Power Prayers: ಡಿಸಿಎಂ ಟೆಂಪಲ್‌ ರನ್‌ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ

ದಲಿತ ಶಾಸಕರ ಡಿನ್ನರ್‌ ಪಾರ್ಟಿ ವಿಚಾರದ ಬಗ್ಗೆಯೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ

Team Udayavani, Jan 10, 2025, 10:38 PM IST

HDK-DKS

ಬೆಂಗಳೂರು: ಕಾಂಗ್ರೆಸ್‌ ಸರಕಾರದಲ್ಲಿ ಔತಣಕೂಟ ರಾಜಕೀಯ ಜೊತೆಗೆ ಮುಖ್ಯಮಂತ್ರಿ ಸ್ಥಾನ ಅಧಿಕಾರ ಹಂಚಿಕೆ ವಿಚಾರವಾಗಿ ಸಿದ್ದರಾಮಯ್ಯ ಬಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಬಣದ ನಡುವೆ ತಿಕ್ಕಾಟ ತಾರಕಕ್ಕೆ ಏರಿರುವ ನಡುವೆ ವಿಪಕ್ಷದ ನಾಯಕರು ಪ್ರತಿಕ್ರಿಯಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ತಮಿಳುನಾಡಿನ ಕುಂಭಕೋಣಂನಲ್ಲಿ ಪ್ರತ್ಯಂಗಿರಾ ದೇವಿಗೆ ವಿಶೇಷ ಪೂಜೆ, ಕಾಂಚೀಪುರಂನಲ್ಲಿ ಗೋವರ್ಧನ ಹೋಮ ನೆರವೇರಿಸಿದ ಕುರಿತು ತೀವ್ರ ರಾಜಕೀಯ ಚರ್ಚೆಗೂ ಕಾರಣವಾಗಿದೆ.

ಈ ಬಗ್ಗೆ ಕೇಂದ್ರ ಬೃಹತ್‌ ಕೈಗಾರಿಕಾ, ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಡಿ.ಕೆ.ಶಿವಕುಮಾರ್‌ ತಮಿಳುನಾಡಿನಲ್ಲಿ ಶತ್ರು ಸಂಹಾರ ಪೂಜೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲರನ್ನೂ ದೇವರೇ ಕಾಪಾಡಬೇಕು. ಅಧಿಕಾರ ಬೇಕು, ಶತ್ರುಗಳ ಸಂಹಾರಕ್ಕಾಗಿ ಎಂದು ದೇವರ ಮೊರೆ ಹೋಗಿದ್ದು ಸಾಮಾನ್ಯ. ಆದರೆ, ಎಲ್ಲೋ  ಶತ್ರುನಾಶಕ್ಕೆ ಹೋಗುವುದು ನನಗೆ ಗೊತ್ತಿಲ್ಲ ಎಂದರು.

ಕ್ಯಾಬಿನೆಟ್‌ ಇರುವುದು ಯಾಕೆ?

ದಲಿತ ಶಾಸಕರ ಡಿನ್ನರ್‌ ಪಾರ್ಟಿ ವಿಚಾರದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿಲ್ಲ, ಅದಕ್ಕೆ ಸಭೆ ಮಾಡುತ್ತಿದ್ದೇವೆ ಎಂದು ಅವರಲ್ಲಿ ಕೆಲವರು ಹೇಳಿದ್ದಾರೆ. ಡಿನ್ನರ್‌ ಪಾರ್ಟಿಯಲ್ಲಿ ವಿದ್ಯಾರ್ಥಿಗಳ ಸ್ಕಾಲರ್‌ ಶಿಪ್‌ ಬಗ್ಗೆ ಚರ್ಚೆ ಮಾಡುವುದಾದರೆ ಕ್ಯಾಬಿನೆಟ್‌ ಇರುವುದು ಯಾಕೆ? ವಿದ್ಯಾರ್ಥಿ ವೇತನ ಸಿಗದಿದ್ದರೆ ಕ್ಯಾಬಿನೆಟ್‌ ನಲ್ಲಿ ಕೂತು ಚರ್ಚೆ ಮಾಡಬೇಕಾ? ಅಥವಾ ಡಿನ್ನರ್‌ ಪಾರ್ಟಿಯಲ್ಲಿ ಚರ್ಚೆ ಮಾಡಬೇಕಾ? ಎಂದು ಟೀಕಿಸಿದರು.

