Kannada: ಕನ್ನಡ ಎನೆ ಕುಣಿದಾಡುವುದೆನ್ನೆದೆ… ಕನ್ನಡ ಎನೆ ಕಿವಿ ನಿಮಿರುವುದು…


Team Udayavani, Jan 11, 2025, 2:24 PM IST

18-uv-fusion

ಕುವೆಂಪುರವರ ಸಾಲುಗಳು ಹೇಳುವಂತೆ ಕನ್ನಡವೆಂದರೆ ಮನಸ್ಸು ಕುಣಿದಾಡುತ್ತದೆ, ಕಿವಿಗಳು ಕನ್ನಡ ಪದಗಳನ್ನು ಕೇಳುತ್ತಲೇ ಮೈಮರೆತು ಬಿಡುತ್ತವೆ, ಅಂತಹ ಸುಂದರ, ಸರಳ ಭಾಷೆ ಕನ್ನಡ. ದಾಸರು ಶರಣರು ಕೀರ್ತನೆಗಳನ್ನು ರಚಿಸಿದ, ಕವಿ ಸರ್ವಜ್ಞರಂತಹ ಮೇರು ಸಾಹಿತಿಗಳು ಮೆಚ್ಚಿದ ಭಾಷೆ ಕನ್ನಡ. ಮಾತು ಕಲಿತು ಮೊದಲಾಡಿದ ತೊದಲು ನುಡಿಗಳು ಕನ್ನಡ, ಪುಟ್ಟ ಹೆಜ್ಜೆಗಳನಿಡುತ್ತಾ ಎಡವಿ ಬಿದ್ದಾಗ ಕೂಗಿ ಕರೆದ ಅಮ್ಮನೆಂಬ ಮೊದಲ ಪದವದು ಕನ್ನಡ. ಆದರೆ ಕನ್ನಡ ಭಾಷೆ ಭವಿಷ್ಯಕ್ಕೆ ಬೇಡವಾಯಿತೇಕೆ? ಕನ್ನಡ ಭಾಷೆಗೆ 2000 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಕಲೆ ವಾಸ್ತುಶಿಲ್ಪಗಳ ಪುರಾತನ ದಾಖಲೆಗಳಿವೆ. ಭಾಷಾ ಪಾಂಡಿತ್ಯ ಹೊಂದಿದ ಕವಿ, ದಾರ್ಶನಿಕರ ಉದಾಹರಣೆಗಳು ನಮ್ಮ ಕಣ್ಣ ಮುಂದಿದ್ದರೂ, ಭವಿಷ್ಯದ ಪೀಳಿಗೆಗೆ ಕನ್ನಡ ಮಾಧ್ಯಮ ಶಿಕ್ಷಣ ಆವಶ್ಯಕತೆ ಇಲ್ಲವೆನಿಸಿದ್ದು ವಿಷಾದನೀಯ.

ತಮ್ಮ ಮಕ್ಕಳ ಭವಿಷ್ಯ ರೂಪಿಸುವ ಸಲುವಾಗಿ, ಹೆತ್ತವರು ತಾವು ಪಟ್ಟ ಪಾಡು ಮಕ್ಕಳಿಗೆ ಬಾರದಿರಲಿ ಎಂಬ ಕಾರಣಕ್ಕಾಗಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ನಿರ್ಧರಿಸುತ್ತಾರೆ. ಅದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಮಕ್ಕಳು ಆಂಗ್ಲ ಮಾಧ್ಯಮ ಶಿಕ್ಷಣ ಪಡೆದಾಗಲೇ ಅವರ ಭವಿಷ್ಯ ಭದ್ರವಾಗಬಹುದೆಂಬ ಯೋಚನೆ ಸರಿಯೇ ? ಸರ್‌ ಎಂ. ವಿಶ್ವೇಶ್ವರಯ್ಯರಂತಹ ಗಣ್ಯ ಅಭಿಯಂತರರು, ಜ್ಞಾನಪೀಠ ಪುರಸ್ಕೃತ ಕುವೆಂಪುರಂತಹ ಸಾಧಕರು, ಓದಿ ಮೆಚ್ಚಿದ್ದು ಕನ್ನಡವನ್ನೇ ಅಲ್ಲವೇ? ಭಾಷೆಗೂ ಶಿಕ್ಷಣಕ್ಕೂ ಎಲ್ಲಿಯ ನಂಟು? ವ್ಯಾವಹಾರಿಕವಾಗಿ ವಿವಿಧ ಭಾಷೆಗಳ ಕಲಿಕೆ ಅನಿವಾರ್ಯ, ಹಾಗೆಂದು ಮಾತೃಭಾಷೆಯನ್ನು ಮೂಲೆ ಗುಂಪಾಗಿಸಿ ಅನ್ಯ ಭಾಷೆಯನ್ನೂ ಕಲಿಯುವುದು ಸಮಂಜಸವೇ?

