Naxal Surrender: ನಕ್ಸಲ್ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ?
ಶರಣಾಗತಿ ಪ್ರಕ್ರಿಯೆ ಎಂದರೆ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕಲ್ಲವೇ?
Team Udayavani, Jan 11, 2025, 7:10 AM IST
ಬೆಂಗಳೂರು: ನಕ್ಸಲ್ ಶರಣಾಗತಿ ವಿಚಾರದಲ್ಲಿ ಪ್ರಶ್ನೆಗಳಿವೆ. ಪ್ರಶ್ನಿಸುತ್ತೇವೆ. ಉತ್ತರಿಸಬೇಕಾದವರಿಗೆ ಉತ್ತರದಾಯಿತ್ವ ಇದೆ ಎಂದು ಭಾವಿಸಿದ್ದೇನೆ ಎಂದಿರುವ ಮಾಜಿ ಸಚಿವ ವಿ.ಸುನೀಲ್ ಕುಮಾರ್, ರಾಜ್ಯ ಸರಕಾರಕ್ಕೆ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.
ಟ್ವೀಟ್ ಮಾಡಿರುವ ಅವರು, ನಕ್ಸಲ್ ಶರಣಾಗತಿ ಡ್ರಾಮಾ ಇಷ್ಟು ಕ್ಷಿಪ್ರವಾಗಿ ಅಂತ್ಯ ಕಂಡಿದ್ದು ಹೇಗೆ? ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಸ್ವಯಂಪ್ರೇರಿತವಾಗಿ ಕೊಟ್ಟ ಕರೆಗೆ ನಕ್ಸಲರು ಇಷ್ಟು ವೇಗವಾಗಿ ಸ್ಪಂದಿಸುತ್ತಾರೆಂದರೆ ಇದೊಂದು ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ? ನಕ್ಸಲ್ ವಿಕ್ರಮ್ ಗೌಡ ಎನ್ಕೌಂಟರ್ ಬಗ್ಗೆ ಈಗ ಅನುಮಾನ ಹೆಚ್ಚಿದೆ. ಆತ ಶರಣಾಗತಿ ಪ್ಯಾಕೇಜ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ. ಹೀಗಾಗಿ ತನಿಖೆ ಅನಿವಾರ್ಯ ಎಂದು ಆಗ್ರಹಿಸಿದ್ದಾರೆ.
ನಕ್ಸಲರೇನೋ ಶರಣಾದರು, ಆದರೆ ಅವರ ಬಳಿ ಇದ್ದ ಬಂದೂಕುಗಳು ಏನಾದವು? ಶರಣಾಗತಿ ಪ್ರಕ್ರಿಯೆ ಎಂದರೆ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕಲ್ಲವೇ? ಇಲ್ಲೇಕೆ ಈ ನಿಯಮ ಪಾಲಿಸಿಲ್ಲ? ಹಾಗಾದರೆ ಈ ಶಸ್ತ್ರಾಸ್ತ್ರಗಳನ್ನು ಯಾರಿಗೆ ನೀಡಲಾಗಿದೆ? ಹಾಗಾದರೆ ಯಾವ ನಗರ ನಕ್ಸಲರ ಮನೆಯಲ್ಲಿ ಈ ಬಂದೂಕನ್ನು ಗುಬ್ಬಿಗೂಡು ಕಟ್ಟುವುದಕ್ಕೆ ಇಟ್ಟಿದ್ದೀರಿ? ಎಂದು ಸುನಿಲ್ ಪ್ರಶ್ನಿಸಿದರು.
ವಿಕ್ರಮ್ಗೌಡ ಎನ್ಕೌಂಟರ್ ಮೇಲೂ ಶಂಕೆ
ವಿಕ್ರಮ್ ಗೌಡನ ಎನ್ಕೌಂಟರ್ ಮೇಲೂ ಶಂಕೆ ಇದೆ. ಶರಣಾಗತಿ ಪ್ರಹಸನದ ರೂವಾರಿಗಳೇ ವಿಕ್ರಮ್ ಗೌಡನ ಇರುವಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರಲೂಬಹುದಲ್ಲವೇ? ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
MUST WATCH
ಹೊಸ ಸೇರ್ಪಡೆ
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.