Congress government ಗಾಂಧಿವಾದದಿಂದ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ
ಅಮಾಯಕರಿಗೆ ಕ್ಷಮಾದಾನ ನೀಡಲೇಬಾರದು ಎಂಬುದು ನಮ್ಮ ವಾದವಲ್ಲ. ಆದರೆ...
Team Udayavani, Jan 9, 2025, 8:55 PM IST
ಕಾರ್ಕಳ: ರಾಜ್ಯ ಕಾಂಗ್ರೆಸ್ ಸರಕಾರ ಗಾಂಧಿವಾದದಿಂದ ಮಾವೋವಾದಕ್ಕೆ ಹೊರಳಿದೆ ಎಂದು ಮಾಜಿ ಸಚಿವ ವಿ.ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರಕಾರವು ಬಂದೂಕು ಹಿಡಿದು ಗುಂಡಿಟ್ಟು ಭಯ ಸೃಷ್ಟಿಸುವವರಿಗೆ ಹೂಗುಚ್ಚ ಕೊಟ್ಟು ಸ್ವಾಗತಿಸಿ ಸಮೋಸಾ ನೀಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿ ಅರ್ಬನ್ ನಕ್ಸಲರ ಪಾಲಿಟ್ ಬ್ಯೂರೋ ಆಗಿ ಬದಲಾಗಿದೆ. ಖುದ್ದು ಸಿದ್ದರಾಮಯ್ಯನವರೇ ಅರ್ಬನ್ ನಕ್ಸಲರ ಕೋರ್ ಕಮಿಟಿ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ತತ್ವ- ಸಿದ್ಧಾಂತ ಅರ್ಬನ್ ನಕ್ಸಲರು ಹೈಜಾಕ್ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಅಮಾಯಕರಿಗೆ ಕ್ಷಮಾದಾನ ನೀಡಲೇಬಾರದು ಎಂಬುದು ನಮ್ಮ ವಾದವಲ್ಲ. ಆದರೆ ಶರಣಾದ ರೀತಿ, ಪ್ಯಾಕೇಜ್ ಘೋಷಣೆ ವಿಧಾನ, ಪ್ರಕರಣ ರದ್ಧತಿ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿಯ ಬಗ್ಗೆ ಆಕ್ಷೇಪವಿದೆ. ಶರಣಾಗತಿ ಪ್ರಕ್ರಿಯೆ ಬಗ್ಗೆ ಸಾಕಷ್ಟು ಅನುಮಾನಗಳಿವೆ. ವಿಕ್ರಮ್ ಗೌಡ ಎನ್ ಕೌಂಟರ್ ಬಳಿಕ ಅರ್ಬನ್ ನಕ್ಸಲರು ಶರಣಾಗತಿ ಪ್ರಕ್ರಿಯೆ ಬಗ್ಗೆ ನಡೆಸಿದ ಪ್ರಹಸನದಲ್ಲಿ ಸಿಎಂ ನಿರ್ದೇಶನದ ಭಾಗವೆಷ್ಟು ಎಂಬುದು ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದಾರೆ.
ಒಂದೆಡೆ ನಕ್ಸಲ್ ಶರಣಾಗತಿ ಬಗ್ಗೆ ಮಾತನಾಡುವ ಸರ್ಕಾರ, ಅರಣ್ಯ ವಾಸಿಗಳ ಪುನರ್ವಸತಿ ಬಗ್ಗೆ ಯಾವ ನಿಲುವು ಹೊಂದಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.