ನವೆಂಬರ್‌ ತಿಂಗಳು ಬಂದರೆ ಸಾಕು ರಾಜಕಾರಣಿಗಳಿಂದ ಹಿಡಿದು, ಸಾರ್ವಜನಿಕರು ಕವಿಗಳು, ಶಿಕ್ಷಣ ಸಂಸ್ಥೆಗಳು ಕನ್ನಡ ಭಾಷೆಯನ್ನು ಮೆಚ್ಚಿ, ಕೊಂಡಾಡಿ ಬಿಡುತ್ತಾರೆ. ಆದರೆ ಅದರ ಅನುಷ್ಠಾನ ಮತ್ತು ಅಳವಡಿಕೆ ಮಾಡಿಕೊಳ್ಳುವಲ್ಲಿ ವಿಫ‌ಲವಾಗಿ ಬಿಡುತ್ತಾರೆ. ನಮ್ಮ ಸುತ್ತಮುತ್ತಲಿನ ವಾತಾವರಣವನ್ನೇ ನೋಡುವುದಾದರೆ ಹೆಚ್ಚಿನ ಮಕ್ಕಳಿಗೆ ಕನ್ನಡ ಬರೆಯಲೂ ಬರುವುದಿಲ್ಲ, ಅದಕ್ಕೆ ಕೆಲವು ಶಿಕ್ಷಣ ಸಂಸ್ಥೆಗಳು ಪ್ರಾಮುಖ್ಯತೆ ಕೂಡ ನೀಡುತ್ತಿಲ್ಲ, ಕರುನಾಡಿನಲ್ಲಿ ಕನ್ನಡ ಆವಶ್ಯಕವಲ್ಲವೆನಿಸಿದರೆ ಅದಕ್ಕಿಂತಲೂ ಅಪಮಾನ ಮತ್ತೂಂದಿಲ್ಲ.

ಆದರೆ ಈ ಬಗೆಗೆ ಪೋಷಕರನ್ನೇ ದೂರುವುದು ತರವಲ್ಲ, ಏಕೆಂದರೆ ವೃತ್ತಿ ಬದುಕು ಕಟ್ಟಿಕೊಳ್ಳುವಾಗ ಅವರಿಗಾದ ಕೆಲ ಕಹಿ ಅನುಭವಗಳಿಂದ, ಆಂಗ್ಲಮಾಧ್ಯಮ ಬಹಳ ಮುಖ್ಯವೆನಿಸುತ್ತದೆ. ಪ್ರಾದೇಶಿಕ ಭಾಷೆಗಳು ಉದ್ಯೋಗದಲ್ಲಿ ಕಡ್ಡಾಯವಾದಾಗ ಮಾತ್ರ, ಭಾಷೆಯ ಉಳಿವು ಸಾಧ್ಯ. ಉತ್ತರ ಭಾರತದಲ್ಲಿ (ಹಿಂದಿ) ಮತ್ತು ಕೇರಳದಂತಹ (ಮಲಯಾಳಂ ) ರಾಜ್ಯಗಳಲ್ಲಿ ತಮ್ಮ ಮಾತೃ ಭಾಷೆಗೆ ವಿಶೇಷ ಗೌರವ ಇದೆ. ಅವರೂ ಎಲ್ಲಿಯೇ ನೆಲೆಸಿದ್ದರೂ, ತಮ್ಮ ಭಾಷೆಗೆ ಮಾನ್ಯತೆ ನೀಡುತ್ತಾರೆ, ಅಲ್ಲಿಗೆ ಬಂದ ವಲಸಿಗರೂ ಆ ಭಾಷೆಯನ್ನು ಕಲಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಕನ್ನಡ ಕಡ್ಡಾಯವಾಗಿ ಕಲಿಯಬೇಕೆಂಬ ಒತ್ತಾಯ ಅಥವಾ ಅವಶ್ಯಕತೆ ಅನ್ಯ ರಾಜ್ಯದ ವಲಸಿಗರಿಗಿಲ್ಲ.

