Shelter: ಸೂರು ಹುಡುಕಲೆಂದು ಹೊರಟೆ
Team Udayavani, Jan 10, 2025, 4:09 PM IST
“ಉದ್ಯೋಗ ಪುರುಷ ಲಕ್ಷಣಂ’ ಈ ಗಾದೆ ಮಾತು ನಮ್ಮ ಅಜ್ಜಿ ಕಾಲಕ್ಕೆ ಅವರಂತೆ ಅದೇ ಮರೆಮಾಚಿ ಹೋಯಿತು, ಈಗಿನ ಯುಗದಲ್ಲಿ ಉದ್ಯೋಗ ಮನುಷ್ಯ ಲಕ್ಷಣಂ ಆಗಿ ಹೋಗಿದೆ. ಏಕೆಂದರೆ ಸಮಾನತೆ ಎಂಬುದು ರಾಷ್ಟ್ರೀಕರಣವಾದ ಅನಂತರ ಸ್ತ್ರೀ ಪುರುಷರಿಗೆ ಎಲ್ಲ ಕ್ಷೇತ್ರದಲ್ಲೂ ಸಮಾನತೆ ನೀಡಲಾಯಿತು. ಇದು ಒಳ್ಳೆಯದೇ ಬಿಡಿ. ಇದರಿಂದ ತಾನೆ ಸುಧಾ ಮೂರ್ತಿ ಅಂತಹ ಅಪರೂಪದ ಆದರ್ಶ ವ್ಯಕ್ತಿಗಳು ನಮ್ಮ ಈ ಪೀಳಿಗೆಗೆ ಪರಿಚಯವಾದದ್ದು, ಅವರನ್ನು ಮಾದರಿಯಾಗಿಟ್ಟುಕೊಂಡು ಅನೇಕ ಜನರು ತಮ್ಮ ಜೀವನವನ್ನು ರೂಪಿಸಿಕೊಳ್ಳತೊಡಗಿದ್ದಾರೆ.
ಅಂದು ನನ್ನ ವೃತ್ತಿ ಜೀವನ ನಾನು ಹುಟ್ಟಿ ಬೆಳೆದ ತಾಲೂಕಿನಿಂದ ಪಕ್ಕದ ತಾಲೂಕಿನಡೆಗೆ ಸಾಗಿತ್ತು, ಒಂದು ಕಡೆಗೆ ಇದು ಖುಷಿ ಕೊಟ್ಟರೆ, ಇನ್ನೊಂದು ಕಡೆಗೆ ಆಡಿ ಬೆಳೆದ ಊರು ಮತ್ತು ಕುಟುಂಬವನ್ನು ಬಿಟ್ಟು ಹೋಗುವ ದುಃಖ ನನ್ನನ್ನು ಕಾಡುತ್ತಿತ್ತು. ಮನೆಯವರಿಗೆಲ್ಲಾ ಬೇಜಾರಿನ ಜತೆಗೆ ಖುಷಿಯನ್ನು ಕೊಡುತ್ತಾ, ನಾನು ಕೆಲಸ ಮಾಡುವ ಕಚೇರಿಯ ಕಡೆಗೆ ಹೊರಟೆ. ಅಲ್ಲಿಯ ನನ್ನ ಮೇಲಾಧಿಕಾರಿಗಳಿಗೆ ನನ್ನನ್ನು ಪರಿಚಯ ಮಾಡಿಕೊಳ್ಳುವ ಮೂಲಕ ಅವರಲ್ಲಿ ನಾನೊಬ್ಬನೇನಿಸಿಕೊಂಡೆ.
