Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ
ಪುಷ್ಪ 2' ವರ್ಲ್ಡ್‌ವೈಡ್ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲೂ ಹೊಸ ದಾಖಲೆ
Team Udayavani, Jan 11, 2025, 5:35 PM IST
ಹೈದರಾಬಾದ್: ‘ಪುಷ್ಪ 2’ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್‌ಗೆ ದೊಡ್ಡ ರಿಲೀಫ್ ಎಂಬಂತೆ ನ್ಯಾಯಾಲಯ ಅವರ ಜಾಮೀನಿನ ಷರತ್ತುಗಳನ್ನು ಸಡಿಲಿಸಿದೆ, ಪ್ರತಿ ಭಾನುವಾರ ತನಿಖಾಧಿಕಾರಿಯ ಮುಂದೆ ಹಾಜರಾಗುವುದರಿಂದಲೂ ವಿನಾಯಿತಿ ನೀಡಿದೆ.
ಅಗತ್ಯವಿದ್ದಾಗ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಮುಂದೆ ಹಾಜರಾಬೇಕು ಎಂಬ ಷರತ್ತಿನೊಂದಿಗೆ ವಿದೇಶಕ್ಕೆ( ನಿರ್ದಿಷ್ಟ ದೇಶಗಳಿಗೆ) ಪ್ರಯಾಣಿಸಲು ಅನುಮತಿ ನೀಡಿದೆ.
ಪ್ರತಿ ಪ್ರವಾಸಕ್ಕೆ ಪ್ರಯಾಣದ ವೇಳಾಪಟ್ಟಿಯನ್ನು SHO ಗೆ ತಿಳಿಸಲು ಮತ್ತು ಚಾರ್ಜ್ ಶೀಟ್ ಸಲ್ಲಿಸುವವರೆಗೆ ಗಮ್ಯಸ್ಥಾನದ ದೇಶದಲ್ಲಿ ಅವರು ತಂಗಿರುವ ಸ್ಥಳದ ವಿವರಗಳನ್ನು ಒದಗಿಸುವಂತೆ ನಿರ್ದೇಶಿಸಲಾಗಿದೆ.ಉಳಿದ ಜಾಮೀನು ಷರತ್ತುಗಳು ಬದಲಾಗಿಲ್ಲ ಎಂದು ನ್ಯಾಯಾಲಯ ಜನವರಿ 10 ರ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಡಿಸೆಂಬರ್ 4 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ‘ಪುಷ್ಪ 2’ ನ ಪ್ರಥಮ ಪ್ರದರ್ಶನದ ವೇಳೆ ನಡೆದ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ಸಾವನ್ನಪ್ಪಿ, ಆಕೆಯ ಎಂಟು ವರ್ಷದ ಪುತ್ರ ಗಂಭೀರವಾಗಿ ಗಾಯಗೊಂಡಿದ್ದ.
ಪ್ರಕರಣದಲ್ಲಿ ನಟ ಅಲ್ಲೂ ಅರ್ಜುನ್ ಆರೋಪಿ ನಂ. 11 ಎಂದು ಹೆಸರಿಸಲಾಗಿದೆ.
‘ಪುಷ್ಪ 2’ ಬಿಡುಗಡೆಯಾಗಿ 37 ನೇ ದಿನಕ್ಕೆ ವರ್ಲ್ಡ್‌ವೈಡ್ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲೂ ಹೊಸ ದಾಖಲೆ ಬರೆದಿದೆ. ಐದು ವಾರಗಳ ಕಾಲ ಚಿತ್ರಮಂದಿರದಲ್ಲಿ ಜನರನ್ನು ಸೂರೆಗೈದಿದ್ದ ಚಿತ್ರ ಇಲ್ಲಿಯವರೆಗೆ, ಸ್ಯಾಕ್ನಿಲ್ಕ್ ಪ್ರಕಾರ ವಿಶ್ವಾದ್ಯಂತ ಅಂದಾಜು 1718.35 ಕೋಟಿ ರೂ.ಬಾಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Sullia: ಅಸ್ವಸ್ಥ ಮಹಿಳೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.