TEENAGE: ಹುಚ್ಚುಕೋಡಿ ಮನಸ್ಸಿಗೂ ಕಡಿವಾಣ ಬೇಕಿದೆ


Team Udayavani, Jan 11, 2025, 3:50 PM IST

22-uv-fusion

ಹುಚ್ಚುಕೋಡಿ ಮನಸ್ಸು ಅದು ಹದಿನಾರರ ವಯಸ್ಸು ಈ ಹಾಡನ್ನು ಅನೇಕರು ಕೇಳಿರಬಹುದು. 16 ವಯಸ್ಸಿನಲ್ಲಿ ಮನಸ್ಸಿನಲ್ಲಿ ಆಗುವ ಅನೇಕ ಆಕರ್ಷಕ ಸಂಗತಿಗಳು ಬಹಳ ಅರ್ಥ ಗರ್ಭಿತವಾಗಿ ಈ ಭಾವಗೀತೆಯಲ್ಲಿ ತಿಳಿಸಲಾಗಿದೆ. ಇಂದು ಇಂತಹ ಅನೇಕ ಆಕರ್ಷಣೆ ಯುವ ಜನರಿಗೆ ಸರ್ವೇ ಸಾಮಾನ್ಯವಾಗಿದೆ. ಹರೆಯ, ಇದೊಂಥರಾ ಎಲ್ಲ ಒಳಿತಿಗೂ ಕೆಡುಕಿಗೂ ತೆರೆದ ವೇದಿಕೆ.

ಚಾರಿತ್ರ್ಯ ನಿರ್ಮಾಣದ ಬುನಾದಿ ಹಂತ. ಇದಕ್ಕೆ ಪುಷ್ಠಿನೀಡುವಂತೆ ಇಂದಿನ ಕಾಲೇಜು ಯುವಜನತೆಯಲ್ಲಿ ಸಾಮಾಜಿಕ ಜಾಲತಾಣಗಳ ಗೀಳು ಹಾದಿ ತಪ್ಪಿಸುತ್ತಿದೆ ಎನ್ನಬಹುದು. ಒಮ್ಮೆ ಸಾಮಾಜಿಕ ಜಾಲತಾಣದಲ್ಲಿ ಖಾತೆಯೊಂದನ್ನು ತೆರೆದರೆ ನಮ್ಮ ಸಮಯದ ಖಾತೆ ಖಾಲಿಯಾಗುವುದಂತೂ ಖಂಡಿತ. ಹಾಗೆಂದ ಮಾತ್ರಕ್ಕೆ ಎಲ್ಲವೂ ಸಾಮಾಜಿಕ ಜಾಲತಾಣದ ಪ್ರಭಾವ ಎಂದು ದೂರುವಂತಿಲ್ಲ ಅದರ ಬಳಕೆಯ ಇತಿ ಮಿತಿಗಳ ಅರಿವು ಬಹಳ ಮುಖ್ಯ.

ಯುವ ಜನರಿಗೆ ಸಾಮಾಜಿಕ ಜಾಲತಾಣದ ಅನೇಕ ವೇದಿಕೆಯನ್ನು ಸರಿಯಾಗಿ ಬಳಕೆ ಮಾಡುವ ವ್ಯವಸ್ಥೆಯ ಅರಿವಿನ ಸಮಸ್ಯೆ ಇದೆ. ಅಪರಿಚಿತರ ಬಗ್ಗೆ ಸರಿಯಾಗಿ ತಿಳಿಯದೇ ಫೋಟೋ ಕಳುಹಿಸುವುದು ಎಷ್ಟರಮಟ್ಟಿಗೆ ಸುರಕ್ಷಿತ? ಎಂಬುದನ್ನು ಯೋಚಿಸಬೇಕು.  ಸಾಮಾಜಿಕ ಜಾಲತಾಣಗಳ ನಕಲಿ ಪ್ರೀತಿ ಹಾವಳಿ ಇಂದು ಸಾಮಾನ್ಯವಾಗಿದೆ. ಹದಿನೆಂಟು ತುಂಬುವ ಮೊದಲೇ ಬೇರೊಬ್ಬರ ನಂಟಿನಲ್ಲಿರುವ ಈ ಹರೆಯದ ಮಕ್ಕಳಿಗೆ ಪ್ರಾಪಂಚಿಕ ಜ್ಞಾನ ಬೇಕಿದೆ. ಹರೆಯದಲ್ಲಿ ಆಕರ್ಷಣೆಗಳು ಸಹಜ .ಆದರೆ ಎಲ್ಲ ಆಕರ್ಷಣೆಗಳನ್ನು ನೀವು ಪ್ರೀತಿ ಎಂದು ತಿಳಿದುಕೊಂಡರೆ ಅದು ತಪ್ಪು.