ನಮ್ಮ ಭಾಷೆಯ ಬಗೆಗೆ ಗೌರವ ಇರಬೇಕು, ಅನ್ಯ ಭಾಷೆಯ ಕಲಿಕೆಯಲ್ಲಿ ಆಸಕ್ತಿ ಇರಬೇಕು. ಆದರೆ ಇತ್ತೀಚೆಗೆ ಮಾತೃಭಾಷೆ ಎನ್ನುವುದು ಮನೆಗೆ, ಕೆಲವೊಮ್ಮೆ ಅಲ್ಲಿಯೂ ತನ್ನ ಅಸ್ಥಿತ್ವ ಕಳೆದುಕೊಂಡಿದೆ. ಕನ್ನಡ ನಾಡು – ನುಡಿಯನ್ನು ಮೆಚ್ಚಿ ಬರೆಯುವ ಹಲವು ಲೇಖಕರ, ಬರಹಗಳನ್ನು ಓದಲು ಈಗ ಓದುಗರೆ ಇಲ್ಲವಾಗಿದೆ. ಏಕೆಂದರೆ ಅದರ ಬಗೆಗೆ ಒಲವು ಕಡಿಮೆಯಾಗುತ್ತಿದೆ. ಹಲವು ಸ್ಪರ್ಧೆಗಳ ಮೂಲಕ ವಾಹಿನಿಗಳು, ನಿಯತ ಕಾಲಿಕ ಪತ್ರಿಕೆಗಳು ಉದಯೋನ್ಮುಖ ಲೇಖಕರನ್ನು ಪ್ರೋತ್ಸಾಹಿಸಿ ಬೆಂಬಲಿಸುತ್ತಿದ್ದರೂ, ಓದುಗರಿಗೆ ಆಸಕ್ತಿ ಇಲ್ಲವಾದರೆ ಬರಹಗಳಿಗೆ ಯಾವ ಸಾರ್ಥಕತೆಯೂ ಇಲ್ಲಾಗುತ್ತದೆ.

ಭಾಷೆಯ ಅಳಿವು – ಉಳಿವು ನಮ್ಮಿಂದಲೇ ಆಗಬೇಕೇ ಹೊರತೂ ಅಕ್ಕ-ಪಕ್ಕದವರಿಂದ ಅಲ್ಲ. ನಮ್ಮ ಮಕ್ಕಳಿಗೆ ಕನ್ನಡದ ಬಗೆಗೆ ಒಲವು ಮೂಡಿಸುವುದು ನಮ್ಮ ಕರ್ತವ್ಯ, ಕನ್ನಡ ಪುಸ್ತಕಗಳನ್ನು ಕೊಂಡುಕೊಳ್ಳುವ ಮೂಲಕ ಕನ್ನಡ ಲೇಖನವನ್ನು ಪ್ರೋತ್ಸಾಹಿಸುತ್ತಾ, ಕನ್ನಡ ದಿನ ಪತ್ರಿಕೆಗಳನ್ನು ಹೆಚ್ಚು-ಹೆಚ್ಚು ಓದುವ ಹವ್ಯಾಸ ಮೂಡಿಸಿಕೊಳ್ಳಬೇಕು. ಇತ್ತೀಚೆಗೆ ಆಂಗ್ಲಮಾಧ್ಯಮ ಪತ್ರಿಕೆಗಳು ಕನ್ನಡಕ್ಕಿಂತಲೂ ಹೆಚ್ಚು ಮಾರಾಟವಾಗುವುದು ಬೇಸರದ ಸಂಗತಿ. ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪುರವರ ಆಶಯದಂತೆ ಕನ್ನಡದ ಕಂಪು ಪ್ರತಿ ಮನೆಯಲ್ಲಿ ಪಸರಿಸಲಿ, ಎಲ್ಲಿಯೇ ಇದ್ದರೂ ಕನ್ನಡ ಮರೆಯಾಗದಿರಲಿ, ಕನ್ನಡವೇ ಸತ್ಯ ಕನ್ನಡವೇ ನಿತ್ಯ.

-ಭಾಗ್ಯಶ್ರೀ ರತನ್‌ ಶೆಟ್ಟಿ

ತೀರ್ಥಹಳ್ಳಿ

ಟಾಪ್ ನ್ಯೂಸ್

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22-uv-fusion

TEENAGE: ಹುಚ್ಚುಕೋಡಿ ಮನಸ್ಸಿಗೂ ಕಡಿವಾಣ ಬೇಕಿದೆ

21-uv-fusion

Ashram: ಹಿರಿಯ ಜೀವಗಳ ಶುಭಾಶೀರ್ವಾದ -ಸಾರ್ಥಕ ಭಾವ

20-uv-fusion

UV Fusion: ಪ್ರತೀ ಕ್ಷಣವೂ ಜೀವಿಸುವುದನ್ನು ಕಲಿ

19-uv-fusion

Kannada: ಮಾತೃಭಾಷಾ ಹೊಳಪು

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

8

Gangolli: 9 ದಿನ ಕಳೆದರೂ ಮೀನುಗಾರನ ಸಿಗದ ಸುಳಿವು

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Manjeshwar: ಬೈಕ್‌ ಢಿಕ್ಕಿ; ಗಾಯಾಳು ಯುವಕನ ಸಾವು

Manjeshwar: ಬೈಕ್‌ ಢಿಕ್ಕಿ; ಗಾಯಾಳು ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.