New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!

ಶಿಕಾರಿಪುರದ ಕಾರು ಮೆಕ್ಯಾನಿಕ್‌ನಿಂದ ಆವಿಷ್ಕಾರ,  ಕಾರಿನ ಜಿಪಿಎಸ್‌ ಡಿವೈಸನ್ನೇ ಅಪ್‌ಡೇಟ್‌ ಮಾಡಿ ಬಳಕೆ

Team Udayavani, Jan 11, 2025, 7:35 AM IST

GPS-hori

ಶಿವಮೊಗ್ಗ: ಹೋರಿ ಹಬ್ಬ ಎಂದರೆ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಜನರ ಮೈನವಿರೇಳುತ್ತದೆ. ಹೋರಿ ಸಾಕುವುದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಲಕ್ಷ ಲಕ್ಷ ಹಣ ಕೊಟ್ಟು ಖರೀದಿ ಮಾಡುತ್ತಾರೆ. ಇಂತಹ ಹೋರಿಗಳು ಕೆಲವೊಮ್ಮೆ ಸ್ಪರ್ಧೆ ವೇಳೆ ಕಾಡುಮೇಡು ಸೇರಿಕೊಳ್ಳುತ್ತವೆ. ಲಕ್ಷ ಲಕ್ಷ ಹಣ ಕೊಟ್ಟು ತಂದವರು ಹುಡುಕಲು ಸಾವಿರಾರು ರೂ. ಖರ್ಚು ಮಾಡಬೇಕು. ಇದನ್ನೆಲ್ಲ ಪರಿಹರಿಸಲೆಂದೇ ಈಗ ಹೋರಿ ಸಾಕಣೆದಾರರು ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಅದರಂತೆ, ವಾಹನಗಳಿಗೆ ಬಳಸುತ್ತಿದ್ದ ಜಿಪಿಎಸ್‌ ಸಾಧನವನ್ನೇ ಹೋರಿಗಳಿಗೆ ಬಳಸುವಂತೆ ಅಪ್‌ಡೇಟ್‌ ಮಾಡಲಾಗಿದೆ. ಇದನ್ನು ಮಾಡಿದ್ದು ಶಿಕಾರಿಪುರದ ಕಾರು ಮೆಕ್ಯಾನಿಕ್‌ ಇದಾಯತ್‌!

ಮೆಕ್ಯಾನಿಕ್‌ ಹಾಗೂ ಆಟೋ ಮೊಬೈಲ್‌ ಎಲೆಕ್ಟ್ರಿಶಿಯನ್‌ ಆಗಿರುವ ಇದಾಯತ್‌ ಜಿಪಿಎಸ್‌ ಸಾಧನ ಅಪ್‌ಡೇಟ್‌ ಮಾಡಿ ಹೋರಿಗಳಿಗೆ ಬಳಸುವಂತೆ ಮಾಡಿದ್ದಾನೆ. 6ರಿಂದ 10 ದಿನಗಳ ಬ್ಯಾಟರಿ ಬ್ಯಾಕಪ್‌ ಹೊಂದಿರುವ ಈ ಸಾಧನವನ್ನು ಹೋರಿಯ ಕೊರಳಿಗೆ ಅಳವಡಿಸಲಾಗುತ್ತದೆ. ಹೋರಿ ಎಲ್ಲೇ ಇದ್ದರೂ ಅದನ್ನು ಜಿಪಿಎಸ್‌ ಆ್ಯಪ್‌ ಮೂಲಕ ಕಂಡುಹಿಡಿಯಬಹುದು. ಯಾವುದೇ ಒಂದೇ ಸ್ಥಳದಲ್ಲಿ ತುಂಬಾ ಹೊತ್ತು ಇರಲು ಸಾಧ್ಯವಿಲ್ಲ. ಆದ್ದರಿಂದ ನೆಟ್‌ವರ್ಕ್‌ ಇಲ್ಲದಿರುವ ಜಾಗದಲ್ಲಿ ಆತಂಕಪಡುವ ಅಗತ್ಯವಿಲ್ಲ ಎನ್ನುತ್ತಾರೆ ಇದಾಯತ್‌.

ಸಾವಿರಾರು ಜನರ ಮಧ್ಯೆ ಓಡುವ ಹೋರಿಗಳು ಯಾರ ಕೈಗೂ ಸಿಗದೆ ಕಾಡುಮೇಡು ಸೇರುತ್ತವೆ. ಪ್ರತಿ ಹೋರಿ ಹಬ್ಬದಲ್ಲೂ ಇಂತಹ ನಾಲ್ಕೈದು ಪ್ರಕರಣಗಳು ಸಿಗುತ್ತವೆ. ಇಂತಹ ಹೋರಿಗಳನ್ನು ಹುಡುಕುವುದೇ ಹರಸಾಹಸ. ಬೇರೆ ಬೇರೆ ಜಿಲ್ಲೆ, ರಾಜ್ಯದಿಂದ ಬಂದಿರುವ ಹೋರಿಗಳು ಬೇರೆ ಹೋರಿಗಳ ಜತೆ ಬೆರೆತಿರುವುದಿಲ್ಲ. ಬೇರೆ ಬೇರೆ ಊರುಗಳಲ್ಲಿ ಹೋರಿ ಹಬ್ಬ ಮಾಡುವುದರಿಂದ ಅವುಗಳು ವಾಪಸ್‌ ಬರುವುದೂ ತಿಳಿಯುವುದಿಲ್ಲ.

