Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
Team Udayavani, Jan 11, 2025, 9:58 AM IST
ಚಿಕ್ಕಮಗಳೂರು: ನಕ್ಸಲರು ತಂತ್ರಗಾರಿಕೆ ಕಾರಣಕ್ಕೆ ಶರಣಾಗಿದ್ದಾರೋ ಅಥವಾ ನಕ್ಸಲ್ ಸಿದ್ಧಾಂತದಿಂದ ಹೊರಬಂದು ಶರಣಾಗಿದ್ದಾರೋ ಎಂಬುದನ್ನು ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು. ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ರಾಜ್ಯ ಸರ್ಕಾರ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಿರುವ ಸಂಬಂಧ ಜ.11ರ ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.
ಶರಣಾಗತಿ ಹೆಸರಿನಲ್ಲಿ ಕಾರ್ಯಚಟುವಟಿಕೆ ಬಲಗೊಳಿಸಲು ಅವಕಾಶ ನೀಡಿದಂತೆ ಆಗಬಾರದು. ಅವರ ಚಲನವಲನಗಳ ಮೇಲೆ ನಿಗಾ ಇಡುವುದರ ಜತೆಗೆ ಅವರು ತನಿಖೆಗೆ ಸಹಕರಿಸಬೇಕು ಎಂದು ಹೇಳಿದರು.
ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರ ಪತ್ತೆ ಕುರಿತು ಪ್ರತಿಕ್ರಿಯಿಸಿ, ನಕ್ಸಲರು ಎಲ್ಲಿ ಕಾರ್ಯಾಚರಣೆ ಮಾಡಿದರು, ಹಣ, ಶಸ್ತ್ರಾಸ್ತ್ರ ಎಲ್ಲಿಂದ ಬಂತು. ಯಾವ ವ್ಯಕ್ತಿ, ಸಂಘಟನೆ ಸಹಾಯ ಮಾಡಿದ್ದಾರೆ. ಎಲ್ಲಾ ಮಾಹಿತಿ ಹಂಚಿಕೊಂಡರೆ ಶರಣಾಗತಿಗೆ ಅರ್ಥ ಬರುತ್ತದೆ ಎಂದು ಹೇಳಿದರು.
ನಕ್ಸಲ್ ಸಿದ್ಧಾಂತ ಸಂವಿಧಾನಕ್ಕೆ ವಿರುದ್ಧವಾದ ಸಿದ್ಧಾಂತ, ಪ್ರಜಾಪ್ರಭುತ್ವ ಮೇಲೆ ನಂಬಿಕೆ ಇಲ್ಲದ ಸಿದ್ಧಾಂತ. ಅವರಿಗೆ ಬ್ಯಾಲೆಟ್ ಮೇಲೆ ನಂಬಿಕೆ ಇಲ್ಲ, ಬುಲೆಟ್ ಮೇಲೆ ನಂಬಿಕೆ ಇದೆ ಎಂದರು.
ನಕ್ಸಲರಿಂದ ನಾಗರಿಕರು, ಪೊಲೀಸರು, ಸೈನಿಕರು ಪ್ರಾಣತ್ಯಾಗ ಮಾಡಿದ್ದಾರೆ. ಈ ಹಿನ್ನಲೆ ಪ್ಯಾಕೇಜ್ ನೀಡುವ ಮುನ್ನ ಎಲ್ಲಾ ಮಾಹಿತಿ ಕಲೆ ಹಾಕಬೇಕು. ನಕ್ಸಲ್ ಶರಣಾಗತಿ ಒಂದು ತಂತ್ರಗಾರಿಕೆ ಆಗಬಾರದು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯದಲ್ಲಿ ಬಾಣಂತಿಯರ ಸಾವು ಪ್ರಕರಣ ಹಾಗೂ ಡಿನ್ನರ್ ಪಾಲಿಟಿಕ್ಸ್ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಸರಣಿ ಬಾಣಂತಿಯರ ಸಾವು ಪ್ರಕರಣ ನಡೆಯುತ್ತಿದ್ದು ಕರ್ನಾಟಕ ಸಾವಿನ ಮನೆಯಂತಾಗಿದೆ. 2500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ. ತಜ್ಞರ ಸಮಿತಿ ರಚನೆಯಾಗಿದ್ದರೂ ಬಾಣಂತಿಯರು ಹಸುಗೂಸುಗಳ ಸಾವಿಗೆ ಕಾರಣವೇನೆಂದು ತಿಳಿದಿಲ್ಲ. ಸರ್ಕಾರ ಯಾವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಶ್ನಿಸಿದರು.
ಇಂತಹ ಸಂದರ್ಭದಲ್ಲಿ ಡಿನ್ನರ್ ಮೀಟಿಂಗ್ ಅಲ್ಲ, ಸಾವಿಗೆ ಕಾರಣವಾದ ಸಂಬಂಧ ಉನ್ನತ ಮೀಟಿಂಗ್ ಮಾಡಬೇಕಿತ್ತು. ಸಾವಿಗೆ ಕಾರಣ ಆಸ್ಪತ್ರೆಯೋ, ವೈದ್ಯರೋ, ಔಷಧಿಯೋ ಏನು ಎಂದು ತಿಳಿಯಬೇಕಿತ್ತು. ಆದರೆ, ರಾಜ್ಯ ಸರ್ಕಾರಕ್ಕೆ ಸಂವೇದನೆ ಇಲ್ಲದಂತಾಗಿದೆ. ಕಲ್ಲು ಹೃದಯ, ಹೃದಯ ಹೀನರಂತೆ ವರ್ತಿಸುತ್ತಿದ್ದಾರೆ. ಡಿನ್ನರ್ ಮೀಟಿಂಗ್, ಟೆಂಪಲ್ ರನ್ ಸ್ವಾರ್ಥಕ್ಕಾಗಿ ಮಾಡ್ತಿರೋದು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
MUST WATCH
ಹೊಸ ಸೇರ್ಪಡೆ
ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್ ಗೆ ಬಿಸಿಸಿಐ ವಿಶೇಷ ಸಂದೇಶ
Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ
Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ
Venkatesaya Namaha: ವೆಂಕಟೇಶನ ನಂಬಿ ಬಂದವರು
Hubli: ಅಮಿತ್ ಶಾ ಅಣಕು ಶವ ಸಂಸ್ಕಾರದ ಅಸ್ಥಿ ವಿಸರ್ಜಿಸಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.