Police Nabs: 930 “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!

 7 ತಿಂಗಳಿಂದ ತಲೆಮರೆಸಿಕೊಂಡಿದ್ದ ಚಿರಾಗ್‌ ಕಪೂರ್‌ ಸೆರೆ

Team Udayavani, Jan 11, 2025, 7:35 AM IST

Frud

ಕೋಲ್ಕತಾ: ಪೊಲೀಸರ ಸಮವಸ್ತ್ರ ಧರಿಸಿ ವೀಡಿಯೋ ಕಾಲ್‌ ಮಾಡಿ, ಜನರನ್ನು ಬೆದರಿಸಿ ಹಣ ಸುಲಿಗೆ ಮಾಡುವ “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳಿಗೆ ಸಂಬಂಧಿಸಿದ ಸೂತ್ರಧಾರನೊಬ್ಬನನ್ನು ಕೋಲ್ಕತಾ ಪೊಲೀಸರು ಶುಕ್ರವಾರ ಮುಂಜಾನೆ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬೆಂಗಳೂರಿನ ಜೆ.ಪಿ. ನಗರದಲ್ಲಿ ವಾಸವಿದ್ದ ಚಿರಾಗ್‌ ಕಪೂರ್‌ ಅಲಿಯಾಸ್‌ ಚಿಂತಕ್‌ ರಾಜ್‌ ಎಂಬಾತನನ್ನು ಬಂಧಿಸಲಾಗಿದ್ದು, ದೇಶಾದ್ಯಂತ ದಾಖಲಾಗಿದ್ದ 930 ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳಲ್ಲಿ ಈತ ಪ್ರಮುಖ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮೂಲಕ ಪೊಲೀಸರು ಈವರೆಗೆ ಒಟ್ಟು 11 ಮಂದಿಯನ್ನು ಬಂಧಿಸಿದಂತಾಗಿದ್ದು, 930 ಪ್ರಕರಣಗಳನ್ನು ಬಗೆಹರಿಸಿದಂತಾಗಿದೆ.

ದೇಶಾದ್ಯಂತ ನಡೆದ ಸಾಕಷ್ಟು ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳ ನೇತೃತ್ವ ವಹಿಸಿದ್ದ ಚಿರಾಗ್‌ ಏಳು ತಿಂಗಳುಗಳಿಂದ ಪೊಲೀಸರ ಕಣ್ತಪ್ಪಿಸಿಕೊಂಡಿದ್ದ. ಶುಕ್ರವಾರ ಮುಂಜಾನೆ ಪೊಲೀಸರು ಚಿರಾಗ್‌ ಮನೆ ಮೇಲೆ ದಾಳಿ ಮಾಡಿ ಆತನನ್ನು ಬಂಧಿಸಿದ್ದಾರೆ. ಈ ವೇಳೆ ತಾನು ಸಾಫ್ಟ್ವೇರ್‌ ಎಂಜಿನಿಯರ್‌ ಎಂದು ಚಿರಾಗ್‌ ಹೇಳಿಕೊಂಡಿದ್ದಾನೆ. ಆತನ ಪೂರ್ವಾಪರಗಳ ಬಗ್ಗೆ ಇನ್ನಷ್ಟೇ ತನಿಖೆ ನಡೆಸಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೋಲ್ಕತಾದಲ್ಲಿ ಕೇಸು ದಾಖಲು:
2024ರ ಜೂ. 17ರಂದು ಕೋಲ್ಕತಾದಲ್ಲಿ ದೇಬಶ್ರೀ ದತ್ತಾ ಎಂಬವರು ಡಿಜಿಟಲ್‌ ಅರೆಸ್ಟ್‌ಗೆ ಒಳಗಾಗಿ 47 ಲಕ್ಷ ರೂ. ಕಳೆದುಕೊಂಡಿರುವುದಾಗಿ ಪ್ರಕರಣ ದಾಖಲಿಸಿದ್ದರು. ಅವರನ್ನಷ್ಟೇ ಅಲ್ಲದೆ ಅವರ ಕುಟುಂಬದವರನ್ನೂ ಅರೆಸ್ಟ್‌ ಮಾಡುವುದಾಗಿಯೂ ಆರೋಪಿಗಳು ಹೇಳಿದ್ದರು. ಅದರಂತೆ ದೇಬಶ್ರೀ ಆರೋಪಿಗಳು ಹೇಳಿದ್ದ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಬಳಿಕ ತಾನು ವಂಚನೆಗೆ ಒಳಗಾಗಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು.

