Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
ಸಿದ್ದರಾಮಯ್ಯ ಪರ ಸಚಿವರಾದ ರಾಜಣ್ಣ, ಎಂ.ಬಿ. ಪಾಟೀಲ್ ಕಹಳೆ
Team Udayavani, Jan 11, 2025, 7:45 AM IST
ಬೆಂಗಳೂರು: ಕಾಂಗ್ರೆಸ್‌ನ ಔತಣಕೂಟ ಸಭೆ ಮುಂದೂಡಿಕೆಯು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ತಿರುಗಿಬಿದ್ದಿದೆ. ಇದುವರೆಗೆ ಔತಣಕೂಟಕ್ಕೆ ಸೀಮಿತವಾಗಿದ್ದ ಚರ್ಚೆ ಈಗ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಅಸಮಾಧಾನವಾಗಿ ರೂಪುಗೊಳ್ಳುತ್ತಿದೆ.
ಶುಕ್ರವಾರ ಮಾತನಾಡಿದ ಸಿದ್ದರಾಮಯ್ಯ ಆಪ್ತ ಸಚಿವರಾದ ಕೆ.ಎನ್. ರಾಜಣ್ಣ ಹಾಗೂ ಎಂ.ಬಿ. ಪಾಟೀಲ್, “ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿರುವುದು ಖಚಿತ’ ಎಂದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಚಿವ ರಾಜಣ್ಣ, “ಈಗ ಮಧ್ಯಾಂತರದಲ್ಲಿ ಏಕೆ ಸಿಎಂ ಆಗುತ್ತೀರಿ? ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಪೂರ್ಣ ಐದು ವರ್ಷದವರೆಗೆ ಸಿಎಂ ಆಗಿ’ ಎಂದು ಡಿ.ಕೆ. ಶಿವಕುಮಾರ್ ಅವರನ್ನು ಕೆಣಕಿದ್ದಾರೆ.
ಮುಖ್ಯಮಂತ್ರಿಯಾಗಿ ಐದು ವರ್ಷ ಸಿದ್ದರಾಮಯ್ಯ ಮುಂದುವರಿಯುವುದರಲ್ಲಿ ಅನುಮಾನವೇ ಇಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಔತಣಕೂಟ ಸಭೆ ಕುರಿತು ಮಾತನಾಡಿದ ಕೆ.ಎನ್. ರಾಜಣ್ಣ, “ಸಭೆ ಮಾಡುತ್ತೇವೆ ಅಂದಾಗ ನಿಲ್ಲಿಸಿದರೆ ಹೇಗೆ? ಬೇಸರ ಆಗಿಯೇ ಆಗುತ್ತದೆ. ಸಭೆ ಮುಂದೂಡಿಕೆಯಿಂದ ನನ್ನೊಬ್ಬನಿಗೆ ಮಾತ್ರ ಅಲ್ಲ; ಎಲ್ಲ ದಲಿತರಿಗೂ ಅಸಮಾಧಾನ ಆಗಿದೆ. ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಸುರ್ಜೇವಾಲ ನಮ್ಮ ಜತೆ ಸಭೆ ಮಾಡಬಹುದು. ಆದರೆ ಸಮಾಧಾನ ಮಾಡುವ ಅಗತ್ಯ ಇಲ್ಲ’ ಬೇಸರ ವ್ಯಕ್ತಪಡಿಸಿದರು.
ದಲಿತ ಸಚಿವರ ಸಭೆ ಅಲ್ಲ; ದಲಿತ ಮುಖಂಡರ ಸಭೆ ಕರೆಯಲಾಗಿತ್ತು. ಸಭೆ ಕರೆದ ನಾವು ದಲಿತ ವಿರೋಧಿಗಳೇ? ತಡೆ ಹಾಕಿದವರು ವಿರೋಧಿಗಳು. ದಲಿತರ ದೊಡ್ಡ ಸಮಾವೇಶ ಮಾಡಬೇಕು. ಪಕ್ಷದ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಬೇಕು ಎಂದಿತ್ತು. ಆದರೆ ರಾಜ್ಯ ಉಸ್ತುವಾರಿಗಳ ಸೂಚನೆ ಮೇರೆಗೆ ಮುಂದೂಡಲಾಯಿತು. ನಾವು ಪಕ್ಷಕ್ಕೆ ಶಕ್ತಿ ತುಂಬಲು ಸಭೆ ಕರೆದದ್ದು. ಬೇರೆ ಪಕ್ಷಗಳಿಗೆ ನೆರವಾಗಲು ಅಲ್ಲ. ತಪ್ಪು ಅರ್ಥ ಮಾಡಿಕೊಂಡು ಒತ್ತಡ ತಂದರು ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೊಂದೆಡೆ ಸಚಿವ ಎಂ.ಬಿ. ಪಾಟೀಲ್ ಅವರು ಪ್ರತಿಕ್ರಿಯಿಸಿ, “ಸಚಿವ ಜಾರಕಿಹೊಳಿ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ವಿದೇಶಿ ಪ್ರವಾಸದಲ್ಲಿ ಇದ್ದರು. ಹೀಗಾಗಿ ಅವರು ಭಾಗಿಯಾಗಿರಲಿಲ್ಲ. ಸಚಿವರು, ಶಾಸಕರು ಕೂಡಿ ಊಟ ಮಾಡುವುದರಲ್ಲಿ ತಪ್ಪಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ನಮ್ಮ ಮನೆಗೂ ಊಟಕ್ಕೆ ಬಂದಿದ್ದಾರೆ. ಪಕ್ಷವನ್ನು ಹೊರತುಪಡಿಸಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಜತೆ ನಾನೂ ಊಟ ಮಾಡುತ್ತೇನೆ. ಮಾಜಿ ಸಚಿವ ಅಶ್ವತ್ಥನಾರಾಯಣ ನಮ್ಮ ಮನೆಗೆ ಬಂದಿದ್ದರು. ಅವರೊಂದಿಗೆ ಊಟ ಮಾಡಿದ್ದೇನೆ. ಇದರಲ್ಲಿ ತಪ್ಪೇನಿದೆ? ಇದೆಲ್ಲವೂ ಮಾಧ್ಯಮಗಳ ಸೃಷ್ಟಿ’ ಎಂದರು.
