Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

‘ಮಾ ಕಿ ರಸೋಯಿ’ಯಲ್ಲಿ ಸಿಗುವ ಊಟದಲ್ಲಿ ಎಷ್ಟು ಬಗೆಗಳಿವೆ?, ʼಕುಂಭವಾಣಿ' ಎಫ್ಎಂ ರೇಡಿಯೋ ಚಾನೆಲ್‌ ಉದ್ಘಾಟಿಸಿದ ಸಿಎಂ ಯೋಗಿ ಆದಿತ್ಯನಾಥ್‌

Team Udayavani, Jan 10, 2025, 8:34 PM IST

UP-Ma-ki-rasoi

ಪ್ರಯಾಗ್‌ರಾಜ್‌ (ಉತ್ತರ ಪ್ರದೇಶ): ವಿಶ್ವದಲ್ಲೇ ಭಾರೀ ಸಂಖ್ಯೆಯಲ್ಲಿ ಸೇರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾದ ಮಹಾಕುಂಭಕ್ಕೆ ಆಗಮಿಸುವವರಿಗಾಗಿ ಕಡಿಮೆ ಮೊತ್ತದಲ್ಲಿ ಭರ್ಜರಿ ಭೋಜನ ಸಿಗುವ ಮಾ ಕಿ ರಸೋಯ್ (ಅಮ್ಮನ ಅಡುಗೆಮನೆ)ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಶುಕ್ರವಾರ ಚಾಲನೆ ನೀಡಿದರು.

ಈ ಸಮುದಾಯ ಅಡುಗೆಮನೆಯು ಸ್ವರೂಪ್ ರಾಣಿ ನೆಹರು ಆಸ್ಪತ್ರೆಯ ಕ್ಯಾಂಪಸ್‌ನಲ್ಲಿದ್ದು ನಂದಿ ಸೇವಾ ಸಂಸ್ಥಾನ ನಿರ್ವಹಿಸಲಿದೆ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಜನರನ್ನು ಬೆಂಬಲಿಸಲು ಉತ್ತರ ಪ್ರದೇಶ ಸರ್ಕಾರ ಈ ಯೋಜನೆಯ ಘೋಷಿಸಿದೆ.  ನಂದಿ ಸೇವಾ ಸಂಸ್ಥಾನದ ಪ್ರಕಾರ, ತಮ್ಮ ಎಸ್‌ಆರ್‌ಎನ್ ಆಸ್ಪತ್ರೆಗೆ ಬರುವವರಿಗೆ ಮತ್ತು ಆಹಾರದ ಬಗ್ಗೆ ಚಿಂತೆ ಮಾಡುವವರಿಗೆ ‘ಮಾ ಕಿ ರಸೋಯಿ’ ಉಪಯುಕ್ತವಾಗಿದೆ.  ಈ ಮಾ ಕಿ ರಸೋಯ್‌ಯಲ್ಲಿ ಸಿಗುವ ಊಟದಲ್ಲಿ  ದಾಲ್, ನಾಲ್ಕು ರೊಟ್ಟಿ, ತರಕಾರಿ ಪಲ್ಯಗಳು, ಅನ್ನ, ಸಲಾಡ್ ಮತ್ತು ಸಿಹಿತಿಂಡಿ ಒಳಗೊಂಡಿದೆ ಇದಿಷ್ಟು ಬಗೆಗಳಿಗೆ ವಿಧಿಸಿರುವ ಮೊತ್ತ ಮಾತ್ರ ಕೇವಲ 9 ರೂಪಾಯಿ.

ಕಡಿಮೆ ಹಣದಲ್ಲಿ ಪೌಷ್ಟಿಕ ಆಹಾರ
ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ ಸಿಎಂ ಯೋಗಿ ಆಸ್ಪತ್ರೆಯ ಸೌಲಭ್ಯಗಳನ್ನು ಪರಿಶೀಲಿಸಿದರು ಮತ್ತು ಉಪಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಹಾಜರಿದ್ದವರಿಗೆ ವೈಯಕ್ತಿಕವಾಗಿ ಆಹಾರ ನೀಡಿದರು. ಮಹಾಕುಂಭದ ಸಮಯದಲ್ಲಿ ಸಂದರ್ಶಕರು, ನಿವಾಸಿಗಳಿಗೆ ಕೈಗೆಟುಕುವ ಮತ್ತು ಪೌಷ್ಟಿಕಾಂಶದ ಊಟವನ್ನು ಖಾತ್ರಿಪಡಿಸುವಲ್ಲಿ ಈ ಯೋಜನೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಉದ್ಘಾಟನೆಯ ನಂತರ, ಕೈಗಾರಿಕಾ ಅಭಿವೃದ್ಧಿ ಸಚಿವ ನಂದಗೋಪಾಲ್ ಗುಪ್ತಾ ಅವರು ಸಿಎಂಗೆ ಅಲ್ಲಿ ಆಹಾರದ ಗುಣಮಟ್ಟ, ನೈರ್ಮಲ್ಯ ಮಾನದಂಡಗಳು ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.

