BPL;ಅಂತಿಮ ಓವರಿನಲ್ಲಿ 30 ರನ್ ಸಿಡಿಸಿದ ನುರುಲ್
Team Udayavani, Jan 10, 2025, 6:58 AM IST
ಸಿಲ್ಹೆಟ್: ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ಪಂದ್ಯದಲ್ಲಿ ನುರುಲ್ ಹಸನ್ ಅವರು ಅಂತಿಮ ಓವರಿನಲ್ಲಿ 30 ರನ್ ಸಿಡಿಸಿದ್ದರಿಂದ ರಂಗಪುರ ರೈಡರ್ ತಂಡವು ಫಾರ್ಚೂನ್ ಬರಿಷಾಲ್ ವಿರುದ್ಧ ಮೂರು ವಿಕೆಟ್ಗಳ ಗೆಲುವು ದಾಖಲಿಸಿತು.
ಇದು ಟಿ20 ಪಂದ್ಯದ ಅಂತಿಮ ಓವರಿನಲ್ಲಿ ದಾಖಲಾದ ಮೂರನೇ ಗರಿಷ್ಠ ಮೊತ್ತವಾಗಿದೆ. 2015ರಲ್ಲಿ ಕೆಂಟ್ ವಿರುದ್ಧ ಸೋಮರ್ಸೆಟ್ 34 ರನ್ ಸಿಡಿಸಿರುವುದು ಗರಿಷ್ಠ ಮೊತ್ತವಾಗಿದ್ದರೆ 2023ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೋಲ್ಕತಾ ನೈಟ್ರೈಡರ್ 31 ರನ್ ಹೊಡೆದಿರುವುದು ಎರಟನೇ ಗರಿಷ್ಠ ಮೊತ್ತವಾಗಿದೆ.
ಅಂತಿಮ ಓವರ್: 26 ರನ್
ಗೆಲ್ಲಲು 198 ರನ್ ಗಳಿಸುವ ಗುರಿ ಪಡೆದಿದ್ದ ರಂಗಪುರ ತಂಡವು ಅಂತಿಮ ಓವರಿನಲ್ಲಿ 26 ರನ್ ಗಳಿಸಬೇಕಿತ್ತು. 19ನೇ ಓವರಿನಲ್ಲಿ ತಂಡ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಕಳೆದುಕೊಂಡಾಗ ಆಘಾತ ಅನುಭವಿಸಿತ್ತು. ತಂಡದ ಅಜೇಯ ಓಟಕ್ಕೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ನುರುಲ್ ಅವರು ಕೈಲ್ ಮೇಯರ್ ಎಸೆದ ಅಂತಿಮ ಓವರಿನ ಮೊದಲ ಐದು ಎಸೆತಗಳಲ್ಲಿ ಅನುಕ್ರಮವಾಗಿ 6, 4, 4, 6 ಮತ್ತು 4 ರನ್ ಸಿಡಿಸಿ ತಂಡದ ಗೆಲುವು ಖಚಿತಪಡಿಸಿದ್ದರು. ಅಂತಿಮ ಎಸೆತದಲ್ಲಿ ಗೆಲುವಿಗೆ ಎರಡು ರನ್ ಬೇಕಿತ್ತು. ಆದರೆ ನುರುಲ್ ಸಿಕ್ಸರ್ ಬಾರಿಸಿ ಭರ್ಜರಿಯಾಗಿ ತಂಡದ ಗೆಲುವನ್ನು ಸಾರಿದರು. ಇದರಿಂದ ತಂಡ ತನ್ನ ಗೆಲುವಿನ ಓಟವನ್ನು ಆರಕ್ಕೇರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.