ಸಿಸಿಟಿವಿಯಿಂದಲೇ ನಿರ್ವಹಣೆ
ಕುಳಿತಲ್ಲಿಂದಲೇ ದೇಶಾದ್ಯಂತ ವಂಚನೆಗಳನ್ನು ಎಸಗುವ ತಂಡವನ್ನು ಚಿರಾಗ್‌ ನಿರ್ವಹಿಸುತ್ತಿದ್ದ. ಆತನ ಕಚೇರಿಯಲ್ಲಿ ನಕಲಿ ಖಾತೆ ರಚನೆ, ಖಾತೆಗಳ ಹೊಸ ಮಾಹಿತಿಗಳನ್ನು ಸೃಷ್ಟಿಸಲಾಗುತ್ತಿತ್ತು. ಆ ಬಳಿಕ ಸಿದ್ಧವಾದ ಮಾಹಿತಿಗಳನ್ನು ದೇಶಾದ್ಯಂತ ಇರುವ ಸೈಬರ್‌ ವಂಚನೆಯಲ್ಲಿ ತೊಡಗಿರುವವರಿಗೆ ಮಾರಾಟ ಮಾಡಲಾಗುತ್ತಿತ್ತು. ಈ ನಕಲಿ ಖಾತೆಗಳಿಗೆ ಸೈಬರ್‌ ವಂಚಕರಿಂದ ಭಾರೀ ಬೇಡಿಕೆಯಿದೆ. ಈ ಕಚೇರಿಯ ಸಿಇಒ ಆಗಿ ಚಿರಾಗ್‌ ಕಾರ್ಯನಿರ್ವಹಿಸುತ್ತಿದ್ದ.

ಏಜೆಂಟ್‌ಗಳ ಮೂಲಕವೇ ತನ್ನ ವ್ಯವಹಾರಗಳನ್ನು ನಡೆಸುತ್ತಿದ್ದ ಚಿರಾಗ್‌ ಎಲ್ಲಿಯೂ ತನ್ನ ಹೆಜ್ಜೆಗಳ ಸುಳಿವು ಸಿಗದಂತೆ ಎಚ್ಚರ ವಹಿಸಿದ್ದ. ಸಿಸಿಟಿವಿಯ ಮೂಲಕವೇ ತನ್ನ ಕಚೇರಿಯ ಚಲನವಲನವನ್ನು ಗಮನಿಸುತ್ತಿದ್ದ. ಆತನ ಏಜೆಂಟ್‌ ಆಗಿದ್ದ ವ್ಯಕ್ತಿಯನ್ನೂ ಪೊಲೀಸರು ಕಳೆದ ಅ. 26ರಂದು ಬಂಧಿಸಿ ಚಿರಾಗ್‌ನನ್ನು ಪತ್ತೆಹಚ್ಚಿದ್ದಾರೆ. 104 ಪಾಸ್‌ಬುಕ್‌ ಅಥವಾ ಚೆಕ್‌ಬುಕ್‌ಗಳು, 61 ಮೊಬೈಲ್‌, 33 ಡೆಬಿಟ್‌ ಕಾರ್ಡ್‌, 2 ಕ್ಯುಆರ್‌ ಕೋಡ್‌ ಯಂತ್ರ, 140 ಸಿಮ್‌ ಕಾರ್ಡ್‌, 40 ಸೀಲ್‌ ಹಾಗೂ ಕೆಲವು ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಟಾಪ್ ನ್ಯೂಸ್

Cap-Brijesh-Chowta

ಗಂಜಿಮಠ ಪ್ಲಾಸ್ಟಿಕ್ ಪಾರ್ಕ್: ವಿವಾದಿತ ಭೂಮಿ ಕೈಬಿಟ್ಟು ಪರಿಷ್ಕೃತ ಯೋಜನೆ ರೂಪಿಸಿ: ಸಂಸದ

Kambala-Mud

Mudubidire: ಕಡಲಕೆರೆ ಕೋಟಿ ಚೆನ್ನಯ ಜೋಡುಕೆರೆ ಕಂಬಳಕ್ಕೆ ಚಾಲನೆ

1-gl

Mysuru; ‘ಗೃಹಲಕ್ಷ್ಮಿ’ಯಿಂದ ಶೌಚಗೃಹ ನಿರ್ಮಿಸಿದ ಮಹಿಳೆ!

