VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
Team Udayavani, Jan 11, 2025, 5:26 PM IST
ವಡೋದರಾ: ಅತ್ಯಂತ ರೋಮಾಂಚನಕಾರಿಯಾಗಿ ಸಾಗಿದ ಬರೋಡಾ ವಿರುದ್ದದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆದ್ದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕೂಟದ ಸೆಮಿ ಫೈನಲ್ ಪ್ರವೇಶಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಕರ್ನಾಟಕ ಎಂಟು ವಿಕೆಟ್ ಕಳೆದುಕೊಂಡು 281 ರನ್ ಮಾಡಿದರೆ, ಬರೋಡಾ 49.5 ಓವರ್ ಗಳಲ್ಲಿ 276 ರನ್ ಗೆ ಆಲೌಟಾಯಿತು.
ಆಸೀಸ್ ಸರಣಿಯ ಬಳಿಕ ತಂಡ ಸೇರಿದ ದೇವದತ್ತ ಪಡಿಕ್ಕಲ್ ಈ ಬಾರಿಯ ಮೊದಲ ವಿಜಯ್ ಹಜಾರೆ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದರು. 99 ಎಸೆತ ಎದುರಿಸಿದ ಪಡಿಕ್ಕಲ್ 102 ರನ್ ಮಾಡಿದರು. ಅನೀಶ್ ಕೆವಿ 52 ರನ್ ಗಳಿಸಿದರು. ಇವರಿಬ್ಬರು ಎರಡನೇ ವಿಕೆಟ್ ಗೆ 133 ರನ್ ಜೊತೆಯಾಟವಾಡಿದರು. ಉಳಿದಂತೆ ಸ್ಮರಣ್ ಮತ್ತು ಕೃಷ್ಣನ್ ಶ್ರೀಜಿತ್ ತಲಾ 28 ರನ್ ಗಳಿಸಿದರು.
ಬರೋಡಾ ಪರ ಅತೀತ್ ಶೇತ್ ಮತ್ತು ರಾಜ್ ಲಿಂಬಾನಿ ತಲಾ ಮೂರು ವಿಕೆಟ್ ಕಿತ್ತರೆ, ಕೃಣಾಲ್ ಪಾಂಡ್ಯ ಮತ್ತು ಲುಕ್ಮನ್ ಮೆರಿವಾಲಾ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಬರೋಡಾ ಆರಂಭದಲ್ಲಿ ನಿನಾದ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್ ಗೆ ಜೊತೆಯಾದ ಶಾಶ್ವತ್ ರಾವತ್ ಮತ್ತು ಅತೀತ್ ಶೇತ್ 99 ರನ್ ಜೊತೆಯಾಟವಾಡಿದರು. ಶತಕ ಬಾರಿಸಿದ ಶಾಶ್ವತ್ ರಾವತ್ 104 ರನ್ ಬಾರಿಸಿದರು. ಅತೀತ್ 56 ರನ್ ಗಳಿಸಿದರು. ನಾಯಕ ಕೃಣಾಲ್ ಪಾಂಡ್ಯ 30 ರನ್ ಗಳಿಸಿದರು. ಬಳಿಕ ಬರೋಡಾ ತಂಡವು ಸತತ ವಿಕೆಟ್ ಕಳೆದುಕೊಂಡಿತು.
ಕೊನೆಯ ಓವರ್ ನಲ್ಲಿ ಬರೋಡಾ ಗೆಲುವಿಗೆ 13 ರನ್ ಅಗತ್ಯವಿತ್ತು. ಅಭಿಲಾಶ್ ಶೆಟ್ಟಿ ಕರ್ನಾಟಕ ಪರ ಬೌಲಿಂಗ್ ಮಾಡಿದರು. ಎರಡನೇ ಎಸೆತದಲ್ಲಿ ಭಾರ್ಗವ್ ಭಟ್ ರನೌಟಾದರು. ನಾಲ್ಕನೇ ಎಸೆತದಲ್ಲಿ ಲಿಂಬಾನಿ ಬೌಂಡರಿ ಬಾರಿಸಿದರು. ಐದನೇ ಎಸೆದಲ್ಲಿ ಎರಡನೇ ರನ್ ಕದಿಯುವ ಪ್ರಯತ್ನಲ್ಲಿ ರನೌಟಾದರು. ಇದರೊಂದಿಗೆ ಕರ್ನಾಟಕ ಐದು ರನ್ ಅಂತರದಿಂದ ಗೆದ್ದು ಸೆಮಿ ಫೈನಲ್ ಪ್ರವೇಶಿಸಿತು.
ಕರ್ನಾಟಕ ಪರ ವಾಸುಕಿ ಕೌಶಿಕ್, ಅಭಿಲಾಶ್ ಶೆಟ್ಟಿ, ಶ್ರೇಯಸ್ ಗೋಪಾಲ್ ಮತ್ತು ಪ್ರಸಿಧ್ ಕೃಷ್ಣ ತಲಾ ಎರಡು ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು
Travis Head: ಶ್ರೀಲಂಕಾ ಪ್ರವಾಸದಲ್ಲಿ ಟ್ರ್ಯಾವಿಸ್ ಹೆಡ್ ಓಪನಿಂಗ್?
NZ Vs SL: 3ನೇ ಏಕದಿನ; ಲಂಕಾಕ್ಕೆ ಜಯ, 2-1ರಿಂದ ಸರಣಿ ಕಿವೀಸ್ ವಶ
T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ
Malaysia Open; ಸೆಮಿಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಸೋಲು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.