Mangaluru ಕಂಬಳಕ್ಕೆ ನೆರವು: ಇಂದು ಸಿಎಂಗೆ ಅಹವಾಲು
Team Udayavani, Jan 11, 2025, 6:41 AM IST
ಮಂಗಳೂರು: ನರಿಂಗಾನ ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿರುವ ಹಿನ್ನೆಲೆಯಲ್ಲಿ ಕಂಬಳಾಭಿಮಾನಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಕಂಬಳ ಸಮಿತಿಯಿಂದ ಸಿಎಂ ಅವರಿಗೆ ಶನಿವಾರ ಅಹವಾಲು ಸಲ್ಲಿಸಲು ತೀರ್ಮಾನಿಸಲಾಗಿದೆ.
ಕಂಬಳಕ್ಕೆ ಸಹಾಯಧನ ಪ್ರಾಯೋಜಕತ್ವ ಶೀಘ್ರ ಬಿಡುಗಡೆ ಮಾಡಬೇಕು ಎಂದು ಕಂಬಳ ಸಮಿತಿ ಸಿಎಂ ಅವರಿಗೆ ಮನವಿ ಸಲ್ಲಿಸಲಿದೆ. “ಉದಯವಾಣಿ’ ಜತೆಗೆ ಮಾತನಾಡಿದ ಸಮಿತಿ ಅಧ್ಯಕ್ಷ ದೇವೀಪ್ರಸಾದ್ ಶೆಟ್ಟಿ, ಪಿಲಿಕುಳ ನಿಸರ್ಗಧಾಮದಲ್ಲಿ ಕಂಬಳ ಭವನ ನಿರ್ಮಾಣಕ್ಕೆ 2 ಎಕ್ರೆ ಜಾಗ ಗುರುತಿಸಿ ಕಂಬಳ ಮ್ಯೂಸಿಯಂ ಮಾಡಬೇಕು.
ಕಂಬಳ ರಾಜ್ಯ ಅಸೋಸಿಯೇಶನ್‌ಗೆ ಮನವಿ ಸಲ್ಲಿಸಿದ್ದು, ಕ್ರೀಡಾ ಇಲಾಖೆ ಮಾನ್ಯತೆ ನೀಡುವಂತೆ ಶಿಫಾರಸು ಮಾಡಬೇಕು ಎಂಬ ಮನವಿಯನ್ನು ಸಿಎಂ ಗಮನ ಸೆಳೆಯಲಾಗುವುದು ಎಂದರು.
ಇಂದು ನರಿಂಗಾನ ಕಂಬಳ: ಸಿಎಂ ಭಾಗಿ
ಮಂಗಳೂರು: ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ನೇತೃತ್ವದ ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ನರಿಂಗಾನ ಗ್ರಾ.ಪಂ. ಸಹಕಾರದಲ್ಲಿ ನರಿಂಗಾನದ ಮೋರ್ಲ- ಬೋಳದಲ್ಲಿ “ಲವ-ಕುಶ’ ಜೋಡುಕರೆ ನರಿಂಗಾನ ಕಂಬಳ ಜ. 11ರಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ.
ಸಿಎಂ ಅವರು ಆ ದಿನ ಸಂಜೆ 5ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು ಸಂಜೆ 6ಕ್ಕೆ ಮಂಜನಾಡಿ ತಲುಪಿ 6.15ಕ್ಕೆ ನರಿಂಗಾನ ಕಂಬಳ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ
ವಿಶಿಷ್ಟ ವಿಚಾರ ಚಿಂತನ ಮಂಥನ: ಮಂಗಳೂರು ಲಿಟ್‌ಫೆಸ್ಟ್ ಇಂದಿನಿಂದ
Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ
ಮೂರು ದಿನವಾದರೂ ದಾಖಲಾಗದ ಎಫ್‌ಐಆರ್ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.