1-ashwi

Sports Padma Awards ; ಶ್ರೀಜೇಶ್‌ಗೆ ಪದ್ಮಭೂಷಣ ಅಶ್ವಿ‌ನ್‌, ವಿಜಯನ್‌ಗೆ ಪದ್ಮಶ್ರೀ

Tilak-varma

IND vs ENG: ತಿಲಕ್ ವರ್ಮಾ ಹೋರಾಟದಿಂದ 2ನೇ ಟಿ-20 ಪಂದ್ಯ ಗೆದ್ದ ಭಾರತ ತಂಡ

1-deeeeeert

Ballari; ಡಾ. ಸುನೀಲ್ ಕಿಡ್ನಾಪ್ ಪ್ರಕರಣ ಸುಖಾಂತ್ಯ

1-lakshn

Belagavi; ಲಕ್ಷ್ಮೀ ಹೆಬ್ಬಾಳ್ಕರ್ ನಾಳೆ ಆಸ್ಪತ್ರೆಯಿಂದ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-anant

Padma; ಪಿಟೀಲು ವಾದಕ ಎಲ್. ಸುಬ್ರಮಣ್ಯಂ ಗೆ ಪದ್ಮ ವಿಭೂಷಣ, ಅನಂತ್ ನಾಗ್ ಗೆ ಪದ್ಮ ಭೂಷಣ

1-d-bjp

Delhi polls; ಸಂಕಲ್ಪ ಪತ್ರ ಬಿಡುಗಡೆ ಮಾಡಿದ ಬಿಜೆಪಿ: ಭರವಸೆಗಳ ಮಹಾಪೂರ

1-fant

Army Dog: ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ಜೀವ ತೆತ್ತ ‘ಫ್ಯಾಂಟಮ್’ ಗೆ ಶೌರ್ಯ ಪ್ರಶಸ್ತಿ

1-padma

Padma Award; ಕುವೈತ್‌ನ ಯೋಗಪಟು, ಟ್ರಾವೆಲ್ ಬ್ಲಾಗರ್ ದಂಪತಿಗೆ ಪದ್ಮಶ್ರೀ ಪ್ರಶಸ್ತಿ

Miracle: ಎರಡು ಬಸ್‌ಗಳ ನಡುವೆ ಸಿಲುಕಿದ ವ್ಯಕ್ತಿ… ಕೊನೆಗೆ ಏನಾಯ್ತು ನೋಡಿ

Video: ಎರಡು ಬಸ್‌ಗಳ ನಡುವೆ ಸಿಲುಕಿದ ವ್ಯಕ್ತಿ… ಕೊನೆಗೆ ಏನಾಯ್ತು ನೋಡಿ

MUST WATCH

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

ಹೊಸ ಸೇರ್ಪಡೆ

Cap-Brijesh-Chowta

ಗಂಜಿಮಠ ಪ್ಲಾಸ್ಟಿಕ್ ಪಾರ್ಕ್: ವಿವಾದಿತ ಭೂಮಿ ಕೈಬಿಟ್ಟು ಪರಿಷ್ಕೃತ ಯೋಜನೆ ರೂಪಿಸಿ: ಸಂಸದ

Kambala-Mud

Mudubidire: ಕಡಲಕೆರೆ ಕೋಟಿ ಚೆನ್ನಯ ಜೋಡುಕೆರೆ ಕಂಬಳಕ್ಕೆ ಚಾಲನೆ

1-gl

Mysuru; ‘ಗೃಹಲಕ್ಷ್ಮಿ’ಯಿಂದ ಶೌಚಗೃಹ ನಿರ್ಮಿಸಿದ ಮಹಿಳೆ!

1-ashwi

Sports Padma Awards ; ಶ್ರೀಜೇಶ್‌ಗೆ ಪದ್ಮಭೂಷಣ ಅಶ್ವಿ‌ನ್‌, ವಿಜಯನ್‌ಗೆ ಪದ್ಮಶ್ರೀ

Tilak-varma

IND vs ENG: ತಿಲಕ್ ವರ್ಮಾ ಹೋರಾಟದಿಂದ 2ನೇ ಟಿ-20 ಪಂದ್ಯ ಗೆದ್ದ ಭಾರತ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.