ಈ ರೀತಿ ತಪ್ಪಿಸಿಕೊಳ್ಳುವ ಹೋರಿಗಳ ಫೋಟೋಗಳನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಲ್ಲಿ ಹಾಕಿ ಸ್ಥಳೀಯರ ಸಹಕಾರ ಕೇಳುತ್ತಿದ್ದರು. ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಿದ್ದರು. ಹೋರಿಗಳು ಕಾಣಿಸಿಕೊಂಡಾಗ ಮಾಹಿತಿ ಸ್ಥಳೀಯರು ಹಂಚಿಕೊಳ್ಳುತ್ತಿದ್ದರು. ಈವರೆಗೆ ಈ ರೀತಿಯೇ ಹೋರಿಗಳನ್ನು ಹುಡುಕಲಾಗುತ್ತಿತ್ತು. 10ರಿಂದ 20 ಜನ ಊರೂರು ಸುತ್ತಬೇಕಿತ್ತು. ಹಗಲು-ರಾತ್ರಿ ಸುತ್ತುವುದಷ್ಟೇ ಅಲ್ಲದೆ ಊಟ, ತಿಂಡಿ ಇತರೆ ವ್ಯವಸ್ಥೆ ಮಾಡಬೇಕಿತ್ತು. ಇದರ ಮೊತ್ತವೇ ದೊಡ್ಡದಾಗುತ್ತಿತ್ತು. ಈಗ ಜಿಪಿಎಸ್‌ ತಂತ್ರಜ್ಞಾನ ದೊರೆತಿರುವುದರಿಂದ ಈ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.

ಏನಿದು ತಂತ್ರಜ್ಞಾನ?
– ಕಾರಿನಲ್ಲಿ ಬಳಸುವ ಜಿಪಿಎಸ್‌ ಡಿವೈಸ್‌ ಅಪ್‌ಡೇಟ್‌
– 6-10 ದಿನ ಬ್ಯಾಟರಿ ಬ್ಯಾಕಪ್‌ ಇರುವ ಸಾಧನ
– ಇದನ್ನು ಹೋರಿಯ ಕೊರಳಿಗೆ ಕಟ್ಟಲಾಗುತ್ತದೆ
– ಇದಕ್ಕೆ 10 ಸಾವಿರ ಎಂಎಎಚ್‌ ಬ್ಯಾಟರಿ ಬಳಕೆ
– ಹೋರಿ ಎಲ್ಲೇ ಇದ್ದರೂ ಜಿಪಿಎಸ್‌ ಆ್ಯಪ್‌ ಮೂಲಕ ಪತ್ತೆ ಸಾಧ್ಯ
– ಸದ್ಯಕ್ಕೆ 7,200 ರೂ.ಗಳಿಗೆ ಈ ಸಾಧನ ಮಾರಾಟ

 – ಶರತ್‌ ಭದ್ರಾವತಿ

ಟಾಪ್ ನ್ಯೂಸ್

ಸಿ.ಟಿ.ರವಿ

chikkamagaluru: ಹೆಬ್ಬಾಳ್ಕರ್‌ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ

Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ

Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Choo Mantar Movie Review

Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿ.ಟಿ.ರವಿ

chikkamagaluru: ಹೆಬ್ಬಾಳ್ಕರ್‌ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ

Mudhol: ಪ್ರತ್ಯೇಕ ಅಪಘಾತ ಇಬ್ಬರು ಮೃತ್ಯು..

Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

11-bng

Bengaluru:1 ಕಿ.ಮೀ. ಬೆನ್ನಟ್ಟಿ ಕಾಡುಪ್ರಾಣಿ ಬೇಟೆಗಾರರ ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು

10-bng

Bengaluru: ನಾಯಿ ಕಚ್ಚಿ 4 ವರ್ಷದ ಬಾಲಕನಿಗೆ ಗಾಯ: ಶ್ವಾನ ಮಾಲಿಕನ ವಿರುದ್ಧ ಪ್ರಕರಣ ದಾಖಲು

ಸಿ.ಟಿ.ರವಿ

chikkamagaluru: ಹೆಬ್ಬಾಳ್ಕರ್‌ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ

9-bng

Bengaluru: ಜಗಳ ಬಿಡಿಸಲು ಬಂದ ಮಾವನ ಕೊಂದ ಅಳಿಯ!

8-bng

Bengaluru: ಬಿಯರ್‌ ಬಾಟಲಿ ಕಸಿದಿದ್ದಕ್ಕೆ ಸ್ನೇಹಿತನ ಹತ್ಯೆ; 7 ಜನ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.