ತೊಂದರೆ ಕೊಡುವವರಿಂದ ರಕ್ಷಣೆಗಾಗಿ ಹೋಮ: ಡಿ.ಕೆ.ಶಿವಕುಮಾರ್‌
ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತ್ಯುತ್ತರ ನೀಡಿ ನನಗೆ  ಯಾರು, ಯಾರು  ತೊಂದರೆ ಕೊಡುತ್ತಾರೋ ಅವರಿಂದ ನನಗೆ ರಕ್ಷಣೆ ಸಿಗಲಿ ಅಂತ ಪ್ರಾರ್ಥನೆ ಮಾಡುತ್ತಿರುತ್ತೇನೆ. ನನ್ನ ರಕ್ಷಣೆಗಾಗಿ ಹೋಮ ಮಾಡಿಸಿದ್ದೇನೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಎದುರಾಳಿ ಬಣದ ಡಿನ್ನರ್‌ ಪಾರ್ಟಿ ಬೆನ್ನಲ್ಲೇ ಹೋಮ-ಹವನ ಮಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸಮರ್ಥನೆ ಇದು.

ದೇವರ ಮೇಲೆ ನಂಬಿಕೆಯಿಟ್ಟಿರುವ ವ್ಯಕ್ತಿ ನಾನು. ನನಗೆ ಧರ್ಮ, ದೇವರು, ನಮ್ಮ ಆಚರಣೆಗಳ ಮೇಲೆ ನಂಬಿಕೆಯಿದೆ. ಇದರಲ್ಲಿ ಯಾವುದೇ ವಿಶೇಷವಿಲ್ಲ. ನಾನು ಪ್ರತೀದಿನ ದೇವರಿಗೆ ನಮಸ್ಕಾರ ಮಾಡದೆ ಮನೆಯಿಂದ ಹೊರಗೆ ಬರುವುದಿಲ್ಲ. ನಾನು ಯಾವ ಶಕ್ತಿಯನ್ನು ನಂಬುತ್ತೇನೆಯೋ ಅದರ ಮೇಲೆ ಭಕ್ತಿ, ಪ್ರೀತಿ ಇದ್ದೇ ಇರುತ್ತದೆ. ನನ್ನ ರಕ್ಷಣೆಗಾಗಿ, ಮನಸ್ಸಿನ ನೆಮ್ಮದಿ ಮತ್ತು ಸಮಾಧಾನಕ್ಕಾಗಿ ಹೋಮ ಮಾಡಿಸಿದ್ದೇನೆ. ನಾನು ಪ್ರತೀದಿನವೂ ಪೂಜೆ, ಹೋಮ, ದೇವರ ದರ್ಶನ ಮಾಡುವ ವ್ಯಕ್ತಿ ಎಂದು ಹೇಳಿದರು.

ನೀವು (ಮಾಧ್ಯಮ) ಸಹ ನನಗೆ ಬೇಕಾದಷ್ಟು ತೊಂದರೆ ಕೊಡುತ್ತಿರುತ್ತೀರಿ. ಇಲ್ಲದೆ ಇರುವ ಹೊಸ ಸುದ್ದಿಗಳನ್ನು ಸೃಷ್ಟಿ ಮಾಡುತ್ತಾ ಇರುತ್ತೀರಿ. ಅದಕ್ಕಾಗಿ ನಿಮ್ಮಿಂದಲೂ ನಮಗೆ ರಕ್ಷಣೆ ಸಿಗಲಿ ಅಂತ ಪ್ರಾರ್ಥನೆ ಮಾಡುತ್ತಿರುತ್ತೇನೆ ಎಂದು ಹೇಳಿದರು.

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Madhugiri

Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.