Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Team Udayavani, Jan 10, 2025, 3:34 PM IST
ಉಡುಪಿ: ಒಂದು ಜಂಕ್ಷನ್. ಅದರ ಮಧ್ಯದಲ್ಲಿ ಐದು ಪೋಲಿಸ್ ಚೌಕಿ, ಎರಡು ಪೊಲೀಸ್ ಗೇಟ್, ಇನ್ನೆರಡು ಬ್ಯಾರಿಕೇಡ್! ಇದು ಉಡುಪಿಯ ಕಲ್ಸಂಕ ಜಂಕ್ಷನ್ ಅವ್ಯವಸ್ಥೆ.
ಕಲ್ಸಂಕ ವೃತ್ತದಲ್ಲಿ ಮೊದಲೇ ಜಾಗದ ಸಮಸ್ಯೆ, 5 ಪೊಲೀಸ್ ಚೌಕಿ ಇರುವುದರಿಂದ ವಾಹನಗಳ ಸುಗಮ ಸಂಚಾರಕ್ಕೂ ಇದು ಅಡ್ಡಿಯಾಗುತ್ತಿದೆ. ಒಂದೇ ಚೌಕಿ ಮೂಲಕ ಟ್ರಾಫಿಕ್ ನಿರ್ವಹಣೆ ಮಾಡಿ ಉಳಿದವುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬಹುದಾದ ಜಾಗದಲ್ಲಿ ಅನಗತ್ಯವಾಗಿ ಚೌಕಿಗಳನ್ನು ಇರಿಸಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.
ಕಲ್ಸಂಕ ಜಂಕ್ಷನ್‌ನಲ್ಲಿ ನಿತ್ಯ ಒಂದಿಬ್ಬರು ಸಂಚಾರ ಪೊಲೀಸರು ಇಲ್ಲಿ ಕಾರ್ಯನಿರ್ವಹಿಸುತ್ತಾರೆ.
ಅಚ್ಚರಿ ಎಂದರೆ ಇದರಲ್ಲಿ ಒಂದು ಚೌಕಿಯನ್ನೂ ಪೊಲೀಸರು ಬಳಸುವುದಿಲ್ಲ! ಟ್ರಾಫಿಕ್ ಇಲ್ಲದ ಸಂದರ್ಭದಲ್ಲಿ ರಿಕ್ಷಾ ನಿಲ್ದಾಣದ ಸಮೀಪದ ಸಣ್ಣ ಶೆಡ್‌ನಲ್ಲಿ ಪೊಲೀಸರು ಕುಳಿತಿರುತ್ತಾರೆ. ಸಂಚಾರ ದಟ್ಟಣೆ ಉಂಟಾಗಲು ಪೊಲೀಸ್ ಚೌಕಿಗಳು ಕೂಡಾ ಕಾರಣವಾಗುತ್ತಿವೆ.!
ಪುನಃ ಅವೈಜ್ಞಾನಿಕ ಕ್ರಮ
ನಗರದ ಕಲ್ಸಂಕ ಜಂಕ್ಷನ್ ಸಮಸ್ಯೆ ಇನ್ನು ಕೂಡ ಬಗೆಹರಿದಿಲ್ಲ. ವಾಹನಗಳ ದಟ್ಟನೆಯನ್ನು ಗಮನಿಸಿಕೊಂಡು ಮತ್ತೆ ಈ ಹಿಂದಿನಂತೆಯೇ ಬದಲಾವಣೆಗಳನ್ನು ತರಲಾಗಿದೆ. ಗುಂಡಿಬೈಲಿನಿಂದ ಹಾಗೂ ಉಡುಪಿ ನಗರದಿಂದ ಶ್ರೀಕೃಷ್ಣ ಮಠಕ್ಕೆ ತೆರಳುವವರು ಕಡಿಯಾಳಿಯವರೆಗೆ ಹೋಗಿ ಯೂಟರ್ನ್ ಮಾಡಿ ಬರಬೇಕಿದೆ. ಕಲ್ಸಂಕ ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಇರಿಸಿ ನೇರವಾಗಿ ಶ್ರೀಕೃಷ್ಣ ಮಠಕ್ಕೆ ತೆರಳುವ ಮಾರ್ಗವನ್ನು ಬಂದ್ ಮಾಡಲಾಗಿದೆ.
