮಯಕ್ಕೆ ದಾಟಿಸುವವರು ಬೇಕಲ್ಲವೇ. ಅದಕ್ಕಾಗಿಯೇ ಅವರು ಆರುನೂರು ಮೀಟರ್ ದೂರದಲ್ಲಿರುವ ಮನೆಗಳಿಗೆ ಕೇಳಿಸುವ ಹಾಗೆ “ಕೂ’ ಹಾಕಬೇಕಿತ್ತು. ಅದು ಒಮ್ಮೊಮ್ಮೆ ಕೇಳಿಸಿದರೆ ಕೇಳಿಸಿತು ಇಲ್ಲವೆಂದರೆ ಇಲ್ಲ.
ನನಗಿನ್ನೂ ನೆನಪಿದೆ, ನಾನಾಗ ಚಿಕ್ಕವನು. ನನ್ನಪ್ಪ ಅಮ್ಮ, ನಾನು ಪೇಟೆಯಿಂದ ಸಂಜೆಯ ವೇಳೆಗೆ ನದಿಯ ಹತ್ತಿರ ಬಂದು ಎಷ್ಟೇ “ಕೂ’ ಹಾಕಿದರೂ ಯಾವುದೆ ಪ್ರತಿಕ್ರಿಯೆ ಸಿಗದ ದಿನಗಳಿದ್ದವು. ಕೊನೆಗೆ ರಾತ್ರಿ ಮೀನು ಹಿಡಿಯುವವರು ನಮ್ಮನ್ನು ನದಿ ದಾಟಿಸಿದ್ದುಂಟು.
ತೆಪ್ಪ ದಾಟಿಸುವಾಗ ನೀರಿನ ಸುಳಿಗೆ ಸಿಲುಕಿ ಒಮ್ಮೆಲೇ ಕೆಳಕ್ಕೆ ಬಿದ್ದು ಮತ್ತೇ ಮೇಲೆ ಬರುವುದು ಸಹಜ. ಅದರಲ್ಲಿ ಕೂತ ಹೆಣ್ಣುಮಕ್ಕಳಿಗಂತೂ ತೆಪ್ಪ ತೇಲುವಾಗ ಭಯವಾಗಿ ಗಟ್ಟಿಯಾಗಿ ಕಿರುಚಿಕೊಂಡ ಉದಾಹರಣೆಗಳೂ ಇವೆ. ಎಷ್ಟೇ ಭಯವಾದರು ದಾಟುವುದು ಅನಿವಾರ್ಯವಾಗಿತ್ತು.
ನೋಡುಗರಿಗೆ ಇದು ಸಾಮಾನ್ಯವಾದ ನದಿ ದಾಟುವ ತೆಪ್ಪ. ಆದರೆ ಈ ಊರಿಗೂ ತೆಪ್ಪಕ್ಕೂ ಇರುವ ನಂಟು ಅವಿಸ್ಮರಣೀಯ. ನಿಧಾನವಾಗಿ ಇಂದಿಗೆ ಅದರ ಸ್ಥಾನವನ್ನು ಫೈಬರ್ ದೋಣಿಗಳು ಅಲಂಕರಿಸಿದರೂ ತೆಪ್ಪದ ಸಂಚಾರದ ಅಂದಿನ ದಿನಗಳ ನೆನಪು ಎಂದಿಗೂ ಮಾಸಿಹೋಗದು.
–ಸಂಜಯ್ ಸಿದ್ದಿ
ಎಂ.ಎಂ., ಮಹಾವಿದ್ಯಾಲಯ ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.