ಅನಂತರ ಊರು ಬಿಟ್ಟು ಊರಿಗೆ ಬಂದಿರುವ ನನಗೆ ಸೂರಿನ ಆವಶ್ಯಕತೆ ಇತ್ತು. ಸೂರು ಹುಡುಕಲೆಂದು ಹೊರಟೆ, ಕಚೇರಿಗೆ ಹತ್ತಿರವಿರುವ ಅನೇಕ ಬೀದಿಗಳನ್ನು ತಿರುಗಿ ತಿರುಗಿ ನೋಡಿದೆ ಎಲ್ಲೂ ಕೂಡ ಯಾವುದೇ ಖಾಲಿ ಇರುವ ಮನೆಯ ಸುಳಿವು ನನಗೆ ಸಿಗಲಿಲ್ಲ. ಆ ಬಿಸಿಲಿನಲ್ಲಿ ಕಾದ ನನ್ನ ತಲೆಗೆ ಹೊಳೆದ ಯೋಚನೆ ಏನೆಂದರೆ, ಒಂದು ಸ್ಥಳದಿಂದ ಮತ್ತೂಂದು ಸ್ಥಳದ ರಸ್ತೆ ಹುಡುಕಲು ಗೂಗಲ್ ಮ್ಯಾಪ್ ಹೇಗೆ ಉತ್ತಮವೋ, ಅದೇ ತರ ಸ್ಥಳೀಯ ಮಾಹಿತಿಗಾಗಿ ಆಟೋರಿಕ್ಷಾ ಚಾಲಕರನ್ನು ವಿಚಾರಿಸಿದರೆ ಮೂಲೆ ಮೂಲೆಯ ಮಾಹಿತಿ ದೊರೆಯುತ್ತದೆ ಎಂದು ತಿಳಿದ ನಾನು ಅವರತ್ತ ನಡೆದೆ.
ಒಬ್ಬ ಚಾಲಕನನ್ನು ವಿಚಾರಿಸಿದಾಗ “ಇಲ್ಲಾ ಗುರು ಅವಿವಾಹಿತರಿಗೆ, ಬ್ರಹ್ಮಚಾರಿಗಳಿಗೆ ಮನೆ ಸಿಗುವುದು ಕಷ್ಟ’ ಎಂದನು. ನಾನು ವಿಚಾರಿಸಿದ್ದನ್ನು ಗಮನಿಸಿದ ಇನ್ನೊಬ್ಬ ಚಾಲಕ ನಮ್ಮತ್ತ ಬಂದು ಯಾರಿಗೆ ಮನೆ ಸರ್ ಎಂದರು. ನಾನು ನನಗೆ ಎಂದೇನು, “ಏನ್ ಕೆಲಸ ಮಾಡ್ಕೊಂಡಿದ್ದೀರಾ ಸರ್ ಎಂದ’ ನಾನು ಕಚೇರಿಯಲ್ಲಿ ಕೆಲಸ ಮಾಡುವ ವಿಷಯ ಅವರಿಗೆ ತಿಳಿಸಿದೆ. ಮೊದಲನೇ ಚಾಲಕ ನನ್ನನ್ನು ನೋಡುತ್ತಾ, ಹಾಗೆ ಹೇಳಿ ಸರ್ ಮತ್ತೆ ನೀವು ಬ್ಯಾಚುಲರ್ ಎಂದು ಮಾತ್ರ ಹೇಳಿದರೆ ಯಾರು ಕೂಡ ಬಾಡಿಗೆಗೆ ಮನೆ ಕೊಡುವುದಿಲ್ಲ, ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ವಿಷಯವನ್ನು ತಿಳಿಸಿ, ನೀವು ಕಚೇರಿಯಲ್ಲಿ ಕೆಲಸ ಮಾಡುತ್ತೀದ್ದೀರಾ ಎಂದರೆ ನಿಮಗೆ ಮನೆ ಸಿಗುತ್ತದೆ ಎಂದನು. ಈ ವಿಷಯವನ್ನು ಕೇಳಿದ ನನಗೆ ಆಶ್ಚರ್ಯವಾಯಿತು, ಇದರಿಂದ ತಿಳಿದ ವಿಷಯ ಏನೆಂದರೆ ಈ ಯುಗದಲ್ಲಿ ನಾವು ಜೀವನ ನಡೆಸಲು ಹೆಸರಾಂತ ವ್ಯಕ್ತಿತ್ವ ಕೂಡ ಬಹು ಮುಖ್ಯವಾದದ್ದು ಅನಿಸಿತ್ತು.