ಕದ್ದು ಮುಚ್ಚಿ ಯಾರನ್ನೂ ಕರೆದಿಲ್ಲ: ಪ್ರಿಯಾಂಕ್
ಡಾ| ಪರಮೇಶ್ವರ್ ಸಮುದಾಯಗಳ ಬಗ್ಗೆ ಚರ್ಚೆ ನಡೆಸಲು ಔತಣಕೂಟಕ್ಕೆ ನೇರವಾಗಿ ಆಹ್ವಾನಿಸಿದ್ದಾರೆ. ಕದ್ದುಮುಚ್ಚಿ ಯಾರನ್ನೂ ಕರೆದಿಲ್ಲ. ಇದಕ್ಕೆ ಬೇರೆ ಅರ್ಥ ಇಲ್ಲ. ಎಲ್ಲಿ ಸಮಸ್ಯೆ ಇಲ್ಲವೋ ಅಲ್ಲಿ ಸಮಸ್ಯೆ ಹುಡುಕುವ ಪ್ರಯತ್ನ ಬಿಜೆಪಿ ಮಾಡುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.
ಶುಕ್ರವಾರ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಗಮನಕ್ಕೆ ಬಾರದೆ ಸಭೆ ನಡೆಸಿದರೆ ತಪ್ಪು. ಸುರ್ಜೆವಾಲ ಬರುವುದರಿಂದ ಔತಣಕೂಟ ಮುಂದೂಡಲಾಗಿದೆ ವಿನಾ ರದ್ದಾಗಿಲ್ಲ. ಇದಕ್ಕೆ ಡಿಕೆಶಿ ಅಥವಾ ಬೇರೆ ಇನ್ಯಾರೋ ಕಾರಣ ಅಲ್ಲ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯÒರು. ಏನೇ ಚರ್ಚೆ ಮಾಡಿದರೂ, ಅವರ ಮುಂದೆ ಹೋಗಬೇಕು ಎಂದರು.
ನನಗೆ ತೊಂದರೆ ಕೊಡುವವರಿಂದ ರಕ್ಷಣೆ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತಿರುತ್ತೇನೆ. ನನ್ನ ರಕ್ಷಣೆಗಾಗಿ ಹೋಮ ಮಾಡಿಸಿದ್ದೇನೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ನಾನು ಪ್ರತಿದಿನವೂ ಪೂಜೆ, ಹೋಮ, ದೇವರ ದರ್ಶನ ಮಾಡುವ ವ್ಯಕ್ತಿ. – ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ
ಎಲ್ಲರನ್ನೂ ದೇವರೇ ಕಾಪಾಡಬೇಕು. ಅಧಿಕಾರ ಬೇಕು ಎಂದು ದೇವರ ಮೊರೆ ಹೋದದ್ದು ಸಾಮಾನ್ಯ. ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಲ್ಲೋ ಶತ್ರುನಾಶಕ್ಕೆ ಹೋಗುವುದು ನನಗೆ ಗೊತ್ತಿಲ್ಲ. – ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
chikkamagaluru: ಹೆಬ್ಬಾಳ್ಕರ್ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ
Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
MUST WATCH
ಹೊಸ ಸೇರ್ಪಡೆ
Bengaluru: ನಾಯಿ ಕಚ್ಚಿ 4 ವರ್ಷದ ಬಾಲಕನಿಗೆ ಗಾಯ: ಶ್ವಾನ ಮಾಲಿಕನ ವಿರುದ್ಧ ಪ್ರಕರಣ ದಾಖಲು
chikkamagaluru: ಹೆಬ್ಬಾಳ್ಕರ್ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ
Bengaluru: ಜಗಳ ಬಿಡಿಸಲು ಬಂದ ಮಾವನ ಕೊಂದ ಅಳಿಯ!
Bengaluru: ಬಿಯರ್ ಬಾಟಲಿ ಕಸಿದಿದ್ದಕ್ಕೆ ಸ್ನೇಹಿತನ ಹತ್ಯೆ; 7 ಜನ ಸೆರೆ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.