Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!
ಜನಸಂಖ್ಯೆ ಹೆಚ್ಚಿಸಲು ರಷ್ಯಾದಲ್ಲಿ ವಿನೂತನ ಆಫರ್
Team Udayavani, Jan 10, 2025, 6:50 AM IST
ಮಾಸ್ಕೋ: ಜನಸಂಖ್ಯೆ ಹೆಚ್ಚಳಕ್ಕೆ ಮುಂದಾಗಿರುವ ರಷ್ಯಾ ಯೌವ್ವಾನವಸ್ಥೆಯಲ್ಲೇ ಕುಟುಂಬಗಳನ್ನು ಬೆಳೆಸುವುದಕ್ಕಾಗಿ ಮುಂದಾಗಿದೆ. ಕಾಲೇಜಿನಲ್ಲಿ ಓದುತ್ತಿದ್ದು ಮತ್ತು 25 ವರ್ಷ ಪೂರೈಸಿದ ಹೆಣ್ಣು ಮಕ್ಕಳು ಮಗು ಹೆತ್ತರೆ ಅಂದಾಜು 81,000 ರೂ. (100,000 ರೂಬಲ್ಸ್) ಪ್ರೋತ್ಸಾಹಧನ ನೀಡಲಿದೆ.
ರಷ್ಯಾದ ಕೆರುಲಿಯಾ ಪ್ರಾಂತವು ಈ ಆಫರ್ ನೀಡುತ್ತಿದೆ. ಮಗು ಹೆರುವ ಯುವತಿ ಕಡ್ಡಾಯವಾಗಿ ಸ್ಥಳೀಯ ವಿವಿ ಅಥವಾ ಕಾಲೇಜಿನಲ್ಲಿ ಪೂರ್ಣ ಪ್ರಮಾಣದ ವಿದ್ಯಾರ್ಥಿಯಾಗಿರಬೇಕೆಂಬ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಮಗು ಮೃತಪಟ್ಟರೆ ಅಥವಾ ಇನ್ನಿತರ ಪರಿಸ್ಥಿತಿಗಳ ಬಗ್ಗೆ ಯಾವುದೇ ಸ್ಪಷ್ಟ ಉಲ್ಲೇಖ ಮಾಡಿಲ್ಲ. ರಷ್ಯಾದ ಇತರ ಪ್ರಾಂತಗಳು ಕೂಡ ಇದೇ ರೀತಿಯಲ್ಲಿ ಮಕ್ಕಳನ್ನು ಹೆರಲು ಆಫರ್ ನೀಡುತ್ತಿವೆ. ರಷ್ಯಾ ಸರಕಾರ ಮಾತೃತ್ವ ರಜೆಯ ಪಾವತಿಯನ್ನೂ ಹೆಚ್ಚಿಸಿವೆ.
ರಷ್ಯಾದಲ್ಲಿ ಜನನ ಪ್ರಮಾಣ ಗಣನೀಯವಾಗಿ ಕುಸಿದಿದೆ. 2024ರ ಮೊದಲಾರ್ಧದಲ್ಲಿ ಕೇವಲ 5,99,600 ಮಕ್ಕಳು ಜನಿಸಿದ್ದಾರೆ. ಇದು 25 ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.