ಪ್ರವಾಸಿಗರಿಗೆ ಗೊಂದಲ
ಗೂಗಲ್ ಮ್ಯಾಪ್ ಸಹಿತ ನಗರದೆಲ್ಲೆಡೆ ಅಳವಡಿಕೆ ಮಾಡಿರುವ ಫಲಕಗಳಲ್ಲಿ ಶ್ರೀಕೃಷ್ಣ ಮಠದ ರಸ್ತೆ ಎಂದು ನಮೂದಿಸಲಾಗಿದೆ. ಇದನ್ನೇ ಗಮನಿಸಿಕೊಂಡು ಬರುವ ಸವಾರರು ಜಂಕ್ಷನ್‌ಗೆ ಬಂದು ಗೊಂದಲಕ್ಕೀಡಾಗುತ್ತಾರೆ. ಕೆಲವು ಹೊತ್ತು ವಾಹನಗಳನ್ನು ರಸ್ತೆಯ ನಡುವೆಯೇ ನಿಲ್ಲಿಸುವ ಕಾರಣ ಮತ್ತೆ ಸಂಚಾರ ದಟ್ಟನೆ ಕಂಡುಬರುತ್ತಿದೆ. ಬೆಳಗ್ಗೆ 9ರಿಂದ 1 ಗಂಟೆಯವರೆಗೆ ಒಬ್ಬರೇ ಪೊಲೀಸ್ ಸಿಬಂದಿ ಇಲ್ಲಿ ಕರ್ತವ್ಯ ನಿರ್ವಹಿಸುವ ಕಾರಣ ವಾಹನಗಳನ್ನು ನಿಯಂತ್ರಿಸಲು ಹರಸಾಹಸಪಡುವಂತಾಗಿದೆ.
ತಡೆಬೇಲಿ ಅಳವಡಿಕೆ
ಕಲ್ಸಂಕದಿಂದ ಶ್ರೀಕೃಷ್ಣ ಮಠಕ್ಕೆ ತೆರಳುವಾಗ ಸಿಗುವ ಇಂದ್ರಾಳಿ ತೋಡಿನ ಎರಡೂ ಬದಿಗಳಲ್ಲಿ ಯಾವುದೇ ತಡೆಬೇಲಿಗಳಿಲ್ಲದೆ ಜೂನ್ ತಿಂಗಳಲ್ಲಿ ಆಟೋರಿಕ್ಷಾ ಪಲ್ಟಿಯಾಗಿ ಬಿದ್ದು, ಸವಾರರು ಗಾಯಗೊಂಡಿದ್ದರು. ಉದಯವಾಣಿ ಈ ಬಗ್ಗೆ ವರದಿ ಪ್ರಕಟಿಸಿದ ಬಳಿಕ ಈಗ ತಡೆಬೇಲಿ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ.
ಬದಲಾವಣೆ ಅನಿವಾರ್ಯ
ವಾಹನಗಳ ದಟ್ಟಣೆ ಹೆಚ್ಚಿರುವಂತಹ ಸಂದರ್ಭದಲ್ಲಿ ಇಂತಹ ಬದಲಾವಣೆಗಳನ್ನು ಮಾಡುವುದು ಅನಿವಾರ್ಯವಾಗುತ್ತಿದೆ. ದಟ್ಟಣೆ ಇಲ್ಲದ ಸಂದರ್ಭದಲ್ಲಿ ವಾಹನಗಳು ಹಿಂದಿನಂತೆಯೇ ಸಂಚರಿಸಲು ಅನುವು ಮಾಡಿಕೊಡಲಾಗುವುದು.
-ಪ್ರಕಾಶ್ ಸಾಲ್ಯಾನ್, ಪೊಲೀಸ್ ಉಪ ನಿರೀಕ್ಷಕರು, ಸಂಚಾರ ಪೊಲೀಸ್ ಠಾಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
MUST WATCH
ಹೊಸ ಸೇರ್ಪಡೆ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.