Kannada: ಮಾತೃಭಾಷಾ ಹೊಳಪು
Team Udayavani, Jan 11, 2025, 2:29 PM IST
ಯಾವುದೇ ಒಂದು ಭಾಷೆಯು ಅದನ್ನಾಡುವವರ ವ್ಯಕ್ತಿತ್ವಕ್ಕೆ ಒಂದು ಮೆರುಗನ್ನು,ಶೋಭೆಯನ್ನು ನೀಡುತ್ತದೆ ಎನ್ನುವುದರಲ್ಲಿ ಸಂದೇಹವೇನೂ ಇಲ್ಲ. ವ್ಯಕ್ತಿ ಹತ್ತಾರು ಭಾಷೆಗಳನ್ನು ಕಲಿಯಬಹುದು, ಮಾತನಾಡಬಹುದು, ಕೀರ್ತಿ ಪಾತ್ರನಾಗಬಹುದು.ಆದರೆ ಆತ್ಮ ಸಂವೇದನೆಯ ಅಭಿವ್ಯಕ್ತಿಯ ಸಂದರ್ಭ ಬಂದಾಗ ಹೆಚ್ಚು ಪರಿಣಾಮಕಾರಿಯಾಗಿರುವುದು ಆತನ ನೆಲದ ಭಾಷೆ:ಮಾತೃಭಾಷೆ.ಇಂದಿನ ವ್ಯವಹಾರಿಕ ಜಗತ್ತಿನಲ್ಲಿ ಬಹುಭಾಷೆಗಳ ಅಗತ್ಯವಿದೆಯಾದರೂ ಅವೆಲ್ಲವುಗಳಲ್ಲಿ ಪರಿಣತಿ ಪಡೆಯಲು ಸಂಪರ್ಕ ಕಲ್ಪಿಸುವುದು ನಮ್ಮನೆಲದ ಭಾಷೆ, ಮಾತೃಭಾಷೆ ಎಂಬುದರಲ್ಲಿ ಎರಡು ಮಾತಿಲ್ಲ.
ದ್ರಾವಿಡ ಭಾಷೆಗಳಲ್ಲಿ ಮುಕುಟಪ್ರಾಯವಾಗಿರುವ ಕನ್ನಡವು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳ ಜತೆಗೆ ಶಾಸ್ತ್ರೀಯ ಸ್ಥಾನಮಾನ ಪಡೆದ ಮಧುರ ಭಾಷೆಯಾಗಿದೆ.
ಶ್ರೀವಿಜಯ,ಶಿವಕೋಟ್ಯಾಚಾರ್ಯ,ಪಂಪ,ಪೊನ್ನ,ರನ್ನ,ಜನ್ನ,ಬಸವಾದಿ ಶರಣರು,ದಾಸಶ್ರೇಷ್ಠರು,ಹರಿಹರ,ರಾಘವಾಂಕ,ಕುಮಾರವ್ಯಾಸರು ಪ್ರಾಚೀನ ಕವಿಗಳು,ಕುವೆಂಪು,ಬೇಂದ್ರೆ,ಕಾರಂತ,ಮಾಸ್ತಿ,ಗೋಕಾಕ್,ಅನಂತಮೂರ್ತಿ,ಕಾರ್ನಾಡರು,ಚಂದ್ರಶೇಖರ ಕಂಬಾರರು ಆಧುನಿಕ ಕವಿ ಸಾಹಿತಿಗಳು ಕನ್ನಡವನ್ನು ಸಮೃದ್ಧ ಗೊಳಿಸಿದ್ದಾರೆ.
ಇಂದಿನ ದಿನಗಳಲ್ಲಿ ಮಾತೃಭಾಷೆಯ ಬಗ್ಗೆ ಹೆಚ್ಚು ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಮಾತೃಭಾಷೆ ಪರಿಕಲ್ಪನೆಯನ್ನು ಗ್ರಹಿಸುವಲ್ಲಿ ಮತ್ತು ಅನ್ವಹಿಸುವಲ್ಲಿಯೂ ಕೆಲವೊಮ್ಮೆ ನಾವು ಎಡವಿದ್ದೇವೋ ಎಂಬ ಸಂದೇಹವೂ ಒಮ್ಮೊಮ್ಮೆ ಕಾಡದಿರದು. ಕನ್ನಡಿಗರ ಅಸ್ಥಿತ್ವದ ಪ್ರಶ್ನೆ ಬಂದಾಗ ವಿಶ್ವಮಾನವ ಪ್ರಜ್ಞೆಯಿಂದ ಬದುಕಬೇಕಾದ ನಮಗೆ ಬದುಕು ಕಟ್ಟಿಕೊಳ್ಳವ ನಿಟ್ಟಿನಲ್ಲಿ ಬಹುಭಾಷಾ ಪರಿಣತಿಯನ್ನು ಪಡೆಯಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿ ಕಂಡುಬರುತ್ತದೆ. ಕನ್ನಡಿಗರಿಗೆ ಇದೊಂದು ಮಹತ್ವದ ಸಮಯ ಹೌದು ಮತ್ತು ಇದನ್ನು ಎದುರಿಸುವ ಹಾಗೂ ಸಂಭಾಳಿಸುವ ಜಾಣ್ಮೆಯನ್ನು ನಮ್ಮದಾಗಿಸಿಕೊಳ್ಳಬೇಕಾದ ತುರ್ತು ಅಗತ್ಯವು ಇದೆಯೆನ್ನಬಹುದು.ಭಾಷೆ ಭಾವಕ್ಕೆ ಹೊಳಪು ಎಂದು ಹೇಳಬಹುದು.ಈ ನಿಟ್ಟಿನಲ್ಲಿ ಒಂದು ಮಾತು ನೆನಪಾಗುತ್ತದೆ
