Bengaluru:1 ಕಿ.ಮೀ. ಬೆನ್ನಟ್ಟಿ ಕಾಡುಪ್ರಾಣಿ ಬೇಟೆಗಾರರ ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
ರಾಮನಗರ ಬಳಿ ಕಾರ್ಯಾಚರಣೆ ; ಮೂವರ ಸೆರೆ, ಜಿಂಕೆ, ಏರ್‌ಗನ್ ಜಪ್ತಿ
Team Udayavani, Jan 11, 2025, 12:24 PM IST
ಬೆಂಗಳೂರು: ಕಾಡು ಪ್ರಾಣಿಗಳನ್ನು ಬೇಟೆ ಯಾಡುತ್ತಿದ್ದ ಮೂವರು ಆರೋಪಿಗಳನ್ನು ಸಿನಿಮೀಯ ಶೈಲಿಯಲ್ಲಿ ಚೇಸಿಂಗ್ ಮಾಡಿ ಬೆಂಗಳೂರು ಸಂಚಾರಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ರಾಮನಗರದ ಮುನಿರಾಜು (38), ಶ್ರೀನಿ ವಾಸ್ (46), ಹನುಮಂತರಾಜು (44) ಬಂಧಿತರು. ಬಂಧಿತರಿಂದ 2 ಜಿಂಕೆ, 2 ಕಾಡು ಹಂದಿ, 1 ಗನ್ ಹಾಗೂ ಏರ್‌ಗನ್, 11 ಜೀವಂತ ಗುಂಡು, 2 ಚಾಕು, ಕೊಡಲಿ, ಮಚ್ಚು, 3 ಮೊಬೈಲ್ ಜಪ್ತಿ ಮಾಡಲಾಗಿದೆ.
ಬಂಧಿತರು ಕಾಡುಪ್ರಾಣಿಗಳನ್ನು ಬೇಟೆ ಯಾಡಿ ಮಾಂಸವನ್ನು ಉದ್ಯಮಿಗಳು ನಡೆಸು ತ್ತಿ ರುವ ಪಾರ್ಟಿಗಳಿಗೆ ಪೂರೈಸುತ್ತಿ ದ್ದರು. ಕಾಡು ಪ್ರಾಣಿಗಳ ಮಾಂಸಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಗಳು ಕೃತ್ಯ ಎಸಗುತ್ತಿದ್ದ ಸಂಗತಿ ಮೇಲ್ನೋಟಕ್ಕೆ ಕಂಡು ಬಂದಿದೆ.
ರಾಮನಗರ ಜಿಲ್ಲೆಯ ಕಾಡು ಪ್ರದೇಶಗಳಲ್ಲಿ ಥಾರ್ ಜೀಪ್‌ನಲ್ಲಿ ತೆರಳಿ ಶುಕ್ರವಾರ ಕಾಡು ಪ್ರಾಣಿಗಳ ಬೇಟಿಯಾಡುತ್ತಿದ್ದ ವೇಳೆ ಆರೋಪಿಗಳ ಬಗ್ಗೆ ಅರಣ್ಯಾಧಿಕಾರಿಗಳಿಗೆ ಸುಳಿವು ಸಿಕ್ಕಿತ್ತು. ಕೂಡಲೇ ಅರಣ್ಯ ಅಧಿಕಾರಿಗಳು ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲು ಮುಂದಾಗಿದ್ದರು.
ಆ ವೇಳೆ ಥಾರ್ ಜೀಪ್‌ನಲ್ಲಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಸಿನಿಮಾ ಶೈಲಿಯಲ್ಲಿ ಸುಮಾರು 1 ಕಿ.ಮೀ.ಗೂ ಅಧಿಕ ದೂರ ಚೇಸಿಂಗ್ ಮಾಡಿದ ಅರಣ್ಯಾಧಿಕಾರಿಗಳ ತಂಡವು ರಾಮನಗರ ಜಿಲ್ಲೆಯ ಚಿಕ್ಕಕುಂಟನಹಳ್ಳಿ ಕ್ರಾಸ್ ಬಳಿ ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Podcast: ಗಾಂಧೀಜಿ ಎಂದೂ ಟೋಪಿ ಧರಿಸುತ್ತಿರಲಿಲ್ಲ, ಆದರೆ ದೇಶದಲ್ಲಿ “ಗಾಂಧಿ ಟೋಪಿ’ ಜನಜನಿತ!
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ
Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.