Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ
Team Udayavani, Jan 10, 2025, 12:43 AM IST
ಕಳ್ಳನೋಟು ಸಹಿತ ವಶಕ್ಕೆ
ಕಾಸರಗೋಡು: ಪಾಲಕುನ್ನು ಆರಾಟುಕಡವು ಎರೋಲ್ ನಿವಾಸಿ ವಿನೋದ್‌ನನ್ನು 500 ರೂ. ಮುಖ ಬೆಲೆಯ 4 ಕಳ್ಳನೋಟು ಸಹಿತ ಬೇಕಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾಸರಗೋಡು:ಮರು ವಿವಾಹ ಭರವಸೆ ನೀಡಿ ಹಣ ಲೂಟಿ: ಇಬ್ಬರ ಬಂಧನ
ಕಾಸರಗೋಡು: ಮರು ವಿವಾಹ ಭರವಸೆ ನೀಡಿ ವೈದ್ಯನಿಂದ 5.5 ಲಕ್ಷ ರೂ., ಮೊಬೈಲ್ ಫೋನ್ ಮತ್ತು ಚಿನ್ನಾಭರಣಗಳನ್ನು ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೊಡಗು ನಿವಾಸಿ ಮಜೀದ್ ಹಾಗೂ ಮಲಪ್ಪುರಂ ಮೇಲಾಟೂರ್ ನಿವಾಸಿ ಸಲೀಂನನ್ನು ಕಲ್ಲಿಕೋಟೆ ನಡಕ್ಕಾವು ಪೊಲೀಸರು ಕಾಸರಗೋಡಿನಿಂದ ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ಇರ್ಫಾನಾಳನ್ನು ಈ ಹಿಂದೆಯೇ ಬಂಧಿಸಲಾಗಿತ್ತು.
ಕಲ್ಯೋಟ್ ಕೊಲೆ ಪ್ರಕರಣ
ನಾಲ್ವರು ಜೈಲಿನಿಂದ ಬಿಡುಗಡೆ
ಕಾಸರಗೋಡು: ಪೆರಿಯ ಕಲ್ಯೋಟ್ ನ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್‌ಲಾಲ್ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಬಳಿಕ ಕೇರಳ ಹೈಕೋರ್ಟ್‌ನಿಂದ ಜಾಮೀನು ಲಭಿಸಿದ ಸಿಪಿಎಂ ನೇತಾರರಾದ ಮಾಜಿ ಶಾಸಕ ಕೆ.ವಿ.ಕುಂಞಿರಾಮನ್, ಕಾಂಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ರಾಘವನ್ ವೆಳುತ್ತೋಳಿ ಮತ್ತು ಕೆ.ವಿ.ಭಾಸ್ಕರನ್ ಶುಕ್ರವಾರ ಬೆಳಗ್ಗೆ ಕಣ್ಣೂರು ಸೆಂಟ್ರಲ್ ಜೈಲಿನಿಂದ ಬಿಡುಗಡೆಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಕೊಹ್ಲಿ-ರೋಹಿತ್ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ
Alnavar: ಬೈಕ್- ಓಮಿನಿ ಅಪಘಾತ; ಬೈಕ್ ಸವಾರ ಸಾವು
Mangaluru: ಕರಾವಳಿ ಖಗೋಳ ಉತ್ಸವ; ಉಲ್ಕಾ ತುಣುಕು, ನಕ್ಷತ್ರ ವೀಕ್ಷಣೆ ಅವಕಾಶ
Bajpe: ಇನ್ಮುಂದೆ ದೀಪಗಳಿಂದ ಬೆಳಗಲಿದೆ ವಿಮಾನ ನಿಲ್ದಾಣ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.