ಕೇವಲ ಬಾಡಿಗೆಗೆ ಒಂದು ಮನೆಯಲ್ಲಿ ಇರಲು ಕೂಡ ನಾವು ಮಾಡುತ್ತಿರುವ ಕೆಲಸ, ನಮ್ಮ ವ್ಯಕ್ತಿತ್ವ ಮುಖ್ಯವಾಗಿರುತ್ತದೆ ಎಂದರೆ, ಇನ್ನು ಭವಿಷ್ಯದಲ್ಲಿ, ಭವಿಷ್ಯದ ಬೆಳವಣಿಗೆಗೆ ನಮ್ಮನ್ನು ನಾವು ಹೇಗೆ ನಿರ್ಮಿಸಿಕೊಳ್ಳುತ್ತೇವೆ ಎಂಬುದು ಬಹು ಮುಖ್ಯವಾಗುತ್ತದೆ. ನನ್ನ ಅನುಭವದಿಂದ ತಿಳಿದ ವಿಷಯ ಏನೆಂದರೆ, ಮಧ್ಯಮ ಕುಟುಂಬದಲ್ಲಿ ಜನಿಸಿದ ನಮಗೆ ಹಣವನ್ನು ಹೂಡಿಕೆ ಮಾಡಿ ದೊಡ್ಡ ದೊಡ್ಡ ವ್ಯವಹಾರ ವ್ಯಾಪಾರ ಮಾಡುವುದು ಯೋಚನೆಗೆ ಮೀರಿದ ಮಾತೆ ಸರಿ, ಇದರಿಂದ ನಾವು ಯಶಸ್ವಿಯಾಗಲು ತುಂಬಾ ಸಮಯವು ಹಿಡಿಯುತ್ತದೆ.
ಆದ್ದರಿಂದ ನಾವು ವಿದ್ಯೆಯನ್ನು ಪಡೆದು ನಮ್ಮದೇ ಆದ ಹೆಸರನ್ನು ನಿರ್ಮಿಸಿಕೊಳ್ಳಬಹುದು. ನಾವು ಪಡೆದ ವಿದ್ಯೆ ಎಂದಿಗೂ ಕೂಡ ನಮ್ಮನ್ನು ಎಲ್ಲಿಯೂ ಕೈಬಿಡುವುದಿಲ್ಲ, ನಾವು ಮಾಡುತ್ತಿರುವ ಕೆಲಸದಲ್ಲಿ ನಾವು ಮೊದಲು ಉತ್ತಮ ವ್ಯಕ್ತಿ ಆಗಿರಬೇಕು. ಮಾಡುವ ಕೆಲಸ ನಮಗೆ ಖುಷಿ ಕೊಡಬೇಕು ಮತ್ತು ಅದರಲ್ಲಿ ಆಸಕ್ತಿ ಇರಬೇಕು ಇದರಿಂದ ನಾವು ಆ ಕೆಲಸದಲ್ಲಿ ಹೆಸರಾಂತ ವ್ಯಕ್ತಿ ಆಗಬಹುದು ಮತ್ತು ನಮಗೆ ಕೆಲಸ ಕೊಡಲು ಜನ ಹುಡುಕಿಕೊಂಡು ಬರುತ್ತಾರೆ. ಇದರಿಂದ ನಮಗೆ ಜೀವನಕ್ಕೆ ಬೇಕಾದ ಹಣವಾಗಲಿ, ಹೆಸರಾಂತ ವ್ಯಕ್ತಿತ್ವವಾಗಲಿ, ಗೌರವವಾಗಲಿ ದೊರೆಯುತ್ತದೆ.
ಆದ್ದರಿಂದ ಈಗಿನ ಯುಗದಲ್ಲೇ ಹಣ ಹೂಡಿಕೆ ಮಾಡಿ ವ್ಯಾಪಾರ ಮಾಡಲು ಸಾಧ್ಯವಿಲ್ಲ ಎನ್ನುವವರು ಮತ್ತು ನಮಗೊಂದು ಸಮಾಜದಲ್ಲಿ ಒಳ್ಳೆಯ ಗೌರವ ಸಿಗಬೇಕೆಂದು ಯೋಚಿಸುವರು ಓದುವಿಗೆಂದು ಸಮಯವನ್ನು ಮೀಸಲಿಡಿ, ಓದುವಿನ ಕಡೆಗೆ ಆಸಕ್ತಿಯನ್ನು ತೋರಿಸಿ, ವಿದ್ಯೆಯನ್ನು ಪಡೆದುಕೊಳ್ಳಿ, ಇದರಿಂದ ನೀವು ಯಶಸ್ವಿಯಾಗಬಹುದು. ನೀವು ಎಲ್ಲ ಕ್ಷೇತ್ರದಲ್ಲೂ ನಿಲ್ಲುವ ಧೈರ್ಯ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತದೆ. ಇದರಿಂದ ನೀವು ಸಮಾಜದಲ್ಲಿ ಉತ್ತಮ ಜೀವನ ನಡೆಸಬಹುದು.
-ಭರತ್ ವಾಸು ನಾಯ್ಕ
ಮಾಳಂಜಿ, ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Industrial production ಕಳೆದ ನವೆಂಬರ್‌ನಲ್ಲಿ ಹೆಚ್ಚು: ಕೇಂದ್ರ ಸರ್ಕಾರ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.