ಸಹಸ್ರಾರು ಕನ್ನಡಿಗರು ಫೇಸ್‌ಬುಕ್ ತಾಣ ಬಳಸುತ್ತಿದ್ದಾರೆ. ಬೇರೆ ಭಾಷೆಯೊಂದಿಗೆ ಕನ್ನಡಿಗರೂ ಮತ್ತು ಕನ್ನಡ ಭಾಷೆ ತಲೆಯೆತ್ತಿ ನಿಲ್ಲಬೇಕಾದರೆ “ತಂತ್ರಜ್ಞ ಕನ್ನಡಿಗರು’ಶ್ರಮಿಸಬೇಕು. ತಪ್ಪು ಬಳಕೆ ಮತ್ತು ದುರ್ಬಳಕೆ ಕೂಡ ಭಾಷೆಯನ್ನು ದುರ್ಬಲಗೊಳಿಸುತ್ತದೆ.ಅವೆಲ್ಲ ಸಮಸ್ಯೆಗಳಿಂದ ಹೊರಬರಲು ಪ್ರಾಥಮಿಕ ಹಂತದಲ್ಲಿ ಭಾಷೆಯನ್ನು ಕಲಿಸುವ ಹಾಗೂ ಕಲಿಯುವ ಪ್ರಕ್ರಿಯೆ ಅತ್ಯಂತ ಸಮರ್ಥವಾಗಿರಬೇಕು.ಭಾಷೆ ಭಾವದ ವಾಹಕ ಎಂದು ಒಪ್ಪಿಕೊಳ್ಳುವ ಮಂದಿ ಆ ವಾಹಕವು ತುಕ್ಕು ಹಿಡಿಯದಂತೆ ನೋಡಿಕೊಳ್ಳಬೇಕಾದ ಅಗತ್ಯವನ್ನು ಮನಗಾಣಬೇಕು.ಆಗ ಒಂದು ಭಾಷೆ ಹೊಳೆಯುತ್ತದೆ,ಬೆಳೆಯುತ್ತದೆ.
ಭಾವ ತೃಷೆಯನ್ನು ತಣಿಸಬಲ್ಲ,ಭಾವದೆಸೆಯನ್ನು ಅನುಸರಿಸಬಲ್ಲ ಭಾಷೆ ಬಾಂಧವ್ಯದ ಸೇತುವಾಗುತ್ತದೆ.ಭಾಷೆ ಬಾಳಿಗೆ ಬೆಳಕು,ಭಾವಕ್ಕೆ ಹೊಳಪು,ಅರಿವಿನ ಹರಿಕಾರ,ನಲಿವಿನ ಝೇಂಕಾರ,ಒಲವಿನ ಓಂಕಾರ ಎಂದೇ ಹೇಳಬಹುದು. “ಕನ್ನಡವಲ್ಲ ತಿಂಗಳು ನಡೆಸುವ ಗುಲ್ಲಿನ ಕಾಮನಬಿಲ್ಲು ರವಿ,ಶಶಿ,ತಾರೆಯ ನಿತ್ಯೋತ್ಸವವದು ಸರಸತಿ ವೀಣೆಯ ಸೊಲ್ಲು ಎಂಬ ನಿತ್ಯೋತ್ಸವ ಕವಿಯ ವಾಣಿಯಂತೆ ಕನ್ನಡದ ಅಸ್ಮಿತೆ ಚಿರಕಾಲ ಉಳಿಯಲಿ ಅದರ ಹೊಳಪು.ರವಿ,ಶಶಿ ತಾರೆಯಂತೆ ನಿತ್ಯೋತ್ಸವವಾಗಿರಲಿ ಎಂದು ಆಶಿಸುತ್ತಾ ಕನ್ನಡ ಭಾಷೆ ಕನ್ನಡಿಗರ ಅಸ್ಥಿತ್ವದ ಹೆಗ್ಗುರುತಾಗಲಿ.
-ಲಾವಣ್ಯ ಎನ್.
ಮೈಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಹೋರಿ ಎರಗಿ ವ್ಯಕ್ತಿಗೆ ಗಾಯ
Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!
BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್
Podcast: ಗಾಂಧೀಜಿ ಎಂದೂ ಟೋಪಿ ಧರಿಸುತ್ತಿರಲಿಲ್ಲ, ಆದರೆ ದೇಶದಲ್ಲಿ “ಗಾಂಧಿ ಟೋಪಿ’ ಜನಜನಿತ!
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.