Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
Team Udayavani, Jan 10, 2025, 6:58 PM IST
ನವದೆಹಲಿ: “ನಾನು ಮನುಷ್ಯ, ದೇವರಲ್ಲ. ತಪ್ಪುಗಳು ಸಂಭವಿಸುತ್ತವೆ ಮತ್ತು ನಾನು ಸಹ ಅವುಗಳನ್ನು ಮಾಡಬಹುದು” ಎಂದು ಪ್ರಧಾನಿ ಮೋದಿ ಅವರು ವಾಣಿಜ್ಯೋದ್ಯಮಿ ನಿಖಿಲ್ ಕಾಮತ್ ಅವರೊಂದಿಗಿನ ಪಾಡ್‌ಕಾಸ್ಟ್ ನಲ್ಲಿ ಹೇಳಿದ್ದಾರೆ. ಈ ಕುರಿತು ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿ ಪ್ರಧಾನಿ ಡ್ಯಾಮೇಜ್ ಕಂಟ್ರೋಲ್ ಮಾಡುತ್ತಿದ್ದಾರೆ ಎಂದಿದೆ.
ಮಾಧ್ಯಮ ರಂಗದ ಚೊಚ್ಚಲ ಪಾಡ್‌ಕಾಸ್ಟ್ ನಲ್ಲಿ, ಪ್ರಧಾನಿ ಮೋದಿ ಅವರು ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗೆ ಎರಡು ಗಂಟೆಗಳ ಸಂಭಾಷಣೆಯಲ್ಲಿ, ತಮ್ಮ ಬಾಲ್ಯದಿಂದ ರಾಜಕೀಯ ಪ್ರಯಾಣದವರೆಗೆ ಜೀವನದ ವಿವಿಧ ಅಂಶಗಳನ್ನು ಮನಬಿಚ್ಚಿ ಮಾತನಾಡಿದರು. ”ಹೊಸ ಅನುಭವ, ನನ್ನ ಮೊದಲ ಪಾಡ್‌ಕಾಸ್ಟ್. ಈ ಜಗತ್ತು ನನಗೆ ಸಂಪೂರ್ಣವಾಗಿ ಹೊಸದು” ಎಂದರು.
ಬಾಲ್ಯದಲ್ಲಿ ಕೊಳಕ್ಕೆ ಭೇಟಿ ನೀಡಲು ಅನುಮತಿ ನೀಡಿದ್ದಕ್ಕೆ ಪ್ರತಿಯಾಗಿ ತಮ್ಮ ಕುಟುಂಬದ ಬಟ್ಟೆಗಳನ್ನು ಒಗೆದುದನ್ನು ನೆನಪಿಸಿಕೊಂಡರು.
ಗುಜರಾತಿನ ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರಾವಧಿಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, “ನಾನು ಮುಖ್ಯಮಂತ್ರಿಯಾದಾಗ, ನಾನು ಮೂರು ಬದ್ಧತೆಗಳನ್ನು ಇಟ್ಟುಕೊಂಡಿದ್ದೆ. ನನ್ನ ಪ್ರಯತ್ನದಲ್ಲಿ ನಾನು ಯಾವುದೇ ಕೆಲಸ ಬಾಕಿ ಬಿಡುವುದಿಲ್ಲ, ನನಗಾಗಿ ನಾನು ಏನನ್ನೂ ಮಾಡುವುದಿಲ್ಲ ಮತ್ತು ನಾನು ಮನುಷ್ಯನಾಗಿ ತಪ್ಪುಗಳನ್ನು ಮಾಡಬಹುದು, ಆದರೆ ಕೆಟ್ಟ ಉದ್ದೇಶದಿಂದ ತಪ್ಪುಗಳನ್ನು ಮಾಡುವುದಿಲ್ಲ. ಈ ತತ್ವಗಳು ನನ್ನ ಜೀವನದ ಮಂತ್ರವಾಗಿದೆ” ಎಂದು ಮೋದಿ ಹೇಳಿದ್ದಾರೆ.
ಡ್ಯಾಮೇಜ್ ಕಂಟ್ರೋಲ್
2024 ರಲ್ಲಿ ಪ್ರಧಾನಿ ಮೋದಿಯವರು ನೀಡಿದ ಭಾಷಣವನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ” ನನ್ನ ತಾಯಿ ಬದುಕಿರುವವರೆಗೂ, ನಾನು ಜೈವಿಕವಾಗಿ ಹುಟ್ಟಿದ್ದೇನೆ ಎಂದು ನಾನು ಭಾವಿಸಿದ್ದೆ. ಆಕೆಯ ನಿಧನದ ನಂತರ, ನನ್ನ ಅನುಭವಗಳನ್ನು ನೋಡಿದಾಗ, ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದುದನ್ನು ನೆನಪಿಸಿ ಟೀಕಾ ಪ್ರಹಾರ ನಡೆಸಿದರು.
ಸಾರ್ವಜನಿಕರಲ್ಲಿರುವ ಗ್ರಹಿಕೆಯನ್ನು ನಿರ್ವಹಿಸಲು ಪ್ರಧಾನಿ ಹಠಾತ್ ನಮ್ರತೆಯನ್ನು ಅಳವಡಿಸಿಕೊಂಡಿದ್ದಾರೆ. ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.