ಮಾ ಕಿ ರಸೋಯಿ, ಸಂಪೂರ್ಣ ಹವಾನಿಯಂತ್ರಿತ (ಎಸಿ), ಆರೋಗ್ಯಕರ ಮತ್ತು ಆಧುನಿಕ ರೆಸ್ಟೋರೆಂಟ್, ಎಸ್‌ಆರ್‌ಎನ್ ಕ್ಯಾಂಪಸ್‌ನಲ್ಲಿ ಸುಮಾರು 2000 ಚದರ ಅಡಿ ಪ್ರದೇಶದಲ್ಲಿ ನಂದಿ ಸೇವಾ ಸಂಸ್ಥಾನದಿಂದ ಸಿದ್ಧಪಡಿಸಲಾಗಿದೆ. ಏಕಕಾಲದಲ್ಲಿ ಸುಮಾರು 150 ಮಂದಿ ಒಟ್ಟಿಗೆ ಕುಳಿತು ಊಟ ಮಾಡಲು ಸಾಧ್ಯವಾಗುತ್ತದೆ.

ಮಹಾಕುಂಭಮೇಳ ಮಾಹಿತಿ ಪ್ರಸಾರಕ್ಕಾಗಿ “ಕುಂಭವಾಣಿ’ ಎಫ್ಎಂ 
ಮಹಾಕುಂಭಮೇಳ ಕಾರ್ಯಕ್ರಮದ ಮಾಹಿತಿ ಪ್ರಸಾರ ಮಾಡುವ ಸಲುವಾಗಿ ಪ್ರಸಾರ ಭಾರತಿ “ಕುಂಭವಾಣಿ” ಎಂಬ ಎಫ್ಎಂ ರೇಡಿಯೋ ಚಾನೆಲ್‌ನ್ನು  ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಕುಂಭವಾಣಿಯು ಪ್ರತಿ ಹಳ್ಳಿಗಳಿಗೂ ತಲುಪಿ ಜನರಿಗೆ ಮಾಹಿತಿ ನೀಡಲಿದೆ. ಮೇಳದಲ್ಲಿ ಭಾಗಿಯಾಗಲು ಸಾಧ್ಯವಾಗದವರಿಗೆ ಮಾಹಿತಿ ನೀಡುವ ಮೂಲಕ ಜನಪ್ರಿಯತೆ ಗಳಿಸಲಿದೆ’ ಎಂದು ಹೇಳಿದ್ದಾರೆ. ಒಟಿಟಿ ಆಧರಿತವಾಗಿರುವ ಈ ಚಾನೆಲ್‌ ಜ.10ರಿಂದ ಜ.26ರವರೆಗೆ ಲಭ್ಯವಿರಲಿದೆ.

ಟಾಪ್ ನ್ಯೂಸ್

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rahul-gandhi

Savarkar ಅವಮಾನ ಕೇಸ್‌: ರಾಹುಲ್‌ಗೆ ಪುಣೆ ಕೋರ್ಟ್‌ ಬೇಲ್‌

MONEY (2)

Tax share: ರಾಜ್ಯಕ್ಕೆ ಕೇಂದ್ರದಿಂದ 6,310 ಕೋ.ರೂ. ಹಂಚಿಕೆ

Exam 3

2024ರಲ್ಲಿ ಕಾಲೇಜಿಂದ ಹೊರಗುಳಿದವರಿಗೆ ಜೆಇಇ ಪರೀಕ್ಷೆಗೆ ಸಮ್ಮತಿ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

1-wqewqeqwe

Cardiac arrest: ಗುಜರಾತ್‌ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಸಾ*ವು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.