ಇವೆರಡರ ಮಧ್ಯ ವ್ಯತ್ಯಾಸ ಇದೆ. ಆ ವ್ಯತ್ಯಾಸವನ್ನು ನೀವೇ ಕಂಡುಕೊಳ್ಳಬೇಕು. ತರಾತುರಿ ಇಂದ ಹೋಗಿ ನಿಮ್ಮೆಲ್ಲ ಭಾವನೆಗಳನ್ನು ಹೇಳಿಕೊಳ್ಳಬಾರದು.ಕೊಂಚ ತಡೆ ಹಿಡಿದು, ನಿಧಾನವಾಗಿಯೋಚಿಸಬೇಕು. ಪ್ರೀತಿ ಎಂಬುದು ಆಕರ್ಷಣೆಯಲ್ಲ,ವ್ಯಾಮೋಹವಲ್ಲ,ಕಾಮವೂ ಅಲ್ಲ.ಇದು ಯಾವ ಸಂಗತಿಯು ಅಲ್ಲ,ಸ್ವರೂಪವು ಅಲ್ಲ.ಇಂದಿನ ಪೀಳಿಗೆ ಇದನೆಲ್ಲ ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ. ಗಂಡು -ಹೆಣ್ಣಿನ ಪ್ರಾಕೃತಿಕ ಹೊರತುಪಡಿಸಿ ಅದೆಷ್ಟೋ ಪ್ರೀತಿ ವಿಚಾರಗಳಿವೆ.ತಾಯಿ-ಮಗನ ಪ್ರೀತಿ,ತಂದೆ-ಮತ್ತು ಮಗಳ ನಡುವಿನ ಪ್ರೀತಿ, ಕುಟುಂಬಿಕ ಪ್ರೀತಿ,ಅಣ್ಣ-ತಂಗಿಯರ ಪ್ರೀತಿ ಎಂದೆಂದೂ ಅಜರಾಮರ.

ಹದಿಹರಿಯದ ವಯಸ್ಸು ,ಎಲ್ಲವನ್ನು ಹದ ಮಾಡಿಬಿಡುವಂತ ವಯಸ್ಸು .ನಮೆಲ್ಲ ಗುರಿಗಳನ್ನು ಜೀವನವನನ್ನು ರೂಪಿಸಿಕೊಳ್ಳುವಂತಹ ವಯಸ್ಸು. ಇಂತಹ  ಅತ್ಯಮೂಲ್ಯ ಕಾಲಘಟ್ಟವನ್ನೂ,ವಿದ್ಯಾರ್ಥಿ ಜೀವನವನ್ನು ಚೆನ್ನಾಗಿ ಆದರ್ಶ ರೀತಿಯಿಂದ ರೂಪಿಸಿಕೊಳ್ಳಬೇಕು.

ಬದಲಾಗಿ ದುಡ್ಡು-ದೌಲತ್ತಿಗೆ ಬೆತ್ತಲಾಗಿ ಬಡವರಾಗಬಾರದು.ಅದ್ಯಾರ ಮೋಡಿಗೊ ಬಲಿಯಾಗಿ ನಮ್ಮ ತನವನ್ನು ಬಿಟ್ಟುಕೊಡಬಾರದು . ಯೌವ್ವನವೆಂಬ ಸುಗ್ಗಿಯ ಕಾಲ ಮತ್ತೆ ಬರಲಾರದು. ಯೌವ್ವನದಲ್ಲಿಉತ್ಸಾಹದಿಂದ ಎಲ್ಲ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ಗುರಿಗಳತ್ತ ಮುನ್ನುಗ್ಗಬೇಕೆ ಹೊರತಾಗಿ ಪ್ರೀತಿ ಎಂಬ ಆಟದಲ್ಲಿ ಸಮಯ ವ್ಯರ್ಥಮಾಡಬಾರದು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಯುವಜನತೆ ಮುಂದುವರೆಯಬೇಕಿದೆ. ಜೀವನದ ದೋಣಿ ಒಂದು ಹಂತ ತಲುಪುವ ತನಕ ದೃಷ್ಟಿ ಬದಲಿಸದೆ ನೇರ ದೃಷ್ಟಿ ಇಂದ ಸಾಗಲೇಬೇಕು.ಇಲ್ಲವಾದರೆ ಜೀವನ ಮುಳುವಾಗುವುದಂತೂ ಖಂಡಿತ.

-ತೃಪ್ತಿ ಪಟಗಾರ

ಕುಮಟಾ

ಟಾಪ್ ನ್ಯೂಸ್

1-reee

T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21-uv-fusion

Ashram: ಹಿರಿಯ ಜೀವಗಳ ಶುಭಾಶೀರ್ವಾದ -ಸಾರ್ಥಕ ಭಾವ

20-uv-fusion

UV Fusion: ಪ್ರತೀ ಕ್ಷಣವೂ ಜೀವಿಸುವುದನ್ನು ಕಲಿ

19-uv-fusion

Kannada: ಮಾತೃಭಾಷಾ ಹೊಳಪು

18-uv-fusion

Kannada: ಕನ್ನಡ ಎನೆ ಕುಣಿದಾಡುವುದೆನ್ನೆದೆ… ಕನ್ನಡ ಎನೆ ಕಿವಿ ನಿಮಿರುವುದು…

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

NZ Vs SL: 3ನೇ ಏಕದಿನ; ಲಂಕಾಕ್ಕೆ ಜಯ, 2-1ರಿಂದ ಸರಣಿ ಕಿವೀಸ್‌ ವಶ

NZ Vs SL: 3ನೇ ಏಕದಿನ; ಲಂಕಾಕ್ಕೆ ಜಯ, 2-1ರಿಂದ ಸರಣಿ ಕಿವೀಸ್‌ ವಶ

Beejadi: ಗೋ ಕಳವಿಗೆ ಯತ್ನಿಸಿದ ಆರೋಪಿಯ ಸೆರೆ

Beejadi: ಗೋ ಕಳವಿಗೆ ಯತ್ನಿಸಿದ ಆರೋಪಿಯ ಸೆರೆ

1-reee

T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ

1-chirag

Malaysia Open; ಸೆಮಿಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಸೋಲು

Kumbale: ರೈಲಿನಿಂದ ಬಿದ್ದು ಯುವಕನ ಸಾವು

Kumbale: ರೈಲಿನಿಂದ ಬಿದ್ದು ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.