Bengaluru: ಕೆಂಗೇರಿಯ ಮಧು ಪೆಟ್ರೋಲ್ ಬಂಕ್ ಜಂಕ್ಷನ್ ಮೃತ್ಯುಕೂಪ
ಅರ್ಧ ಕಿ.ಮೀ. ಅಂತರ ಡೇಂಜರ್ ಸ್ಪಾಟ್ ; ಪದೇಪದೇ ವಾಹನಗಳ ಅಪಘಾತ
Team Udayavani, Jan 11, 2025, 12:40 PM IST
ಬೈಕ್ ಸವಾರರೇ ಹೆಚ್ಚು ಸಾವು
ಕೆಂಗೇರಿಯ ಮಧು ಪೆಟ್ರೋಲ್ ಬಂಕ್ ಜಂಕ್ಷನ್ ಭಾಗದಲ್ಲಿ ರಸ್ತೆ ಗುಂಡಿಗಳಿಂದಲೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಉತ್ತರಹಳ್ಳಿ ಮುಖ್ಯರಸ್ತೆ, ಮಧು ಪೆಟ್ರೋಲ್ ಬಂಕ್ ಸಮೀಪದಲ್ಲಿ ರಸ್ತೆಯಲ್ಲಿ ಪಾದಚಾರಿ, ವಾಹನ ಸವಾರರು ಜೀವ ಕಳೆದುಕೊಂಡಿದ್ದಾರೆ.
ಜಂಕ್ಷನ್ ಬಳಿ ಸರಿಯಾದ ರೋಡ್ ಮಾರ್ಕಿಂಗ್ ಇಲ್ಲ. ಬಿಎಂಟಿಸಿ ಬಸ್ ಗಳು ಬಂದು ನಿಲ್ಲುವುದರಿಂದ ಜನ ಸಂದಣಿ ಹೆಚ್ಚಾಗುತ್ತದೆ. ಅದೇ ವೇಳೆಗೆ ರಸ್ತೆ ದಾಟುವಾಗ ಅಥವಾ ರಸ್ತೆ ಗುಂಡಿಗಳು ಕಾರಣದೆ ಅತಿವೇಗವಾಗಿ ಬಂದಾಗ ಅಪಘಾತಗಳು ಸಂಭವಿಸುತ್ತವೆ.
ಪಾದಚಾರಿಗಳು ಎಲ್ಲೆಂದರಲ್ಲಿ ದಾಟುವ ವೇಳೆ ವಾಹನಗಳು ನಿಯಂತ್ರಣ ಸಿಗದೇ ಡಿಕ್ಕಿ ಹೊಡೆಯುತ್ತವೆ.
ರಸ್ತೆ ವಿಸ್ತರಿಸಿ
ಉತ್ತರಹಳ್ಳಿ ಮುಖ್ಯರಸ್ತೆಯನ್ನು ಇನ್ನಷ್ಟು ವಿಸ್ತರಿಸಬೇಕಾಗುತ್ತದೆ. ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಆಟೋ ನಿಲ್ದಾಣವನ್ನು ಬೇರೆಡೆ ಸ್ಥಳಾಂತರದ ಅನಿವಾರ್ಯತೆ ಇದೆ.
ಪ್ರಮುಖವಾಗಿ ಪದೇ ಪದೆ ಬಾಯಿ ತೆರೆಯುತ್ತಿರುವ ರಸ್ತೆ ಗುಂಡಿಗಳು. ಸಿಗ್ನಲ್‌ಗಳ ಬಳಿ ರಿಂಬ್ಲಿರ್‌ಗಳ ಅಳವಡಿಕೆ ಅಗತ್ಯವಿದೆ. ಜತೆಗೆ ಸೂಚನಾ ಫಲಕಗಳು ಅಳವಡಿಸಬೇಕು.
ಪಾದಚಾರಿಗಳು ರಸ್ತೆ ದಾಟಲು ಸ್ಕೈವಾಕ್ ನಿರ್ಮಿಸಬೇಕಿದೆ.
ಕಳೆದ 4 ವರ್ಷಗಳಿಗೆ ಹೊಲಿಸಿದರೆ 2024ರಲ್ಲಿ ಈ ಭಾಗ ದಲ್ಲಿ ರಸ್ತೆ ಅಪಘಾತ ಕಡಿಮೆಯಾಗಿದೆ. ಆಗಾಗ್ಗೆ ರಸ್ತೆ ಗುಂಡಿ ಮುಚ್ಚಲಾಗುತ್ತದೆ. ರಿಂಬ್ಲಿರ್ ಅಳವಡಿಕೆ, ಮಾರ್ಕಿಂಗ್ ಮಾಡಲಾಗುತ್ತಿದೆ. ರಸ್ತೆ ಅಪಘಾತ ಇನ್ನಷ್ಟು ನಿಯಂ ತ್ರಣಕ್ಕೆ ಪಾಳಿ ಮಾದರಿಯಲ್ಲಿ ಸಿಬ್ಬಂದಿ ಕೂಡ ನಿಯೋಜಿಸಲಾಗಿದೆ. ●ಅನಿತಾ ಬಿ.ಹದ್ದಣ್ಣನವರ್. ಡಿಸಿಪಿ, ಪಶ್ಚಿಮ ವಿಭಾಗ
ಮಾಹಿತಿ: ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ
Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.